ವಾಂಖೆಡೆ ಕ್ರೀಡಾಂಗಣಕ್ಕೆ ಗ್ರೀನ್ ಸಿಗ್ನಲ್

7

ವಾಂಖೆಡೆ ಕ್ರೀಡಾಂಗಣಕ್ಕೆ ಗ್ರೀನ್ ಸಿಗ್ನಲ್

Published:
Updated:

ಮುಂಬೈ (ಪಿಟಿಐ): ನವೀಕರಣಕ್ಕೆ ಒಳಗಾಗಿರುವ ವಾಂಖೆಡೆ ಕ್ರೀಡಾಂಗಣದಲ್ಲಿ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಷಿಪ್‌ನ ಪಂದ್ಯಗಳನ್ನು ಆಯೋಜಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಸಿರು ನಿಶಾನೆ ತೋರಿಸಿದೆ.‘ಏಪ್ರಿಲ್ ಎರಡರಂದು ನಡೆಯಲಿರುವ ಫೈನಲ್ ಸೇರಿದಂತೆ ಐಸಿಸಿ ವಿಶ್ವಕಪ್‌ನ ಪಂದ್ಯಗಳನ್ನುಆಯೋಜಿಸಲು ವಾಂಖೆಡೆ ಕ್ರೀಡಾಂಗಣಕ್ಕೆ ಗ್ರೀನ್ ಸಿಗ್ನಲ್ ಲಭಿಸಿದೆ’ ಎಂದು ಮುಂಬೈ ಕ್ರಿಕೆಟ್ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಹೇಮಂತ್ ವೇಂಗಾನಕರ್ ಹಾಗೂ ಲಾಲ್‌ಚಂದ್ ರಾಜ್‌ಪೂತ್ ತಿಳಿಸಿದ್ದಾರೆ.

ಫೆಬ್ರುವರಿ 20ರಂದು ಮಾಧ್ಯಮದವರಿಗೆ ಕ್ರೀಡಾಂಗಣವನ್ನು ತೋರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಈ ಕ್ರೀಡಾಂಗಣದಲ್ಲಿ ಫೈನಲ್ ಅಲ್ಲದೇ ಮತ್ತೆರಡು ಪಂದ್ಯಗಳು ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry