ವಾಮಾಚಾರ ನಾನೂ ನಂಬುವೆ: ಈಶ್ವರಪ್ಪ

7

ವಾಮಾಚಾರ ನಾನೂ ನಂಬುವೆ: ಈಶ್ವರಪ್ಪ

Published:
Updated:

ಶಿವಮೊಗ್ಗ: ‘ಮಾಟ-ಮಂತ್ರ ಮಾಡಿಸಿ, ಕೊಲ್ಲಲು ಷಡ್ಯಂತ್ರ ರೂಪಿಸಲಾಗಿದೆ ಎನ್ನುವುದು ಮುಖ್ಯಮಂತ್ರಿಗಳ ವೈಯಕ್ತಿಕ ಅಭಿಪ್ರಾಯ. ಈ ಮೂಲಕ ಅವರು ತಮ್ಮ ಆತಂಕ  ಬಹಿರಂಗಪಡಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ತಿಳಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಮ್ಮ ವಿರುದ್ಧ ವಾಮಾಚಾರ ಮಾಡಲಾಗುತ್ತಿದೆ ಎಂಬುದು ಗೊತ್ತಾದಾಗ ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವ ಬದಲು ಬಹಿರಂಗಪಡಿಸುವುದು ಸೂಕ್ತ. ವೈಯಕ್ತಿಕವಾಗಿ ನಾನೂ ವಾಮಾಚಾರ ನಂಬುತ್ತೇನೆ’ ಎಂದು ಪ್ರತಿಕ್ರಿಯಿಸಿದರು.ರಾಜ್ಯದಲ್ಲಿ ಮಾಟ-ಮಂತ್ರಕ್ಕೆ ಪ್ರತಿಪಕ್ಷಗಳು ಪ್ರಸಿದ್ಧಿ ಪಡೆದಿವೆ. ವಾಮಮಾರ್ಗದ ಮೂಲಕ ಅಧಿಕಾರದ ಗದ್ದುಗೆ ಏರಲು ಮಾಟ-ಮಂತ್ರ ಮಾಡುವ ಪರಿಸ್ಥಿತಿಯೂ ಇದೆ ಎಂದು ಆರೋಪಿಸಿದರು.‘ವರದಿ ಒಪ್ಪಿಕೊಳ್ಳಿ’: ನ್ಯಾ. ಸೋಮಶೇಖರ್ ಆಯೋಗ, ಚರ್ಚ್‌ಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ಹತ್ತಾರು ಸ್ಥಳಗಳಿಗೆ ಭೇಟಿ ನೀಡಿ, ನೂರಾರು ಸಾಕ್ಷಿಗಳನ್ನು ಕಲೆ ಹಾಕಿ ಕೂಲಂಕಷವಾಗಿ ಪರಿಶೀಲಿಸಿ, ವರದಿ ಸಲ್ಲಿಸಿದೆ. ಅದನ್ನು ಒಪ್ಪಿಕೊಳ್ಳಬೇಕು ಎಂದು ಈಶ್ವರಪ್ಪ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry