ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಮಗ್ರ ವಚನ ಸಾಹಿತ್ಯದ ಜನಪ್ರಿಯ ಆವೃತ್ತಿಯನ್ನು 1993 ರಲ್ಲಿ ಪ್ರಕಟಿಸಿತು. ಅದರ ದ್ವಿತೀಯ ಪರಿಷ್ಕೃತ ಮುದ್ರಣವನ್ನು ಕನ್ನಡ ಪುಸ್ತಕ ಪ್ರಾಧಿಕಾರ 2001 ರಲ್ಲಿ ಹೊರತಂದಿತು. ಎರಡೂ ಸಂದರ್ಭಗಳಲ್ಲಿ ಸಮಗ್ರ ವಚನ ಸಾಹಿತ್ಯದ ಹದಿನೈದು ಸಂಪುಟಗಳ ತಲಾ 5000 ಪ್ರತಿಗಳನ್ನು ಮುದ್ರಿಸಲಾಯಿತು.

ದ್ವಿತೀಯ ಪರಿಷ್ಕೃತ ಮುದ್ರಣವನ್ನು ಪ್ರಕಟಿಸುವಾಗ ಪ್ರೊ. ಮಲ್ಲೇಪುರಂ ವೆಂಕಟೇಶ್ರವರು ಆಗ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಸಮಗ್ರ ವಚನ ಸಾಹಿತ್ಯದ ಹದಿನೈದು ಸಂಪುಟಗಳ ತಲಾ 5000 ಪ್ರತಿ ಹೊರತರಲು ಅವರು ತುಂಬಾ ಆಸಕ್ತಿವಹಿಸಿದ್ದರು. ಈ ಹದಿನೈದು ಸಂಪುಟಗಳು ಈಗ ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿ ಮಾರಾಟಕ್ಕೆ ದೊರೆಯುತ್ತಿಲ್ಲ.

ನನಗೆ ಸಂದೇಹ ಬಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳಿಗೆ ಮಾಹಿತಿ ಹಕ್ಕಿನ ಆಶ್ರಯದಲ್ಲಿ ಸಮಗ್ರ ವಚನ ಸಾಹಿತ್ಯದ 15 ಸಂಪುಟಗಳ ಎಪ್ಪತ್ತೈದು ಸಾವಿರ ಪ್ರತಿಗಳು ಮುದ್ರಣಾಲಯಗಳಿಂದ ಕನ್ನಡ ಪುಸ್ತಕ ಪ್ರಾಧಿಕಾರದ ಸ್ಟಾಕ್ ರಿಜಿಸ್ಟರ್ಗೆ ದಾಖಲಾದದ್ದರ ಬಗೆಗೆ ಲಿಖಿತ ದಾಖಲೆ ಕೇಳಿದೆ. ಆಡಳಿತಾಧಿಕಾರಿಗಳು ನನಗೆ ದಾಖಲೆ ನೀಡಿರುವರು. ಗಾಬರಿ ಹುಟ್ಟಿಸುವ ಸಂಗತಿಯೆಂದರೆ, ಸ್ಟಾಕ್ ರಿಜಿಸ್ಟರ್ನಲ್ಲಿ ದಾಖಲಾಗಿರುವುದು ಕೇವಲ 45 ಸಾವಿರ ಪ್ರತಿಗಳು ಮಾತ್ರ. ಅಂದರೆ ಸಮಗ್ರ ವಚನ ಸಾಹಿತ್ಯದ 15 ಸಂಪುಟಗಳಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಬಂದಿರುವುದು ಮೂರು ಸಾವಿರ ಸೆಟ್ಗಳು ಮಾತ್ರ.

ಈ ಹದಿನೈದು ಸಂಪುಟಗಳ 75,000 ಪ್ರತಿಗಳ ಕೇಸ್ ಬೈಂಡಿಂಗ್ ಜವಾಬ್ದಾರಿಯನ್ನು ಪ್ರೊ. ಮಲ್ಲೇಪುರಂ ವೆಂಕಟೇಶ್ರವರು ಬೆಂಗಳೂರಿನ ಲಕ್ಷ್ಮಿ ಮುದ್ರಣಾಲಯದವರಿಗೆ ವಹಿಸಿ ಕೊಟ್ಟಿದ್ದರು. ಲಕ್ಷ್ಮಿ ಮುದ್ರಣಾಲಯದವರು 15 ಸಂಪುಟಗಳ ತಲಾ ಎರಡು ಸಾವಿರ ಸೆಟ್ಗಳ ಪ್ರತಿಗಳನ್ನು (ಮೂವತ್ತು ಸಾವಿರ ಪ್ರತಿಗಳನ್ನು) ಈ ಹೊತ್ತಿನವರೆವಿಗೂ ಪೂರೈಸಿಲ್ಲ.

ಪ್ರೊ. ಮಲ್ಲೇಪುರಂ ವೆಂಕಟೇಶ್ರವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ 18-6-2001 ರಿಂದ 12-6-2004ರ ವರೆವಿಗೆ ಅಧಿಕಾರ ನಿರ್ವಹಿಸಿದರು. ದಾಸ್ತಾನು ವಿವರದಲ್ಲಿ 26-12-2001, 18-2-2002 ಹಾಗೂ 7-10-2002 ರಲ್ಲಿ ತಲಾ ಮೂರು ಸಾವಿರ ಪ್ರತಿಗಳಂತೆ 15 ಸಂಪುಟಗಳು 45000 ಪ್ರತಿಗಳು ಮುದ್ರಣಾಲಯದಿಂದ ಪೂರೈಕೆಯಾಗಿದೆ. ಉಳಿದ 2000 ಪ್ರತಿಗಳನ್ನು ಅಂದರೆ 20,000 ಪ್ರತಿಗಳನ್ನು ಪ್ರೊ. ಮಲ್ಲೇಪುರಂ ವೆಂಕಟೇಶ್ 13-6-2004ರ ವರೆವಿಗೆ ಅಧಿಕಾರದಲ್ಲಿದ್ದರೂ ಏಕೆ ಪಡೆಯಲಿಲ್ಲ? ಪುಸ್ತಕಗಳು ಏನಾದವು?

ಎರಡು ಸಾವಿರ ಸೆಟ್ಗಳು ಕಳೆದ ಹತ್ತು ವರ್ಷಗಳಲ್ಲಿ ಗೆದ್ದಲು ತಿಂದು ಹಾಳಾದವು ಎಂದು ಭಾವಿಸಬೇಕೆ? ಇದಕ್ಕೆ ಸಾರ್ವಜನಿಕವಾಗಿ ವಿವರಣೆ ನೀಡುವುದು ಈಗಿನ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಕರ್ತವ್ಯವೆಂದು ನಾನು ನಂಬಿರುವೆನು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.