ಭಾನುವಾರ, ಏಪ್ರಿಲ್ 18, 2021
25 °C

ವಚನ ಸಾಹಿತ್ಯಕ್ಕೆ ಚನ್ನಬಸವಣ್ಣನವರ ಕೊಡುಗೆ ಅಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡಲಸಂಗಮ: `ವಚನ ಸಾಹಿತ್ಯಕ್ಕೆ ಚನ್ನಬಸವಣ್ಣನವರ ಕೊಡುಗೆ ಅಪಾರ. ಅವರ ವಚನಗಳಲ್ಲಿ ನೈತಿಕ ಮೌಲ್ಯ ಗಳು ಇರುವುದರಿಂದ ಇಂದಿನ ಯುವ ಜನಾಂಗಕ್ಕೆ ಚನ್ನಬಸವಣ್ಣನವರ ವಚನಗಳು ಅತಿ ಅವಶ್ಯ~ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಹೇಳಿದರು.ಅವರು ಕೂಡಲಸಂಗಮ ಬಸವ ಧರ್ಮ ಪೀಠದ ಶರಣ ಲೋಕದಲ್ಲಿ ನಡೆದ ಚನ್ನಬಸವಣ್ಣನವರ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಇಂದು ಸರಕಾರ ಚನ್ನಬಸವಣ್ಣ ನವರ ಸ್ಥಳಗಳಾದ ಉಳವಿ ಹಾಗೂ ಬಸವ ಕಲ್ಯಾಣವನ್ನು ಅಭಿವೃದ್ಧಿಪಡಿಸು ತ್ತಿವೆ. ಆದರೆ ಬಸವ ಕಲ್ಯಾಣದಲ್ಲಿ ಶರಣರ ಸ್ಮಾರಕಗಳು ಇನ್ನೂ ಸಂಪೂ ರ್ಣವಾಗಿ ಅಭಿವೃದ್ಧಿ ಹೊಂದಿಲ್ಲ. ಅದರ ನಿರ್ವಹಣೆಯು ಸಮರ್ಪಕ ವಾಗಿ ಇರದೇ ಇರುವುದರಿಂದ ನಿತ್ಯ ಬಸವ ಕಲ್ಯಾಣಕ್ಕೆ ಬರುವ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ವಾಮೀಜಿ ಹೇಳಿದರು.ಕೂಡಲಸಂಗಮ ಬಸವ ಧರ್ಮ ಪೀಠದವತಿಯಿಂದ ಬಸವಕಲ್ಯಾಣದಲ್ಲಿ 108 ಅಡಿ ಎತ್ತರವಾದ ಬಸವ ಪುತ್ಥಳಿಯನ್ನು ನಿರ್ಮಾಣ ಮಾಡಿದೆ. ಸದ್ಯ ಈ ಮೂರ್ತಿಯನ್ನು ನೋಡಲು ಅಪಾರ ಜನಸ್ತೋಮ ಬರುತ್ತಿರುವುದು ಇದೇ ಮಾದರಿಯಲ್ಲಿ ಎಲ್ಲ ಶರಣರ ಸ್ಥಳಗಳನ್ನು ಅಭಿವೃದ್ಧಿಪಡಿಸುವಂತಹ ಕಾರ್ಯವನ್ನು ಎಲ್ಲರೂ ಮಾಡಬೇಕು. ಕನ್ನಡ ಸಾಹಿತ್ಯಕ್ಕೆ ವಚನಕಾರರ ಕೊಡುಗೆ ಅಪಾರವಾಗಿದೆ ಇಂತಹ ವಚನಗಳನ್ನು ಉಳಿಸಿ ಬೆಳೆಸುವಂತಹ ಕಾರ್ಯವನ್ನು ನಾವೆಲ್ಲರೂ ಮಾಡಬೇಕು ಎಂದು ಹೇಳಿದರು.ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ಬಸವ ಮಂಟಪದ ಬಸವಕುಮಾರ ಸ್ವಾಮೀಜಿ,  ಇಂದಿನ ಶಾಲಾ ಪಠ್ಯಕ್ರಮಗಳಲ್ಲಿ ಶರಣರ ಬಗ್ಗೆ ಸ್ಪಷ್ಟವಾದ ವಿವರಣೆ ಇಲ್ಲ. ಆದರಿಂದ ಅಧಿಕ ಪ್ರಮಾಣದ ಪಾಠಗಳನ್ನು ಶರಣರ  ಜೀವನ ಚರಿತ್ರೆ ವಚನಗಳಿಗೆ ಸಂಬಂಧಿಸಿದಂತೆ ಇಡಬೇಕು. ಸರಕಾರ ಕೆಲವು ಶರಣರ ಸ್ಮಾರಕಗಳನ್ನು ಮಾತ್ರ ಅಭಿವೃದ್ಧಿಪಡಿಸಿರುವುದು ಇನ್ನೂ ಅಧಿಕ ಪ್ರಮಾಣದ ಸ್ಮಾರಕಗಳು ಅಭಿವೃದ್ಧಿ ಹೊಂದಿರುವುದಿಲ್ಲ ಅವುಗಳನ್ನು ಅಭಿ ವೃದ್ಧಿಪಡಿಸುವಂತಹ ಯೋಜನೆ ಹಮ್ಮಿ ಕೊಳ್ಳಬೇಕು. ಜೊತೆಗೆ ಶರಣರ ಜಯಂ ತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಬೇಕು ಎಂದು ಹೇಳಿದರು.ಬಸವ ಮಂಟಪದ ಜ್ಞಾನೇಶ್ವರಿ ಮಾತಾಜಿ ಮಾತನಾಡಿದರು. ಸಮಾರಂಭದಲ್ಲಿ ಕೂಡಲಸಂಗಮ ಬಸವಧರ್ಮ ಪೀಠದ ವ್ಯವಸ್ಥಾಪಕ ಚಂದ್ರಶೇಖರ, ಲೋಹಿತಮ್ಮ, ಬೆಂಗಳೂರಿನ ಸರೋಜಮ್ಮ, ಬಸಮ್ಮ, ಬಸವಕೃಪಾ ಅನಾಥಾಲಯದ ಮಹಾಂತೇಶ ಎಮ್ಮಿ ಉಪಸ್ಥಿತರಿದ್ದರು.ಸಮಾರಂಭಕ್ಕೂ ಪೂರ್ವದಲ್ಲಿ ವಿಶ್ವಗುರು ಬಸವಣ್ಣನವರ ಮೂರ್ತಿ ಹಾಗೂ ಗಣಲಿಂಗಕ್ಕೆ ಪೂಜೆ ಸಲ್ಲಿಸಿ ಚನ್ನಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಅನಾಥಾಲಯದ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.