ಸೋಮವಾರ, ಜನವರಿ 20, 2020
21 °C

ವಾಹನ ಮೇಳಕ್ಕೆ ಇಂದು ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 11ನೇ ಅಂತರರಾಷ್ಟ್ರೀಯ ವಾಹನ ಮೇಳಕ್ಕೆ (ಆಟೊ ಎಕ್ಸ್‌ಪೊ) ನವದೆಹಲಿಯ ಪ್ರಗತಿ ಮೈದಾನದಲ್ಲಿ ಗುರುವಾರ (ಜನ     ವರಿ 5) ಚಾಲನೆ ದೊರೆಯಲಿದೆ.ಜನವರಿ 12ರ ವರೆಗೆ ಮೇಳ ನಡೆಯಲಿದ್ದು,  50ಕ್ಕೂ ಹೆಚ್ಚು ಜಾಗತಿಕ ಬ್ರಾಂಡ್‌ಗಳು ಮೇಳದಲ್ಲಿ ಪ್ರದರ್ಶನಗೊಳ್ಳಲಿವೆ. ದೇಶೀಯ ಕಂಪೆನಿಗಳು ತಯಾರಿಸಿದ 24 ಹೊಸ ಕಾರು ಮತ್ತು 8 ದ್ವಿಚಕ್ರ ವಾಹನಗಳು ಈ ಮೇಳದಲ್ಲಿ ಪ್ರದರ್ಶನಗೊಳ್ಳಲಿವೆ. ಭಾರತದಲ್ಲಿ ನಡೆಯುತ್ತಿರುವ ಈ ಮೇಳ ಪ್ರಪಂಚದಲ್ಲಿಯೇ ಎರಡನೆಯ ಅತಿ ದೊಡ್ಡ ವಾಹನ ಮೇಳವಾಗಲಿದೆ. ಜನವರಿ 7ರಿಂದ 11ರ ವರೆಗೆ ಸಾರ್ವಜನಿಕರ  ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಚೀನಾ, ಅಮೆರಿಕ  ಟರ್ಕಿ ಸೇರಿದಂತೆ 24 ದೇಶಗಳ 1,500ಕ್ಕೂ  ಹೆಚ್ಚು ಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)