ಶುಕ್ರವಾರ, ಜನವರಿ 24, 2020
16 °C

ವಿಜಾಪುರ: ಹುಳುಕು ಹಲ್ಲಿಗೆ ವಿನೂತನ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಹುಳುಕು ಹಲ್ಲು ಹಾಗೂ ಬಾಯಿಯ ಬಾವು ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕನಿಗೆ ವಿನೂತನ ಪ್ರಯೋಗದ ಮೂಲಕ ಚಿಕಿತ್ಸೆ ನೀಡಿ ಗುಣಪಡಿಸಿದ್ದಾಗಿ ಇಲ್ಲಿಯ ಉಪಲಿ ಬುರುಜ್‌ ಹತ್ತಿರದ ಕಲ್ಲೂರ ದಂತ ಆಸ್ಪತ್ರೆಯ ಮುಖ್ಯ ವೈದ್ಯ ಡಾ.ರವಿ ಕಲ್ಲೂರ ಹೇಳಿದರು.ಗ್ರಾಮವೊಂದರ 13 ವರ್ಷದ ಬಾಲಕ, ಹಲ್ಲಿನ ತೊಂದರೆಯಿಂದಾಗಿ ಮುಖಕ್ಕೆ ಬಾವು ಬಂದಿದೆ ಎಂದು ಉಪಚಾರಕ್ಕೆ ಆಗಮಿಸಿದ್ದ. ಆತನನ್ನು ಪರೀಕ್ಷಿಸಿದಾಗ ಮೇಲ್ಭಾಗ ಮತ್ತು ಕೆಳಭಾಗದ ಒಟ್ಟು ನಾಲ್ಕು ಹಲ್ಲುಗಳು ಹುಳುಕು ಹತ್ತಿದ್ದವು. ದಂತ ಪಂಕ್ತಿಗಳು ವಕ್ರವಾಗಿರುವುದು ಕಂಡು ಬಂತು ಎಂದು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.ಹಲ್ಲು ಕಿತ್ತ ಮೇಲೆ ಆ ಸ್ಥಳ ಹಾಗೇ ಬಿಟ್ಟರೆ ಬದಿಯ ಹಲ್ಲುಗಳು ವಾಲುವ, ಅಕ್ಕಪಕ್ಕದ ಹಲ್ಲುಗಳೂ ಹುಳುಕು ಹತ್ತುವ  ಸಂಭವ ಇರುತ್ತದೆ. ಇಂತಹ ಸಂದರ್ಭದಲ್ಲಿ ಕೃತಕ ದಂತ ಜೋಡಣೆ ಅವಶ್ಯವಾಗಿರುತ್ತದೆ ಎಂದರು.‘ರೂಢಿಯಲ್ಲಿರುವ ಎಲ್ಲ ಬಗೆಯ ಚಿಕಿತ್ಸಾ ವಿಧಾನಗಳ ಬಗೆಗೆ ಸಹೋ ದ್ಯೋಗಿ ಡಾ.ಸವಿತಾ ಕಲ್ಲೂರ ಮತ್ತು ನಾನು ಚರ್ಚಿಸಿದೆವು. ಕಡಿಮೆ ವಯಸ್ಸು ಹಾಗೂ ಬಡತನದ ಕಾರಣ ಆ ಚಿಕಿತ್ಸಾ ವಿಧಾನಗಳು ಈ ಬಾಲಕನಿಗೆ ಸಾಧುವಲ್ಲ ಎಂಬ ನಿರ್ಧಾರಕ್ಕೆ ಬಂದೆವು. ವಕ್ರದಂತ ಚಿಕಿತ್ಸೆಗೆ ಬಳಸುವ ಕ್ಲಿಪ್‌ಗಳ ಸಹಾಯ ದಿಂದ ಸುಧಾರಿತ ಹೊಸ ಬಗೆಯ ಚಿಕಿತ್ಸೆ ನೀಡಿದೆವು’ ಎಂದು ಹೇಳಿದರು.‘ಬಾಲಕನ ಹುಳುಕು ಹತ್ತಿದ ಹಲ್ಲುಗಳನ್ನು ಕೀಳಲಾಯಿತು. ನಂತರ ಆತನ ದಂತ ಪಂಕ್ತಿಗೆ ಕ್ಲಿಪ್‌ಗಳನ್ನು ಅಳವಡಿಸಿ ಎರಡೂವರೆ ವರ್ಷಗಳವ ರೆಗೆ ಚಿಕಿತ್ಸೆ ನಿಡಲಾಯಿತು. ತಿಂಗಳಿ ಗೊಮ್ಮೆ ಆ ಬಾಲಕನಿಗೆ ಉಪಚಾರ ಕ್ಕೆಂದು ಬರಲು ತಿಳಿಸಲಾಯಿತು. ಆತನ ದವಡೆಯ ಹಿಂಭಾಗದ ಹಲ್ಲುಗಳು ಕಿತ್ತಿದ ಖಾಲಿ ಸ್ಥಳಕ್ಕೆ ಸರಿಯುತ್ತಿ ರುವುದು ಪ್ರತಿ ಭೇಟಿಯ ಸಮಯದಲ್ಲಿ ಗಮನಕ್ಕೆ ಬರುತ್ತಿತ್ತು. ಇದರಿಂದ ಹಲ್ಲು ಕಿತ್ತಿದ್ದ ಆ ಖಾಲಿ ಸ್ಥಳ ಭರ್ತಿ ಆದಂತಾ ಯಿತು. ಹುಳುಕು ಹತ್ತಿದ ಹಲ್ಲುಗಳನ್ನು ತೆಗೆದರೂ ಯಾವುದೇ ಕೃತಕ ಹಲ್ಲು ಅಳವಡಿಸಲಿಲ್ಲ. ಆತನಿಗಿದ್ದ ವಕ್ರ ದಂತ ಸಮಸ್ಯೆ ಸರಿ ಆಯಿತು. ರೋಗಿಯ ಬಾಯಿಗೆ ಬಂದಿದ್ದ ಬಾವು ಕಡಿಮೆ ಯಾಯಿತು’ ಎಂದು  ವಿವರಿಸಿದರು.‘ಈ ಚಿಕಿತ್ಸೆ ಸುದೀರ್ಘ ಹಾಗೂ ವೆಚ್ಚದಾಯಕ (₨60,000) ಆದರೂ ಬಾಲಕನ ಹಲ್ಲುಗಳು ಗಟ್ಟಿಮುಟ್ಟಾಗಿವೆ. ಇಂತಹ ಚಿಕಿತ್ಸೆ ಜಿಲ್ಲೆಯಲ್ಲಿ ಇದೇ ಮೊದಲು ’ ಎಂದು ಡಾ.ಕಲ್ಲೂರ ಹೇಳಿದರು.

ಪ್ರತಿಕ್ರಿಯಿಸಿ (+)