ಸೋಮವಾರ, ಮೇ 10, 2021
21 °C

ವಂಡರ್‌ಲಾ ರೆಸಾರ್ಟ್‌ಗೆ ಹೊಂಡ್ರೆಲಾ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ ಅತಿ ದೊಡ್ಡ ಮನರಂಜನಾ ಪಾರ್ಕ್ ವಂಡರ್ ಲಾ ಬೆಂಗಳೂರಿನಲ್ಲಿ ವಂಡರ್ ಲಾ ರೆಸಾರ್ಟ್ ಪ್ರಾರಂಭಿಸುವುದರೊಂದಿಗೆ ಆತಿಥ್ಯ ಕ್ಷೇತ್ರಕ್ಕೆ ಕಾಲಿರಿಸಿದೆ. ಮನರಂಜನಾ ಪಾರ್ಕ್ ಆವರಣದಲ್ಲೇ ಇರುವ ದೇಶದ ಪ್ರಥಮ ಐಷಾರಾಮಿ ಹಾಲಿಡೇ ರೆಸಾರ್ಟ್ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ವಂಡರ್‌ಲಾ ಮನರಂಜನೆ ಪಾರ್ಕ್‌ನ ಐಷಾರಾಮದ ವಿಸ್ತರಣೆಯಾಗಿರುವ ಈ ರೆಸಾರ್ಟ್ ಸಮೃದ್ಧ ಹಸಿರು ವಾತಾವರಣದಿಂದ ಸುತ್ತುವರಿದಿದೆ.ಗ್ರಾಹಕರಿಗೆ ಅತ್ಯುತ್ತಮ ವಿಹಾರ ಹಾಗೂ ಐಷಾರಾಮಿತನದ ವಿಶಿಷ್ಟ ಅನುಭವ ನೀಡಲಿದೆ.

ವಂಡರ್‌ಲಾ ರೆಸಾರ್ಟ್ ತನ್ನ ಆವರಣದಲ್ಲೇ ಮನರಂಜನೆ ಪಾರ್ಕ್ ಹೊಂದಿರುವುದಲ್ಲದೆ, ಅತಿಥಿಗಳಿಗೆ ಇನ್ನೂ ಅನೇಕ ಮನರಂಜನೆ ಆಯ್ಕೆಗಳನ್ನೂ ಒದಗಿಸುತ್ತಿದೆ. ಈ ರೆಸಾರ್ಟ್‌ನಲ್ಲಿ ಸೋಲಾರ್ ಅಳವಡಿಸಲ್ಪಟ್ಟಿರುವ 20ಮೀ. ಬಿಸಿನೀರಿನ ಈಜುಕೊಳ, ಏರ್‌ಹಾಕಿ, ಪೂಲ್ ಟೇಬಲ್, ಫೂಸ್‌ಬಾಲ್ ಮೊದಲಾದ ಆಟಗಳನ್ನು ಆಡಲು ವಯಸ್ಕರು ಮತ್ತು ಮಕ್ಕಳಿಗೆ ಆಟದ ಆವರಣ ಹಾಗೂ ಫಿಟ್‌ನೆಸ್ ಕಾಳಜಿ  ಹೊಂದಿರುವವರಿಗಾಗಿ ಸುಸಜ್ಜಿತ ಜಿಮ್ ಸೌಕರ್ಯವಿದೆ. ಇದರ ಜತೆಗೆ ಸುಸಜ್ಜಿತ ಬಿಜಿನೆಸ್ ಬ್ಯಾಂಕ್ವೆಟ್ ಹಾಲ್‌ಗಳು, ಅತ್ಯಾಕರ್ಷಕ `ರೆಡ್ ಐಸ್  ಬಾರ್, `ವುಡ್ಸ್~  ಎಂಬ ಥೀಮ್ ರೆಸ್ಟೋರಾ, ಐಷಾರಾಮಿ ಕೊಠಡಿಗಳನ್ನು ಒಳಗೊಂಡಿದೆ. ಈ ಕೊಠಡಿಗಳಲ್ಲಿ ದಿನದ ಇಪ್ಪತ್ನಾಲ್ಕು ಗಂಟೆ ಊಟ, ಟೀ, ಕಾಫಿ ಮೇಕರ್, 32 ಎಲ್‌ಸಿಡಿ ಟಿವಿ, ಉಚಿತ ವೈ-ಫೈ ಇನ್ನೂ ಅನೇಕ ಸೌಕರ್ಯ ಒದಗಿಸಲಾಗುತ್ತದೆ. ಇಲ್ಲಿನ ವಾಸ್ತವ್ಯ ಶಾಶ್ವತವಾಗಿ ನೆನಪಿನಲ್ಲುಳಿಯುವಂತೆ ಮಾಡುತ್ತದೆ.