ಭಾನುವಾರ, ಜನವರಿ 26, 2020
18 °C

ವಿದ್ಯಾರ್ಥಿಗಳ ಪ್ರಯೋಗಕ್ಕೆ ಇನೋವೇಷನ್ ಹಬ್

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೈಜ್ಞಾನಿಕ ಸಿದ್ಧಾಂತ­ಗಳನ್ನು ಕಾರ್ಯರೂಪಕ್ಕೆ  ತರುವುದೇ ನಿಜವಾದ ಅನ್ವೇಷಣೆ ಎಂದು ಬಯೋಕಾನ್‌ನ ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಂದಾರ್ ಷಾ  ಹೇಳಿದರು.ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಮತ್ತು ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯ ಸಮಿತಿಯ ಜಂಟಿ ಸಹಯೋಗದಲ್ಲಿ ಆರಂಭಿಸಲಾಗಿರುವ  ಶಾಲಾ ವಿದ್ಯಾರ್ಥಿಗಳ ಪ್ರಯೋಗಾಲಯ ‘ಇನೋವೇಷನ್ ಹಬ್’ನ್ನು ಅವರು  ಗುರುವಾರ ಉದ್ಘಾಟಿಸಿದರು.ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ವಸ್ತು ಪ್ರದರ್ಶನವನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ‘ಹೇಗೆ ಮತ್ತು ಏಕೆ ಎಂಬ ಪ್ರಶ್ನೆಗಳೇ ಅನ್ವೇಷಣೆಯ ಮೂಲ.ಪ್ರತಿ ಸಿದ್ಧಾಂತವನ್ನು ಎಲ್ಲಿ ಮತ್ತು ಹೇಗೆ ವಿಭಿನ್ನವಾಗಿ ಅನ್ವಯಿಸಬಹುದು ಎಂದು ಹುಡುಕುವ ಅನ್ವೇಷಣೆ ಅರ್ಥಪೂರ್ಣವಾದುದು.  ಭಾರ­ತೀ­­­­­ಯರ ಕೈಗೆಟಕುವ ಉತ್ಪನ್ನ-ಗಳನ್ನು ರೂಪಿಸುವೆಡೆ  ನಮ್ಮ ಚಿಂತನೆ

ಗಳನ್ನು ಹರಿಸುವ ಅವಶ್ಯಕತೆಯಿದೆ’ ಎಂದರು.ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯ ಸಮಿತಿಯ ನಿರ್ದೇಶಕ ಜಿ.ಎಸ್.ರಾಟೆಲಾ ಮಾತನಾಡಿ ‘ಶಾಲೆಗಳು ನೀಡಲಾಗದಂತಹ ಪ್ರಯೋಗ ಮತ್ತು ಅನ್ವೇಷಣೆಯ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವ ನಿಟ್ಟಿನಲ್ಲಿ ಇನೋವೇಷನ್ ಹಬ್‌ನ್ನು ಸ್ಥಾಪಿಸಲಾಗಿದೆ. ಹಬ್‌ನ ಸದಸ್ಯರಾಗುವ ಶಾಲಾ ವಿದ್ಯಾರ್ಥಿಗಳು ತಮ್ಮ ಚಿಂತನೆಗಳ ಪ್ರಯೋಗಕ್ಕೆ ಈ ವೇದಿಕೆಯನ್ನು ಬಳಸಿಕೊಳ್ಳಬಹುದು’ ಎಂದರು.

ಪ್ರತಿಕ್ರಿಯಿಸಿ (+)