ಶಿವಮೊಗ್ಗ: ವಸತಿನಿಲಯ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ನೀಡುವ ವ್ಯವಸ್ಥೆ ನಗರದ ವಿದ್ಯಾನಗರದ ಮೆಟ್ರಿಕ್ ಪೂರ್ವ ಬಾಲಕರ ವಸತಿನಿಲಯದಲ್ಲಿ ಸರ್ಕಾರ ಕಲ್ಪಿಸಿದೆ.

2011ರ ಏ. 14ರಂದು ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಸತಿನಿಲಯದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಮತ್ತು `ಸಿಐಎಸ್ಸಿಒ ಸಿಸ್ಟಂ~ ಸಹಭಾಗಿತ್ವದಲ್ಲಿ ಕಂಪ್ಯೂಟರ್ ಆನ್ಲೈನ್ ಮೂಲಕ ನವ ಮಾಧ್ಯಮ ತಂತ್ರಜ್ಞಾನ ಬಳಸಿ ಶಿಕ್ಷಣ ನೀಡುವ ಯೋಜನೆ ಆರಂಭಿಸಿದೆ. ಅದರಂತೆ ಶಿವಮೊಗ್ಗ ಈ ಬಾಲಕರ ವಸತಿನಿಲಯದಲ್ಲೂ ಶಿಕ್ಷಣ ನೀಡಲಾಗುತ್ತಿದೆ.

ಈ ವಿಶಿಷ್ಟ ಯೋಜನೆ ರಾಜ್ಯದಲ್ಲಿ 3 ಕಡೆಗಳಲ್ಲಿ ಮಾತ್ರ ಅನುಷ್ಠಾನಗೊಂಡಿದ್ದು, ಶಿವಮೊಗ್ಗ ನಗರದ್ದೂ ಸೇರಿಸಿದರೆ ರಾಯಚೂರಿನ ವಿದ್ಯಾರ್ಥಿನಿಯರ ವಸತಿನಿಲಯ, ಶಿಕಾರಿಪುರ ವಿದ್ಯಾರ್ಥಿನಿಯರ ವಸತಿನಿಲಯದಲ್ಲಿ ವಿದ್ಯಾರ್ಥಿಗಳ ಇದರ ಬಳಕೆ ಮಾಡುತ್ತಿದ್ದಾರೆ.

ಪ್ರತಿದಿನ ಸಂಜೆ 6.30ರಿಂದ ರಾತ್ರಿ 8.30ರವರೆಗೆ ಆನ್ಲೈನ್ ಪಾಠ ನಡೆಯುತ್ತಿದ್ದು, ವಸತಿನಿಲಯದ ಕೊಠಡಿ ಒಂದರಲ್ಲಿ ಕಂಪ್ಯೂಟರ್ ಪ್ರೊಜೆಕ್ಟರ್, ಮೈಕ್ ಹಾಗೂ ವೆಬ್ ಕ್ಯಾಮೆರಾ ಅಳವಡಿಸಲಾಗಿದ್ದು, ಅದರ ಪರದೆಯ ಮೇಲೆ ಪಾಠಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬಿತ್ತರಿಸಲಾಗುತ್ತದೆ.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಮುಖ್ಯ ಕೇಂದ್ರದಲ್ಲಿ ನುರಿತ ತಜ್ಞರಿಂದ ವಾರದಲ್ಲಿ ಐದು ದಿನ ಬೋಧನಾ ವಿಷಯಗಳಿಗೆ ಸಂಬಂಧಿಸಿದ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಮೂರು ವಿಷಯಗಳ ಕುರಿತು ಆನ್ಲೈನ್ ಶಿಕ್ಷಣ ನೀಡಲಾಗುತ್ತದೆ. ಪ್ರಸ್ತುತ ವಸತಿ ನಿಲಯದಲ್ಲಿ 25 ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯುತ್ತಿದ್ದಾರೆ.