ರಜೆ ಆಸ್ವಾದನೆಗೆಂದು ತೆರಳುವಾಗ ಗುಣಮಟ್ಟ ಹಾಗೂ ರುಚಿಯ ಆಹಾರ ನಿರೀಕ್ಷಿಸುವುದು ಸಹಜ. ವಂಡರ್‌ಲಾ ಅಂಥ ರಸಾಸ್ವಾದನೆಯ ಅತ್ಯುತ್ತಮ ಊಟೋಪಚಾರದ ಅನುಭವ ನೀಡಲಿದೆ. `ವುಡ್ಸ್~ ರೆಸಾರ್ಟ್ ವಿಶಿಷ್ಟ ಥೀಮ್ ರೆಸ್ಟೋರಾ ಆಗಿದ್ದು, ಅತಿಥಿಗಳಿಗೆ ಭಾರತೀಯ, ಚೈನೀಸ್ ಮತ್ತು ಕಾಂಟಿನೆಂಟಲ್ ಭೋಜನಗಳ ವೈವಿಧ್ಯ ಒದಗಿಸಲಿದೆ.ಗುಟುಕೇರಿಸಿ ಆನಂದಪಡಲು ಬಯಸುವವರಿಗೆ ರೆಡ್ ಐಸ್ ಬಾರ್ ಇದೆ. ಬಹಳ ಮುತುವರ್ಜಿಯಿಂದ ರೂಪಿಸಲಾಗಿರುವ ಇಲ್ಲಿನ ವಿನ್ಯಾಸ, ಒಳಾಲಂಕಾರ ಕಣ್ಣು-ಮನಸ್ಸಿಗೆ ಮುದ ನೀಡುತ್ತದೆ.ವಂಡರ್‌ಲಾ ವಾಣಿಜ್ಯ ಮತ್ತು ಕುಟುಂಬ ಸಮಾರಂಭಗಳನ್ನು ನಡೆಸುವುದಕ್ಕೂ ಸೂಕ್ತ ಸ್ಥಳಾವಕಾಶ ಹೊಂದಿದೆ. ರೆಸಾರ್ಟ್‌ನಲ್ಲಿ 4 ಬ್ಯಾಂಕ್ವೆಟ್ ಹಾಲ್‌ಗಳಿದ್ದು, ಇಲ್ಲಿನ ದೊಡ್ಡ ಹಾಲ್‌ನಲ್ಲಿ 500 ಪ್ರೇಕ್ಷಕರು ಸೇರಲು ಅವಕಾಶವಿದೆ. ಹಾಗಾಗಿ ಇದು ಎ್ಲ್ಲಲ ಬಗೆಯ ಕಾರ್ಯಕ್ರಮಗಳಿಗೆ ಸೂಕ್ತವೆನಿಸಿದೆ. ಪ್ರತ್ಯೇಕ ಬೋರ್ಡ್ ರೂಂ ಸೌಲಭ್ಯವನ್ನೂ ಹೊಂದಿರುವುದರಿಂದ ವಾಣಿಜ್ಯ ವ್ಯವಹಾರಗಳ ಒಪ್ಪಂದಗಳನ್ನು  ಹಿತಕರ ವಾತಾವರಣದಲ್ಲಿ ನಡೆಸಲು ಅವಕಾಶವಿದೆ.`ನಮ್ಮ ಹಲವು ಅತಿಥಿಗಳು ಅಪೇಕ್ಷೆ ಪಟ್ಟಂತೆ ಥೀಮ್ ಪಾರ್ಕ್‌ನಲ್ಲಿ ವಾಸ್ತವ್ಯ, ಊಟ ಮತ್ತು ಕಾನ್ಫರೆನ್ಸ್ ಆಯ್ಕೆಗಳನ್ನು ವಂಡರ್‌ಲಾ ರೆಸಾರ್ಟ್ ರೂಪದಲ್ಲಿ  ಲಭ್ಯಗೊಳಿಸುತ್ತಿದ್ದೇವೆ. ಥೀಮ್ ಪಾರ್ಕ್‌ನ ಜತೆ ಲಕ್ಷುರಿ ರೆಸಾರ್ಟ್ ಆರಂಭಿಸುವ ಇಂಥ ಪ್ರಯೋಗ ದೇಶದಲ್ಲೇ ಪ್ರಥಮ. ನಮ್ಮ ಈ ಹೊಸ ರೆಸಾರ್ಟ್‌ನ ಪರಿಸರ ಮತ್ತು ಸೇವೆ ಅತಿಥಿಗಳ ಪಾಲಿಗೆ ವಿಶಿಷ್ಟ ಅನುಭವ ನೀಡಲಿದೆ. ಇಲ್ಲಿನ ಸೇವಾ ಸೌಲಭ್ಯಗಳಿಗೆ ದೇಶದೆಲ್ಲೆಡೆಯಿಂದ ಒಟ್ಟು 120 ಸಿಬ್ಬಂದಿಯನ್ನು ಆಯ್ಕೆ ಮಾಡಿ ಅವರಿಗೆ ವಿಶೇಷ ತರಬೇತಿ ನೀಡಲಾಗಿದೆ. ಮನರಂಜನೆ ಪಾರ್ಕ್ ಹಾಗೂ ರೆಸಾರ್ಟ್ ಒಟ್ಟಿಗೇ ಇರುವುದು   ಕುಟುಂಬಕ್ಕೆ ಪರಿಪೂರ್ಣ ವಾರಾಂತ್ಯ ವಿಹಾರ ಒದಗಿಸಲಿದೆ. ಹಾಗಾಗಿ ವಂಡರ್‌ಲಾ ರೆಸಾರ್ಟ್‌ಗೆ ಬನ್ನಿ, ಎಂಜಾಯ್ ಮಾಡಿ~ ಎನ್ನುತ್ತಿದ್ದಾರೆ ವಂಡರ್‌ಲಾ ರೆಸಾರ್ಟ್‌ನ ಮ್ಯೋನೇಜಿಂಗ್ ಡೈರೆಕ್ಟರ್ ಅರುಣ್ ಕೆ ಚಿಟ್ಟಿಲಪ್ಪಿಲಿ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.