ಶುಕ್ರವಾರ, ಜೂನ್ 18, 2021
24 °C

ವಾಹನ ಸಾಲ: ಟಿವಿಎಸ್‌, ಯುಕೊ ಬ್ಯಾಂಕ್‌ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |


ಬೆಂಗಳೂರು: ವಾಣಿಜ್ಯ ಬಳಕೆ ವಾಹ­ನಗಳ ಖರೀದಿಗೆ ಕಡಿಮೆ ಬಡ್ಡಿದರ­ದಲ್ಲಿ ಸಾಲ ಒದಗಿಸುವುದಕ್ಕೆ ಸಂಬಂ­ಧಿಸಿದಂತೆ ‘ಟಿವಿಎಸ್‌ ಸಮೂಹ’ದ ಜತೆಗೆ ‘ಯುಕೊ ಬ್ಯಾಂಕ್‌’ ಒಪ್ಪಂದ ಮಾಡಿ ಕೊಂಡಿದೆ.ವಾಣಿಜ್ಯ ಬಳಕೆ ವಾಹನಗಳಿಗೆ ದೊಡ್ಡ ಮೊತ್ತದ ಸಾಲ ವಿತರಿಸಲು ಯೋಜಿಸಲಾಗಿದೆ. ಗರಿಷ್ಠ ₨1 ಕೋಟಿವ­ರೆಗೂ ಸಾಲ ನೀಡಲಾಗು­ವು­ದು ಎಂದು ಯುಕೊ ಬ್ಯಾಂಕ್‌ ವಲಯ ವ್ಯವಸ್ಥಾಪಕ ಎಸ್‌.­ವೈದ್ಯನಾಥನ್‌ ವಿವರಿಸಿದರು.ವಾಣಿಜ್ಯ ಬಳಕೆ ವಾಹನಗಳ ಸಾಲ ವಿತರಣೆ ಕಾರ್ಯಕ್ರಮಕ್ಕೆ ಇಲ್ಲಿ ಚಾ­ಲನೆ ನೀಡಿದ ಅವರು, 84 ತಿಂಗಳು­ಗಳ ಅವಧಿಗೆ ಸಾಲ ಲಭ್ಯವಿದೆ. ಶೇ 15ರಷ್ಟು ಬಡ್ಡಿದರ ಇರಲಿದೆ ಎಂದರು. ಕಾರ್ಯಕ್ರಮ­ದಲ್ಲಿ 100 ಗ್ರಾಹಕರಿಗೆ ವಾಹನ ಸಾಲ ಮಂಜೂರು ಮಾಡಲಾ ಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.