ಆನ್ಲೈನ್ ಶಿಕ್ಷಣದಲ್ಲಿ ವಿದ್ಯಾರ್ಥಿಗಳೊಂದಿಗೆ ನೇರ ಸಂವಹನ ಕೂಡಾ ಸಾಧ್ಯವಿದ್ದು, ವಿದ್ಯಾರ್ಥಿಗಳಿಗೆ ವಿಷಯಕ್ಕೆ ಸಂಬಂಧಿಸಿದಂತೆ ಏನಾದರೂ ಸಂದೇಹಗಳಿದ್ದಲ್ಲಿ ನೇರವಾಗಿ ಕಂಪ್ಯೂಟರ್ ಬಳಿ ಜೋಡಿಸಿದ ಮೈಕ್ನಲ್ಲಿ ಪ್ರಶ್ನೆ ಕೇಳಬಹುದು. ಆಗ ಆನ್ಲೈನ್ ಬೋಧಕರು ಅಲ್ಲಿಂದಲೇ ಆನ್ಲೈನ್ ಮೂಲಕ ಸಂದೇಹಗಳಿಗೆ ಉತ್ತರಿಸುತ್ತಾರೆ.

ತರಗತಿಯಲ್ಲಿ ಮಾಡುವ ಪಾಠ ಅರ್ಥವಾಗದೇ ಇದ್ದಾಗ ಅಥವಾ ತರಗತಿಗೆ ಗೈರು ಹಾಜರಾದಾಗ ಸಂಜೆ ಆನ್ಲೈನ್ ಮೂಲಕ ಅದೇ ಪಾಠವನ್ನು ತಿಳಿಸುವುದರಿಂದ ವಿಷಯದ ಕುರಿತು ಹೆಚ್ಚು ಮಾಹಿತಿ ಹಾಗೂ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಲು ಸಹಾಯವಾಗಿದೆ ಎನ್ನುತ್ತಾನೆ ಆನ್ಲೈನ್ ಶಿಕ್ಷಣ ಫಲಾನುಭವಿ ವಸತಿನಿಲಯದ ವಿದ್ಯಾರ್ಥಿ ಗಣೇಶ್.

ಹೆಚ್ಚಿನ ಸಮಯ ವ್ಯಯ
ನಮಗೆ ಆನ್ಲೈನ್ ಶಿಕ್ಷಣದಿಂದ ಹೆಚ್ಚು ಉಪಯೋಗದ ಜತೆಗೆ, ಆನ್ಲೈನ್ ಶಿಕ್ಷಣ ವ್ಯವಸ್ಥೆಯಲ್ಲಿ ಅಂದಿನ ವಿಷಯವನ್ನು ಅಂದಿನ ದಿನವೇ ಕೇಳಬೇಕು. ಇದರಿಂದ ಪರೀಕ್ಷೆ ಇರುವ ಸಂದರ್ಭದಲ್ಲಿ ಅನೇಕ ಪಾಠಗಳು ಕಳೆದು ಕೊಳ್ಳಬೇಕಾಗುತ್ತದೆ. ಅಲ್ಲದೇ, ಆನ್ಲೈನ್ ಎರಡು ಗಂಟೆಗಳ ಕಾಲ ನಡೆಯುವುದರಿಂದ ಹೆಚ್ಚಿನ ಸಮಯ ಅಲ್ಲಿಯೇ ಮೀಸಲಿಡಬೇಕು. ಹಾಗಾಗಿ, ಇತರೆ ವಿಷಯಗಳ ಕಡೆ ಗಮನ ಹರಿಸಲು ಅಥವಾ ನೋಟ್ಸ್ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ವಸತಿನಿಲಯದ ಕೆಲ ವಿದ್ಯಾರ್ಥಿಗಳು.

ಅನೇಕ ಬಾರಿ ಆನ್ಲೈನ್ನಲ್ಲಿ ದೋಷಗಳು ಕಾಣಿಸಿಕೊಂಡಾಗ ಸರಿಯಾದ ತಂತ್ರಜ್ಞರು ಇಲ್ಲದಿದ್ದರಿಂದ ವಾರಗಟ್ಟಲೇ ಆನ್ಲೈನ್ ಶಿಕ್ಷಣದಿಂದ ಮಕ್ಕಳು ವಂಚಿತರಾಗಬೇಕಾಗುತ್ತದೆ. ಹಾಗಾಗಿ, ನುರಿತ ಕಂಪ್ಯೂಟರ್ ತಂತ್ರಜ್ಞರು ಬೇಕು ಎನ್ನುತ್ತಾರೆ ವಸತಿನಿಲಯದ ಮೇಲ್ವಿಚಾರಕ ಅನಿಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.