ದೇವನಹಳ್ಳಿ: ತಾಲ್ಲೂಕಿನಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳಿಗೆ ಸಮವಸ್ತ್ರ ವಿತರಣೆ ಕಾರ್ಯ ಆರಂಭವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮುನಿರಾಜು ತಿಳಿಸಿದರು. ಶೈಕ್ಷಣಿಕ ಸಾಲಿನ ಸಿದ್ದತೆ ಕುರಿತು ಮಾತನಾಡಿದ ಅವರು, ‘2014–15 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಕ್ರಿಯೆಗಳು ಮೇ 30 ರಿಂದ ಆರಂಭವಾಗಲಿವೆ. ಈ ದಿಸೆಯಲ್ಲಿ ತಾಲ್ಲೂಕಿನ ಒಟ್ಟು 284 ಶಾಲೆಗಳಿಗೆ ಈವರೆವಿಗೂ 16,570 ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ ಎಂದು ವಿವರಿಸಿದರು.

ಪುಸ್ತಕ ವಿತರಣೆ ಮಾಡಿರುವ ಶಾಲೆಗಳಲ್ಲಿ ತಾಲ್ಲೂಕಿನ 118 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು, 93ಸರ್ಕಾರಿ ಹಿರಿಯ ಪ್ರಾಥಮಿಕ, 18 ಸರ್ಕಾರಿ ಪ್ರೌಢಶಾಲೆ ಹಾಗೂ ಖಾಸಗಿ ಕಿರಿಯ, ಹಿರಿಯ ಮತ್ತು ಪ್ರೌಢಶಾಲೆಗಳು ಸೇರಿವೆ ಎಂದರು. 10 ಖಾಸಗಿ ಶಾಲೆಗಳು ಇನ್ನೂ ಪಠ್ಯಪುಸ್ತಕ ಪಡೆದುಕೊಂಡಿಲ್ಲ. ಈಗಾಗಲೇ ಶೇ 95 ರಷ್ಟು ಪಠ್ಯಪುಸ್ತಕ ವಿತರಣೆಯಾಗಿದೆ.

ಒಂದನೇ ತರಗತಿಯ ಇಂಗ್ಲಿಷ್, 2 ನೇ ತರಗತಿಯ ಗಣಿತ, ನಾಲ್ಕನೇ ತರಗತಿ ಗಣಿತ, 8 ನೇ ತರಗತಿ ಕನ್ನಡ ಮತ್ತು ಹತ್ತನೇ ತರಗತಿಯ ವಿಜ್ಞಾನ ವಿಷಯದ ಪಠ್ಯಪುಸ್ತಕಗಳನ್ನು ಇನ್ನೂ ಪೂರೈಕೆ ಮಾಡಬೇಕಿದೆ ಎಂದರು. ಮಕ್ಕಳ ತರಗತಿಗನುಗುಣವಾಗಿ 1–2, 3–4, 5 ರಿಂದ 7, 8ರಿಂದ 10ರಲ್ಲಿ ವ್ಯಾಸಂಗಕ್ಕೆ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಈ ಹಿಂದೆ ನಿಗದಿಪಡಿಸಿದಂತೆ ಅಗತ್ಯಕ್ಕೆ ಅನುಗುಣವಾಗಿ ಉಚಿತ ಸಮವಸ್ತ್ರಕ್ಕಾಗಿ ತೆಳುನೀಲಿ ಮತ್ತು ಮತ್ತು ಅಪ್ಪಟ ನೀಲಿ ಬಣ್ಣದ ಬಟ್ಟೆ ವಿತರಿಸಲಾಗುತ್ತಿದೆ.

ಶಾಲೆ ಆರಂಭಕ್ಕೆ ಮುನ್ನ ಪುಸ್ತಕ ಮತ್ತು ಸಮವಸ್ತ್ರ ಸಿದ್ಧತೆ ಮಾಡಿಕೊಂಡು ಮೇ 30 ರಂದು ವಿತರಿಸುವಂತೆ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದರು. ಈಗಾಗಲೇ ಇಲಾಖೆ ನಿರ್ದೇಶನದಂತೆ ಮೇ 30 ರಂದು ಶಾಲೆ ಆರಂಭಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.