ಬುಧವಾರ, ಮೇ 18, 2022
27 °C

ವಿದ್ಯಾರ್ಥಿಗಳ ಪರಿಕಲ್ಪನೆಯ ಸೈಕಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಗವಿಕಲರ ಸಮುದಾಯದಲ್ಲಿ ಟ್ರೈಸಿಕಲ್‌ಗಳ (ತ್ರಿಚಕ್ರ ಸೈಕಲ್‌ಗಳು) ಬಳಕೆ ಸಾಮಾನ್ಯ. ಆದರೆ ಬಹುತೇಕರಿಗೆ ಈ ತ್ರಿಚಕ್ರ ಸೈಕಲ್‌ಗಳನ್ನು ಕೈಗಳಿಂದ ತುಳಿಯುವಷ್ಟು ಶಕ್ತಿ ಇರುವುದಿಲ್ಲ. ಇಂತಹ ಜನರಿಗೆ ಉಪಯೋಗವಾಗಲೆಂಬ ಉದ್ದೇಶದಿಂದ ಬಿಎಂಎಸ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಬ್ಯಾಟರಿ ಚಾಲಿತ ವಿಶೇಷ ಟ್ರೈ ಸಿಕಲ್‌ಗಳನ್ನು ಆವಿಷ್ಕರಿಸಿದ್ದಾರೆ. ಈ ನೂತನ ಆವಿಷ್ಕಾರದ ಟ್ರೈಸಿಕಲ್‌ಗೆ ವಿದ್ಯುತ್ ಮೋಟಾರ್ ಅಳವಡಿಸಲಾಗಿದೆ.ಕೈಚಾಲಿತ ತ್ರಿಚಕ್ರ ಸೈಕಲ್‌ಗೆ ಬ್ಯಾಟರಿ ಹಾಗೂ ನಿಯಂತ್ರಕವನ್ನು ಅಳವಡಿಸುವ ಮೂಲಕ ಇದರ ಉಪಯೋಗವನ್ನು ಸುಲಭಗೊಳಿಸಲಾಗಿದೆ.ಈ ಯೋಜನೆಯ ಮುಖ್ಯಸ್ಥರು ಹಾಗೂ ಐಎಂಇ ವಿಭಾಗದ ಪ್ರೊ. ಬಿ. ರಮೇಶ್ ನಾಯಕ್ ಅವರು, `ಈಗಿನ ತಲೆಮಾರಿನ ವಿದ್ಯಾರ್ಥಿಗಳಿಗೆ ಸಾಮಾಜಿಕ ಕಾಳಜಿ ಇರುವುದು ಈ ಆವಿಷ್ಕಾರದಿಂದ ತಿಳಿಯುತ್ತದೆ. ಇವರ ಪರಿಕಲ್ಪನೆಯಿಂದಾಗಿ ಅಂಗವಿಕಲರಿಗೆ ಬ್ಯಾಟರಿ ಆಧರಿತ ತ್ರಿಚಕ್ರ ಸೈಕಲ್‌ಗಳು ಲಭಿಸಿದಂತಾಗಿದೆ' ಎಂದರು.   ಈ ಯೋಜನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಲ್ಲಿ ಒಬ್ಬರಾದ ನೇಹಾ ರಾವ್ ಅವರು,  `ಈ ಟ್ರೈಸಿಕಲ್ ವಿನ್ಯಾಸಗೊಳಿಸುವ ಮುನ್ನ ಕೈಗೆಟುಕುವ ದರದಲ್ಲಿ, ಅತ್ಯಂತ ದೀರ್ಘಾವಧಿ ಬಾಳಿಕೆ ಬರುವ ವಿದ್ಯುತ್ ಟ್ರೈಸಿಕಲ್ ಪರಿಚಯಿಸುವ ಉದ್ದೇಶ ಹೊಂದಲಾಗಿತ್ತು' ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.