ಗುರುವಾರ , ಮೇ 19, 2022
20 °C
ಕ್ರಿಕೆಟ್: ಬ್ರಾವೊ ಅರ್ಧಶತಕ, ಭಾರತದ ಜಯದ ಓಟಕ್ಕೆ ಲಗಾಮು ಹಾಕಿದ ಆತಿಥೇಯರು

ವಿಂಡೀಸ್ ಗೆಲುವಿಗೆ ಚಾರ್ಲ್ಸ್ ಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿಂಗ್‌ಸ್ಟನ್ (ಪಿಟಿಐ): ಚಾಂಪಿಯನ್ಸ್ ಟ್ರೋಫಿಯಲ್ಲಿ ಅಜೇಯ ಗೆಲುವಿನ ಓಟದ ಮೂಲಕ ಚಾಂಪಿಯನ್ ಆಗಿದ್ದ ಭಾರತ ತಂಡದ ಸತತ ಜಯದ ಯಾತ್ರೆಗೆ ಕಡಿವಾಣ ಬಿದ್ದಿದೆ. ಸಾಧಾರಣ ಮೊತ್ತದ ಗುರಿಯನ್ನು ಕಷ್ಟಪಟ್ಟು ತಲುಪಿದ ವೆಸ್ಟ್ ಇಂಡೀಸ್ ತ್ರಿಕೋನ ಏಕದಿನ ಸರಣಿಯ ಪಂದ್ಯದಲ್ಲಿ ಒಂದು ವಿಕೆಟ್‌ನಿಂದ ಗೆಲುವು ಸಾಧಿಸಿತು.ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮಹೇಂದ್ರ ಸಿಂಗ್ ದೋನಿ ನೇತೃತ್ವದ ಭಾರತ 50 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 229 ರನ್‌ಗಳ ಸಾಧಾರಣ ಮೊತ್ತ ಕಲೆ ಹಾಕಿತು. ವಿಂಡೀಸ್ 47.4 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.ಚಾರ್ಲ್ಸ್ ಬಲ: ಆತಿಥೇಯರ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಆಟ ಭಾರತ ಎದುರು ನಡೆಯಲಿಲ್ಲ. 11 ರನ್ ಗಳಿಸಿದ್ದ ವೇಳೆ ಉಮೇಶ್ ಯಾದವ್ ಎಸೆತದಲ್ಲಿ ಸುರೇಶ್ ರೈನಾಗೆ ಕ್ಯಾಚಿತ್ತು ನಿರ್ಗಮಿಸಿದರು. ಆದರೆ, ಆರಂಭಿಕ ಆಟಗಾರ ಜಾನ್ಸನ್ ಚಾರ್ಲ್ಸ್ ವಿಂಡೀಸ್ ಗೆಲುವಿಗೆ ಬಲ ತುಂಬಿದರು.ಗೇಲ್ ವಿಕೆಟ್ ಒಪ್ಪಿಸಿದಾಗ ತಂಡದ ಮೊತ್ತ 13. ಈ  ಮೊತ್ತಕ್ಕೆ ಇನ್ನು 13 ರನ್ ಸೇರಿಸುವಷ್ಟರಲ್ಲಿ ಆತಿಥೇಯರು ಡೆವೊನ್ ಸ್ಮಿತ್ (0) ಹಾಗೂ ಮರ್ಲಾನ್ ಸ್ಯಾಮುಯೆಲ್ಸ್ (1) ಅವರನ್ನು ಕಳೆದುಕೊಂಡಿತು. ಅದರೆ, ಆರಂಭಿಕ ಮೇಲುಗೈಯಿಂದ ಬೀಗಿದ ಭಾರತದ ಬೌಲರ್‌ಗಳಿಗೆ ಚಾರ್ಲ್ಸ್ ಇನ್ನಿಲ್ಲದಂತೆ ಕಾಡಿದರು. 