ಕಾರವಾರ: ಇಲ್ಲಿಯ ಸರ್ಕಾರಿ ಎಂಜಿನಿ ರಿಂಗ್ ಕಾಲೇಜು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಹಸ್ತಾಂತರ ಮತ್ತು ನೂತನ ಕಟ್ಟಡ ನಿರ್ಮಾಣ ಸ್ಥಳ ಪರಿಶೀಲನೆ ಕುರಿತು ವಿಟಿಯು ಮತ್ತು ಸರ್ಕಾರದ ಪ್ರತಿನಿಧಿ ಗಳನ್ನೊಳಗೊಂಡ ತಂಡವು ಶುಕ್ರವಾರ ಇಲ್ಲಿಗೆ ಭೇಟಿ ನೀಡಿತು.

ಸದ್ಯ ಇಲ್ಲಿಯ ಪಾಲಿಟೆಕ್ನಿಕ್ ಕಾಲೇಜಿ ನಲ್ಲಿ ನಡೆಯುತ್ತಿರುವ ಎಂಜಿನಿಯರಿಂಗ್ ಕಾಲೇಜು ತರಗತಿಗಳು ಮತ್ತು ಅಲ್ಲಿ ರುವ ಸೌಕರ್ಯಗಳನ್ನು ವೀಕ್ಷಿಸಿದ ವಿಟಿಯುದ ಉನ್ನತಾಧಿಕಾರಿಗಳ ತಂಡ ಬಳಿಕ ಕಾಲೇಜಿನ ಪ್ರಾಚಾರ್ಯರು ಉಪನ್ಯಾಸಕರುಗಳೊಡನೆ ಸಮಾ ಲೋಚನೆ ನಡೆಸಿತು. ನೂತನ ಕಟ್ಟಡ ನಿರ್ಮಾಣಕ್ಕೆ ತಾಲ್ಲೂಕಿನ ಮಾಜಾಳಿ ಯಲ್ಲಿ ಗೊತ್ತು ಪಡಿಸಲಾದ ಸ್ಥಳದ ಪರಿಶೀಲನೆ ನಡೆಯಿತು.

ಉನ್ನತಾಧಿಕಾರಿಗಳ ತಂಡದ ನೇತೃತ್ವ ವಹಿಸಿದ್ದ ವಿಟಿಯು ನಿವೃತ್ತ ಉಪ ಕುಲಪತಿ ರಾಜಶೇಖರಯ್ಯ ಸುದ್ದಿಗಾರ ರೊಂದಿಗೆ ಮಾತನಾಡಿ, ಕಾಲೇಜಿನ ಪಠ್ಯ ಹಾಗೂ ಇನ್ನಿತರ ಸಾಮಗ್ರಿಗಳ ನ್ನೊಳಗೊಂಡಂತೆ ಆಗಿರುವ ಖರ್ಚು ಮತ್ತು ಸ್ಥಳದ ಕುರಿತು ವಿ.ಟಿ.ಯು ಗೆ ಸಂಪೂರ್ಣ ಮಾಹಿತಿ ನೀಡಲಾಗು ವುದು. ಇದರ ಆಧಾರದ ಮೇಲೆ ವಿಟಿಯು ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದರು.

ತಾಂತ್ರಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ವಿಜಯ ಕುಮಾರ ಮಾತ ನಾಡಿ, ರಾಜ್ಯದಲ್ಲಿ ಏಕಕಾಲದಲ್ಲಿ 10 ಎಂಜಿನಿಯರಿಂಗ್ ಕಾಲೇಜು ಮಂಜೂ ರಾಗಿದೆ. ಆ ಪೈಕಿ ಆರು ಕಾಲೇಜು ಕಟ್ಟಡ ನಿರ್ಮಾಣಮಾಡಲಾಗಿದೆ. ಉಳಿದ ನಾಲ್ಕು ಕಾಲೇಜುಗಳ ನಿರ್ಮಾಣಕ್ಕೆ ವಿಟಿಯು ಮುಂದೆ ಬಂದಿದ್ದು ಇಲ್ಲಿಯ ಎಂಜಿನಿಯರಿಂಗ್ ಕಾಲೇಜೂ ಸೇರಿದೆ. ಸರ್ಕಾರಿ ಎಂಜಿನಿ ಯರಿಂಗ್ ಕಾಲೇಜುಗಳಲ್ಲಿ ಶೇ.60 ರಷ್ಟು ಫಲಿತಾಂಶ ಬರುತ್ತಿದ್ದು ಸಾಧನೆ ಸಮಾಧಾನಕರವಾಗಿದೆ ಎಂದರು.

ವಿಟಿಯು ರಿಜಿಸ್ಟ್ರಾರ್ ಡಾ. ಎಸ್.ಕೆ.ಕೋರಿ, ಬೆಂಗಳೂರು ಅಂಬೇಡ್ಕರ್ ಕಾಲೇಜಿನ ಡಾ. ಮಾರ್ಟಿನ್ ಹಾಗೂ ತಾಂತ್ರಿಕ ಶಿಕ್ಷಣ ಜಂಟಿ ನಿರ್ದೇಶಕ ಡಾ. ವಿಜಯ ಕುಮಾರ, ಮಾಜಿ ವಿಧಾನ ಪರಿಷತ್ ಸದಸ್ಯೆ ಶುಭಲತಾ ಅಸ್ನೋ ಟಿಕರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್.ಜಿ .ನಾಯ್ಕ, ಪ್ರಾಚಾರ್ಯ ವಿ.ಎ.ರಾಯ್ಕರ್, ಜಗದೀಶ ಬಿರ್ಕೋಡಿಕರ್, ರಾಜೇಶ ನಾಯಕ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.