ನವದೆಹಲಿ, (ಪಿಟಿಐ): ಕಳೆದ 2008ರಲ್ಲಿ ಲೋಕಸಭೆಯಲ್ಲಿ ವಿಶ್ವಾಸಮತ ಯಾಚಿಸುವ ಸಮಯದಲ್ಲಿ ಕಾಂಗ್ರೆಸ್ ಪಕ್ಷದವರಾಗಲಿ, ಸರ್ಕಾರವಾಗಲಿ ಯಾವುದೇ ಬಗೆಯ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿಲ್ಲವೆಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಹೇಳಿದ್ದಾರೆ.

ಆ ಸಂದರ್ಭದಲ್ಲಿ ಯಾವುದೇ ಬಗೆಯ ಭ್ರಷ್ಟಾಚಾರ ನಡೆದಿಲ್ಲ. ಈ ಕುರಿತ ವಿಕಲೀಕ್ಸ್ ಆರೋಪಗಳು ~ಸಮರ್ಥನೀಯವಲ್ಲ~ ಜೊತೆಗೆ ~ಕಪೋಲಕಲ್ಪಿತ~ ಎಂದು ಅವರು ಆರೋಪಗಳನ್ನು ತಳ್ಳಿಹಾಕಿದರು.

ಸಂಸತ್ತಿನ ಎರಡೂ ಸದನಗಳಲ್ಲಿ ಶುಕ್ರವಾರ ಮಧ್ಯಾಹ್ನ ಹೇಳಿಕೆ ನೀಡಿದ ಪ್ರಧಾನಿ, ~ಇದು ಹಳೆಯ ಆರೋಪ, ಅದರ ಕುರಿತು ಚರ್ಚೆಗಳು ನಡೆದಿವೆ. ಕೊನೆಗೆ ಜನರೂ ಆರೋಪಗಳನ್ನು ತಿರಸ್ಕರಿಸಿದ್ದಾರೆ~ ಎನ್ನುತ್ತಾ ಅವರು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.

~ವಿಶ್ವಾಸಮತ ಯಾಚನೆಯ ವೇಳೆ ಮತ ಗಳಿಸಲು ಸಂಸದರಿಗೆ ಹಣ ನೀಡಲಾಗಿದೆ ಎಂಬ ವಿಕಿಲೀಕ್ಸ್ ಆರೋಪಗಳನ್ನು ಸರ್ಕಾರ ಸಾರಾಸಗಟಾಗಿ ವಿರೋಧಿಸುವುದಾಗಿ~ ದೃಢವಾದ ದ್ವನಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸ್ಪಷ್ಟಪಡಿಸಿದರು,

ಪ್ರಧಾನಿಯ ಹೇಳಿಕೆಯ ನಂತರ ಎರಡೂ ಸದನಗಳಲ್ಲಿ ವಿರೋಧ ಪಕ್ಷದ ಸದಸ್ಯರು ಕೆಲವು ವಿವರಣೆ ಪಡೆಯಲು ಮುಂದಾದಾಗ ಅವರಿಗೆ ಅವಕಾಶ ನಿರಾಕರಿಸಲಾಯಿತು. ಆಗ ಸ್ವಲ್ಪ ಸಮಯ ಗದ್ದಲವೂ ನಡೆಯಿತು. ಅಲ್ಪಾವಧಿಗೆ ಸದನಗಳನ್ನು ಮುಂದೂಡಿದ ಪ್ರಸಂಗವೂ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.