ಬುಧವಾರ, ಜನವರಿ 22, 2020
24 °C

ವಿದೇಶಿ ವಿನಿಮಯ ರೂ 17.74 ಲಕ್ಷ ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಐಎಎನ್‌ಎಸ್‌): ನವೆಂಬರ್‌ 22ಕ್ಕೆ ಕೊನೆಗೊಂಡ ವಾರ­ದಲ್ಲಿ ದೇಶದ ವಿದೇಶಿ ವಿನಿಮಯ ಸಂಗ್ರಹ 296 ಕೋಟಿ ಡಾಲರ್‌ಗಳಷ್ಟು (ರೂ18,352 ಕೋಟಿ) ಹೆಚ್ಚಿದ್ದು, ಒಟ್ಟು ಸಂಗ್ರಹ 28626 ಕೋಟಿ ಡಾಲರ್‌ಗಳಿಗೆ (ರೂ 17.74 ಲಕ್ಷ ಕೋಟಿ)  ಏರಿಕೆ ಕಂಡಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಹೇಳಿದೆ.



ಇದಕ್ಕೂ ಹಿಂದಿನ ವಾರ ವಿದೇಶಿ ವಿನಿಮಯ ಸಂಗ್ರಹ 28,357 ಕೋಟಿ  ಡಾಲರ್‌ಗಳಷ್ಟು (₨17.72 ಲಕ್ಷ ಕೋಟಿ) ಇತ್ತು.

ಪ್ರತಿಕ್ರಿಯಿಸಿ (+)