179 ನಿಮಿಷ ಕ್ರೀಸ್‌ಗೆ ಅಂಟಿಕೊಂಡು ನಿಂತ ಅವರು ಎಂಟು ಬೌಂಡರಿ, ನಾಲ್ಕು ಸಿಕ್ಸರ್ ಒಳಗೊಂಡಂತೆ 100 ಎಸೆತಗಳಲ್ಲಿ 97 ರನ್ ಗಳಿಸಿದರು.ಆರಂಭಿಕ ಆಘಾತದಿಂದ ಚೇತರಿಕೆ ನೀಡಲು ಏಕಾಂಗಿ ಹೋರಾಟ ನಡೆಸಿದ ಚಾರ್ಲ್ಸ್‌ಗೆ ಮಧ್ಯಮ ಕ್ರಮಾಂಕದ ಡರೆನ್ ಬ್ರಾವೊ (55, 78ಎಸೆತ, 5 ಬೌಂಡರಿ, 1 ಸಿಕ್ಸರ್) ನೆರವಾದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 116 ರನ್‌ಗಳನ್ನು ಕಲೆ ಹಾಕಿದ್ದರಿಂದ ಆತಿಥೇಯರು ಸಂಕಷ್ಟದಿಂದ ಪಾರಾದರು. ಉತ್ತಮವಾಗಿ ರನ್ ಗಳಿಸುತ್ತಿದ್ದ ಈ ಜೋಡಿಯ ಆಟಕ್ಕೆ ಕಡಿವಾಣ ಹಾಕಿದ್ದು ಸ್ಪಿನ್ನರ್ ಆರ್. ಅಶ್ವಿನ್. 28ನೇ ಓವರ್‌ನಲ್ಲಿ ಬ್ರಾವೊ ಹೊಡೆದ ಚೆಂಡನ್ನು ಶಿಖರ್ ಧವನ್ ಹಿಡಿತಕ್ಕೆ ಪಡೆಯುವಲ್ಲಿ ತಪ್ಪು ಮಾಡಲಿಲ್ಲ.ಬ್ರಾವೊ ಔಟಾದ ನಂತರ 55 ರನ್ ಗಳಿಸುವ ಅಂತರದಲ್ಲಿ ಆತಿಥೇಯರು ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡರು. ಆದರೆ, ಕೊನೆಯಲ್ಲಿ ಡರೆನ್ ಸಮಿ (29, 25ಎಸೆತ, 2 ಬೌಂಡರಿ, 3 ಸಿಕ್ಸರ್) ತಂಡವನ್ನು ಗೆಲುವಿನ ದಡ ಸೇರಿಸಲು ನಡೆಸಿದ ಹೋರಾಟಕ್ಕೆ ಇಶಾಂತ್ ಅಡ್ಡಿಯಾದರು. ಸಮಿ ಔಟಾದ ಬೆನ್ನಲ್ಲೇ ಚಾರ್ಲ್ಸ್ ಕೂಡಾ ಶತಕದಂಚಿನಲ್ಲಿ ಎಡವಿ ಪೆವಿಲಿಯನ್ ಹಾದಿ ತುಳಿದರು.ಚಾರ್ಲ್ಸ್ ಔಟಾದ ವೇಳೆ ಭಾರತ ಗೆಲುವು ಪಡೆಯುವ ಕನಸು ಕಂಡಿತ್ತು. ಆದರೆ, ಕೆಮರ್ ರೋಚ್ (14) ಮತ್ತು ಟಿನೊ ಬಿಸ್ಟ್ (3) ವಿಂಡೀಸ್ ತಂಡಕ್ಕೆ ಗೆಲುವು ತಂದುಕೊಟ್ಟರಲ್ಲದೇ, ದೋನಿ ಪಡೆಯ ಜಯದ ಆಸೆಯನ್ನು ಪುಡಿಗಟ್ಟಿದರು. ವಿಂಡೀಸ್ ಪಡೆದ ಸತತ ಎರಡನೇ ಗೆಲುವು ಇದು. ಮೊದಲ ಪಂದ್ಯದಲ್ಲಿ ಲಂಕಾ ಎದುರು ಆರು ವಿಕೆಟ್‌ಗಳ ಜಯ ಸಾಧಿಸಿತ್ತು.ಭಾರತದ ಪರ ವೇಗಿ ಉಮೇಶ್ ಯಾದವ್ (43ಕ್ಕೆ3), ಇಶಾಂತ್ ಶರ್ಮ (51ಕ್ಕೆ2) ಹಾಗೂ ಅರ್. ಅಶ್ವಿನ್ (44ಕ್ಕೆ2) ಪ್ರಭಾವಿ ಎನಿಸಿದರು.

