ಮಂಗಳವಾರ, ಮೇ 11, 2021
21 °C

ವಾಯುಪಡೆ ನಿರ್ಗಮನ ಪಥಸಂಚಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ವಾಯುಪಡೆಯ ವಿಮಾನ ಮತ್ತು ಅದರ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಅವುಗಳ ನಿರ್ವಹಣೆಯಲ್ಲಿ ಎಂಜಿನಿಯರ್‌ಗಳ ಪಾತ್ರ ದೊಡ್ಡದು' ಎಂದು ಏರ್ ಮಾರ್ಷಲ್ ಅರುಪ್ ರಹಾ ಹೇಳಿದರು.ಜಾಲಹಳ್ಳಿಯ ವಾಯುಪಡೆ ತಾಂತ್ರಿಕ ಕಾಲೇಜಿನಲ್ಲಿ ಈಚೆಗೆ ನಡೆದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಮುಂದೆ ಗುರಿಯನ್ನಿಟ್ಟುಕೊಂಡು ಪ್ರಯತ್ನವನ್ನು ಮಾಡಿದರೆ ಯಶಸ್ಸು ದೊರೆಯುತ್ತದೆ. ಮುಖ್ಯವಾಗಿ ಪರಿಶ್ರಮ ಪಡಬೇಕು. ಯಾವುದೇ ಸವಾಲಿಗೂ ಸಿದ್ಧರಾಗಿರಬೇಕು' ಎಂದು ಹೇಳಿದರು.ಒಟ್ಟು 118 ಅಧಿಕಾರಿಗಳು ತರಬೇತಿ ಪಡೆದು ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ 28 ಮಹಿಳಾ ಅಧಿಕಾರಿಗಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.