ರಾಷ್ಟ್ರದ ವಾಸ್ತುಶಿಲ್ಪಿ ವಿದ್ಯಾರ್ಥಿಗಳಿಗಾಗಿ ಈಚೆಗೆ ನಗರದಲ್ಲಿ ರಾಷ್ಟ್ರ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಭಾರತೀಯ ವಾಸ್ತುಶಿಲ್ಪ ಸಂಸ್ಥೆ, ವಾಸ್ತುಶಿಲ್ಪ ವಿದ್ಯಾರ್ಥಿಗಳ ಸಂಘಟನೆಯು ಜಂಟಿಯಾಗಿ ಪಿಡಿಲೈಟ್ಗೋದ್ರೆಜ್, ಗ್ರೌಂಡ್ಫೇಸ್ ಹಾಗೂ ಇಂಟರ್ಫೇಸ್ ಜೊತೆಗೂಡಿ ಆಯೋಜಿಸಲಾಗಿತ್ತು.

ಕೋಲ್ಕತ್ತ, ನವದೆಹಲಿ ಹಾಗೂ ಪುಣೆಗಳಲ್ಲಿ, ಪೂರ್ವ, ಉತ್ತರ ಹಾಗೂ ಪಶ್ಚಿಮವಯಲದ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ನಗರದ ಕ್ಯಾಪಿಟಲ್ ಹೋಟೆಲ್ನಲ್ಲಿ ಈಚೆಗೆ ಅಂತಿಮ ಹಣಾಹಣಿಗೆ ಸಿದ್ಧಪಡಿಸಲಾಗಿತ್ತು.
ಉತ್ತಮ ಆರ್ಚುಮೆನ್ ರಸಪ್ರಶ್ನೆ ಕಾರ್ಯಕ್ರಮ ಆರಂಭವಾಗಿ ಒಂದು ದಶಕವೇ ಕಳೆದಿದೆ.

ದಶಕದ ಸಂಭ್ರಮದಲ್ಲಿರುವುದರಿಂದ ಈ ಸಲ ವಾಸ್ತುಶಿಲ್ಪಿಗಳಿಗಾಗಿಯೂ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತರಿಗೆ 50 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಯಿತು. ಎರಡನೆಯ ಸ್ಥಾನ ಗಳಿಸಿದವರಿಗೆ 25 ಸಾವಿರ ರೂಪಾಯಿಗಳ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿಗಳ ವಿಭಾಗದಲ್ಲಿ ಕಳೆದ ವರ್ಷದ ವಿಜೇತರಾದ ಪುಣೆ ಪಿವಿಪಿಸಿಒಎ ಸಂಸ್ಥೆಯ ಅರ್ಣವ್ ಗರ್ದೆ ಹಾಗೂ ಅಶ್ವಿನ್ಜೋಷಿ ಈ ವರ್ಷವೂ ಗೆಲುವಿನ ಪಟ್ಟವನ್ನು ಬಿಟ್ಟುಕೊಡಲಿಲ್ಲ.

ವಾಸ್ತುಶಿಲ್ಪಿಗಳ ವಿಭಾಗದಲ್ಲಿ ಮಾಧುರಿ ರಾವ್ ಹಾಗೂ ವಿವೇಕ್ ಚಂದ್ರನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.