ಕಣಕ್ಕಿಳಿಯದ ದೋನಿ: ಬ್ಯಾಟಿಂಗ್ ಮಾಡುವ ವೇಳೆ ನಾಯಕ ದೋನಿ ಸ್ನಾಯುಸೆಳೆತದ ನೋವಿನಿಂದ ಬಳಲಿದ ಕಾರಣ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದರು. ಆದ್ದರಿಂದ ಅವರು ಫೀಲ್ಡಿಂಗ್ ಮಾಡಲು ಕಣಕ್ಕಿಳಿಯಲಿಲ್ಲ. ದೋನಿ ಬದಲು ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಿದರು.

ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 229

ರೋಹಿತ್ ಶರ್ಮ ಸಿ ಚಾರ್ಲ್ಸ್ ಬಿ ಡರೆನ್ ಸಮಿ  60

ಶಿಖರ್ ಧವನ್ ಸಿ ಮತ್ತು ಬಿ ಕೆಮರ್ ರೋಚ್  11

ವಿರಾಟ್ ಕೊಹ್ಲಿ ಸಿ ಕ್ರಿಸ್ ಗೇಲ್ ಬಿ ಡರೆನ್ ಸಮಿ  11

ದಿನೇಶ್ ಕಾರ್ತಿಕ್ ಸಿ ಮತ್ತು ಬಿ ಮರ್ಲಾನ್ ಸ್ಯಾಮುಯೆಲ್ಸ್  23

ಸುರೇಶ್ ರೈನಾ ಸಿ ದಿನೇಶ್ ರಾಮ್ದಿನ್ ಬಿ ಕೆಮರ್ ರೋಚ್  44

ಮಹೇಂದ್ರಸಿಂಗ್ ದೋನಿ ಬಿ ಟಿನೊ ಬೆಸ್ಟ್  27

ರವೀಂದ್ರ ಜಡೇಜ  ಬಿ ಟಿನೊ ಬೆಸ್ಟ್ 1 5

ಆರ್. ಅಶ್ವಿನ್ ಔಟಾಗದೆ  05

ಭುವನೇಶ್ವರ್ ಕುಮಾರ್ ಔಟಾಗದೆ  11

ಇತರೆ: (ಬೈ-5, ಲೆಗ್ ಬೈ-6, ವೈಡ್-9, ನೋ ಬಾಲ್-2) 22

ವಿಕೆಟ್ ಪತನ: 1-25 (ಧವನ್; 4.2), 2-39 (ಕೊಹ್ಲಿ; 9.1), 3-98 (ಕಾರ್ತಿಕ್; 25.3), 4-124 (ರೋಹಿತ್; 30.6), 5-182 (ರೈನಾ; 42.6), 6-212 (ಜಡೇಜ; 48.4).

ಬೌಲಿಂಗ್: ಕೆಮರ್ ರೋಚ್ 10-0-41-2, ಟಿನೊ ಬೆಸ್ಟ್ 10-052-2, ಡರೆನ್ ಸಮಿ 10-3-41-2, ಕೀರನ್    ಪೊಲಾರ್ಡ್ 1-0-8-0, ಸುನಿಲ್ ನಾರಾಯಣ್ 10-0-56-0, ಮರ್ಲಾನ್ ಸ್ಯಾಮುಯೆಲ್ಸ್ 9-1-20-1.

