ಭಾನುವಾರ, ಜೂನ್ 20, 2021
29 °C

ವಾಹನ ಹರಿದು ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ತಾಲ್ಲೂಕಿನ ನಗರಂಗೆರೆ ಸಮೀಪ ಕಾರ್ಖಾನೆ ಆವರಣದಲ್ಲಿ ಮಲಗಿದ್ದವರ ಮೇಲೆ ಡೋಜರ್ ವಾಹನ ಹರಿದು ಮೂವರು ಸ್ಥಳದಲ್ಲೇ ಅಸುನೀಗಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯ ಬಾಲದೇವರ ಹಟ್ಟಿಯ ರಾಜಣ್ಣ(35), ಕೃಷ್ಣಮೂರ್ತಿ(25) ಹಾಗೂ ತಿಮ್ಮಪ್ಪನ ಹಟ್ಟಿ ಗ್ರಾಮದ ಜಗದೀಶ್ (22) ಮೃತಪಟ್ಟವರು. ಇಲ್ಲಿನ ಗಾಯತ್ರಿ ಬಯೋಫಿಲ್ಸ್ ಕಾರ್ಖಾನೆ ಪಕ್ಕದಲ್ಲಿ ಮಲಗಿದ್ದ ವೇಳೆ ದುರ್ಘಟನೆ ಸಂಭವಿಸಿದೆ.ಮೃತರು ಹುಳಿಯಾರಿನಿಂದ ಮರದ ಪುಡಿಯನ್ನು ಲಾರಿಯಲ್ಲಿ ತುಂಬಿಕೊಂಡು ನಗರಂಗೆರೆಯ ಕಾರ್ಖಾನೆಗೆ ಬಂದಿದ್ದರು. ಮಧ್ಯರಾತ್ರಿ ಬಂದವರು ಗಾಯತ್ರಿ ಫ್ಯಾಕ್ಟರಿಯ ಪಕ್ಕದಲ್ಲೇ ಮಲಗಿದ್ದರು.

ಮುಂಜಾನೆ ಕಾರ್ಖಾನೆಯ ಡೋಜರ್ ವಾಹನ ಚಾಲಕ ಮಲಗಿದ್ದವರನ್ನು ಗಮನಿಸದೇ ವಾಹನ ಚಲಾಯಿಸಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

 

ಲಾರಿಯಲ್ಲಿ ಬಂದಿದ್ದ ನಾಲ್ವರಲ್ಲಿ ಚಾಲಕ ರಾಜಣ್ಣ ಸೇರಿದಂತೆ 3ಜನ ಅಕ್ಕಪಕ್ಕದಲ್ಲಿ ಮಲಗಿದ್ದರು. ಉಳಿದಂತೆ ಚಿತ್ತಪ್ಪ ಎಂಬುವರು ಸ್ವಲ್ಪ ದೂರದಲ್ಲಿ ಮಲಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಳ್ಳಕೆರೆ ಠಾಣೆಯಲ್ಲಿ  ಚಾಲಕ ವಿರುದ್ದ  ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.