ಮಂಗಳವಾರ, ಮೇ 24, 2022
30 °C

ವಾಲ್ಮೀಕಿ ತತ್ವ ಪಾಲಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಲ್ಮೀಕಿ ತತ್ವ ಪಾಲಿಸಲು ಸಲಹೆ

ಮರಿಯಮ್ಮನಹಳ್ಳಿ: ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡು ವಂತೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಚಾರ್ಯ ಬಿ.ಶಂಕ್ರಪ್ಪ ಹೇಳಿದರು.ಅವರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.ಮಕ್ಕಳಲ್ಲಿ ಒಳ್ಳೆಯ ಭಾವನೆ ಬಿತ್ತುವುದರ ಜತೆಗೆ, ಸಮಾಜದಲ್ಲಿ ಗುರು ಹಿರಿಯರನ್ನು ಗೌರವದಿಂದ ಕಾಣುವ ಗುಣ ಬೆಳಸಬೇಕಿದೆ, ಅಲ್ಲದೆ ಮಕ್ಕಳಲ್ಲಿ ನಮ್ಮ ಪುರಾಣ, ಗ್ರಂಥಗಳ ಬಗ್ಗೆ ತಿಳಿಸಕೊಡುವದರ ಜತೆಗೆ ಅದರಲ್ಲಿನ ಸತ್ವವನ್ನು ಮನದಟ್ಟು ಮಾಡಿಕೊಡಬೇಕೆಂದರು.ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಸಮಾಜದಲ್ಲಿ ಉತ್ತಮರನ್ನಾಗಿ ರೂಪಿಸ ಬೇಕಿದೆ, ಇದಕ್ಕೆ ವಾಲ್ಮೀಕಿಯವರ ಜೀವನವೇ ಒಂದು ದಾರಿ ದೀಪ ವಾಗಿದ್ದು, ಮಹಾನ್ ಗ್ರಂಥ ನೀಡಿದ ಮಹರ್ಷಿ ವಾಲ್ಮೀಕಿಯವರ ಕೊಡುಗೆ ಅಪಾರವಾಗಿದೆ. ಅವರ ಜೀವನವೇ ಎಲ್ಲರಿಗೂ ಮಾರ್ಗದರ್ಶನವಾಗಿದ್ದು, ಎಲ್ಲರೂ ಅದನ್ನು ಪಾಲಿಸುವಂತೆ ತಿಳಿದರು.

 

ಎಸ್‌ಡಿಎಂಸಿ ಉಪಾಧ್ಯಕ್ಷ ಕೊಟ್ಗಿ ನಾಗಪ್ಪ ಅವರು ಮಹರ್ಷಿ ವಾಲ್ಮೀಕಿ ಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು. ಶಿಕ್ಷಕ ಕುಮಾರ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಸ್‌ಡಿಎಂಸಿ ಸದಸ್ಯರಾದ ಕುಪ್ಪಿನಕೇರಿ ವೆಂಕಟೇಶ್, ಹೂಗಾರ್ ಲಲಿತಮ್ಮ, ಉದ್ದೇಕಲ್ ವೆಂಕಟೇಶ್, ಪೂಜಾರ್ ಬಸಪ್ಪ, ಶಿಕ್ಷಕರಾದ ಸುಭಾಷ್, ದುರುಗಪ್ಪ, ವರ್ಧಮಾನ್, ಸುಶೀಲಮ್ಮ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.