ವೆಸ್ಟ್ ಇಂಡೀಸ್ 47.4 ಓವರ್‌ಗಳಲ್ಲಿ 9 ವಿಕೆಟ್‌ಗೆ 230

ಕ್ರಿಸ್ ಗೇಲ್ ಸಿ ಸುರೇಶ್ ರೈನಾ ಬಿ ಉಮೇಶ್ ಯಾದವ್  11

ಜಾನ್ಸನ್ ಚಾರ್ಲ್ಸ್ ಸಿ ಇಶಾಂತ್ ಬಿ ಉಮೇಶ್ ಯಾದವ್  97

ಡೇವೊನ್ ಸ್ಮಿತ್ ಎಲ್‌ಬಿಡಬ್ಲ್ಯು ಬಿ ಉಮೇಶ್ ಯಾದವ್  00

ಮರ್ಲಾನ್ ಸ್ಯಾಮುಯೆಲ್ಸ್ ಬಿ ಭುವನೇಶ್ವರ್ ಕುಮಾರ್  01

ಡರೆನ್ ಬ್ರಾವೊ ಸಿ ಶಿಖರ್ ಧವನ್ ಬಿ ಆಶ್ವಿನ್  55

ಕೀರನ್ ಪೊಲಾರ್ಡ್ ಸಿ ದಿನೇಶ್ ಕಾರ್ತಿಕ್ ಬಿ ಇಶಾಂತ್ ಶರ್ಮ  04

ದಿನೇಶ್ ರಾಮ್ದಿನ್ ಬಿ ಅಶ್ವಿನ್  04

ಡರೆನ್ ಸಮಿ ಸಿ ಅಶ್ವಿನ್ ಬಿ ಇಶಾಂತ್ ಶರ್ಮ  29

ಕೆಮರ್ ರೋಚ್ ಔಟಾಗದೆ  14

ಸುನಿಲ್ ನಾರಾಯಣ್ ಸಿ ಶಿಖರ್ ಧವನ್ ಬಿ ಸುರೇಶ್ ರೈನಾ  05

ಟಿನೊ ಬಿಸ್ಟ್ ಔಟಾಗದೆ  03

ಇತರೆ: (ಲೆಗ್ ಬೈ-2, ವೈಡ್-5)  07

ವಿಕೆಟ್ ಪತನ: 1-13 (ಗೇಲ್; 1.4), 2-25 (ಸ್ಮಿತ್; 3.41), 3-26 (ಸ್ಯಾಮುಯೆಲ್ಸ್; 4.1), 4-142 (ಬ್ರಾವೊ; 27.5), 5-155 (ಪೊಲಾರ್ಡ್; 30.2), 6-161 (ರಾಮ್ದಿನ್; 31.4), 7-197 (ಸಮಿ; 36.5), 8-211 (ಚಾರ್ಲ್ಸ್; 40.2), 9-220 (ಸುನಿಲ್; 43.2).

ಬೌಲಿಂಗ್: ಭುವನೇಶ್ವರ್ ಕುಮಾರ್ 7-1-36-1, ಉಮೇಶ್ ಯಾದವ್ 9.4-2-43-3, ರವೀಂದ್ರ ಜಡೇಜ 10-1-50-0, ಇಶಾಂತ್ ಶರ್ಮ 9-0-51-2, ಆರ್. ಅಶ್ವಿನ್ 10-0-44-2, ಸುರೇಶ್ ರೈನಾ 2-1-4-1.

ಫಲಿತಾಂಶ: ವೆಸ್ಟ್ ಇಂಡೀಸ್‌ಗೆ ಒಂದು ವಿಕೆಟ್ ಜಯ ಹಾಗೂ ನಾಲ್ಕು ಪಾಯಿಂಟ್. ಪಂದ್ಯ ಶ್ರೇಷ್ಠ: ಜಾನ್ಸನ್ ಚಾರ್ಲ್ಸ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.