ಬುಧವಾರ, ಮೇ 12, 2021
24 °C

ವಿತ್ತೀಯ ನಿರ್ವಹಣೆಗೆ ದೂರದೃಷ್ಟಿ ಅಗತ್ಯ: ಆರ್‌ಬಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ದೇಶದ ಆರ್ಥಿಕ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಕೇಂದ್ರವಷ್ಟೇ ಅಲ್ಲ, ರಾಜ್ಯ ಸರ್ಕಾರಗಳೂ ದೂರದೃಷ್ಟಿಯ ವಿತ್ತೀಯ ಧೋರಣೆ ಅನುಸರಿಸಬೇಕಾಗಿದೆ ಎಂದು ಕಿವಿಮಾತು ಹೇಳಿದೆ.ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಹಣ ಮತ್ತು ಹಣಕಾಸು ವಹಿವಾಟು ಕುರಿತ 14ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಆರ್‌ಬಿಐ ಉಪ ಗವರ್ನರ್ ಸುಬೀರ್ ಗೋಕರ್ಣ, ನಿಯಮ ಆಧಾರಿತ ವಿಧಾನ  ಅನುಸರಿಸುವ ಕ್ರಮಕ್ಕೆ ಮರಳುವ ವಿಚಾರದಲ್ಲಿ ಸರ್ಕಾರಗಳು ಬದ್ಧತೆ ತೋರಬೇಕಾಗಿರುವುದನ್ನು ಈ ವರ್ಷದ ಮುಂಗಡಪತ್ರದಲ್ಲಿ ಆದ್ಯತೆ ನೀಡಲಾಗಿದೆ ಎಂದರು.ಈ ಸಾಲಿನ ಬಜೆಟ್‌ನಲ್ಲಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರೂ, `ಒಟ್ಟು ಆಂತರಿಕ ಉತ್ಪನ್ನ ಪ್ರಮಾಣದಲ್ಲಿನ ವಿತ್ತೀಯ ಕೊರತೆ ಯನ್ನು ಶೇ 5.9ರಿಂದ ಶೇ 5.1ಕ್ಕೆ ತಗ್ಗಿಸುವ ಅಗತ್ಯವಿದೆ~ ಎಂದಿರುವುದನ್ನು ಇಲ್ಲಿ  ಉಲ್ಲೇಖಿಸಬಹುದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.