ವಾಣಿಜ್ಯ ಎಸ್ಎಂಎಸ್ಗೆ ಟ್ರಾಯ್ ಶುಲ್ಕದ ಪೆಟ್ಟು
ನವದೆಹಲಿ (ಪಿಟಿಐ): ಚಂದಾದಾರರಿಗೆ ಕಿರಿಕಿರಿ ಉಂಟುಮಾಡುವ ಅನಪೇಕ್ಷಿತ ವಾಣಿಜ್ಯ `ಎಸ್ಎಂಎಸ್~ಗಳ ಹಾವಳಿ ತಡೆಯಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಟೆಲಿಮಾರ್ಕೆಟಿಂಗ್ ಕಂಪೆನಿಗಳ ಮೇಲೆ ಇನ್ನಷ್ಟು ನಿರ್ಬಂಧ ಹೇರಿದೆ.
ಇನ್ನು ಮುಂದೆ ಕಂಪೆನಿಗಳು ಒಂದು ಸಿಮ್ನಿಂದ ದಿನವೊಂದಕ್ಕೆ ವಾಣಿಜ್ಯ ಉದ್ದೇಶದ 100 `ಎಸ್ಎಂಎಸ್~ ಮಾತ್ರ ಕಳುಹಿಸಬಹುದು. ನಂತರದ ಪ್ರತಿ `ಎಸ್ಎಂಎಸ್~ಗೂ ಕನಿಷ್ಠ 50 ಪೈಸೆಯಂತೆ ಹೆಚ್ಚುವರಿ ದರ ಪಾವತಿಸಬೇಕಾಗುತ್ತದೆ ಎಂದು `ಟ್ರಾಯ್~ ಎಚ್ಚರಿಸಿದೆ.
`ಟ್ರಾಯ್~ನಲ್ಲಿ ನೋಂದಾಯಿಸಿಕೊಳ್ಳದ ಕೆಲವು ಟೆಲಿಮಾರ್ಕೆಟಿಂಗ್ ಕಂಪೆನಿಗಳು ದೂರವಾಣಿ ಸೇವಾ ಸಂಸ್ಥೆಗಳು ಒದಗಿಸುವ `ಎಸ್ಎಂಎಸ್ ದರ ವಿನಾಯ್ತಿ~ ಲಾಭ ಪಡೆದು ಒಟ್ಟಿಗೇ ಸಾವಿರಾರು `ಎಸ್ಎಂಎಸ್~ ರವಾನಿಸುತ್ತಿದ್ದವು. ಎರಡು ವಾರಗಳ ಹಿಂದೆ ದೂರವಾಣಿ ಸಚಿವ ಕಪಿಲ್ ಸಿಬಲ್ ಅವರ ಮೊಬೈಲ್ಗೂ ಇಂತಹುದೇ `ಎಸ್ಎಂಎಸ್~ ಬಂದು ಕಿರಿಕಿರಿ ಮಾಡಿತ್ತು.
ಸಾಮಾನ್ಯ ಗ್ರಾಹಕರಿಗೂ ಹೀಗೆಯೇ ಕಿರಿಕಿರಿ ಆಗುತ್ತಿದೆ ಎಂಬುದು ಅರಿವಾದ ಹಿನ್ನೆಲೆಯಲ್ಲಿ ಉಚಿತ `ಎಸ್ಎಂಎಸ್~ಗಳಿಗೆ 100ಕ್ಕೆ ಮಿತಿ ವಿಧಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಇದು ಜಾರಿಗೆ ಬರಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.