ಮೈಸೂರು: ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆ ಮತ್ತು ಮೈಸೂರು ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ಜೂನ್ 28ರಿಂದ ಜುಲೈ 1ರವರೆಗೆ `ವಿದ್ಯಾಶ್ರಮ ಕಪ್~ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ ನಡೆಯಲಿದೆ.

ಮಾನಂದವಾಡಿ ರಸ್ತೆಯ ಎನ್ಐಇ ಒಳಾಂಗಣ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಲಿದೆ. ಪುರುಷ ಮತ್ತು ಮಹಿಳೆಯರ ಸಿಂಗಲ್ಸ್, ಯೂತ್, ಜೂನಿಯರ್, ಸಬ್ ಜೂನಿಯರ್, ಕೆಡೆಟ್ ವಿಭಾಗಗಳ ಬಾಲಕ, ಬಾಲಕಿಯರ ಸ್ಪರ್ಧೆಗಳು, ನಾನ್ಮೆಡಲಿಸ್ಟ್ ಸಿಂಗಲ್ಸ್ ಮತ್ತು ಡಬಲ್ಸ್, ವೆಟರನ್ಸ್ ಸಿಂಗಲ್ಸ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ಮುಖ್ಯ ರೆಫರಿಯಾಗಿ ಜಾರ್ಜ್ ಎಸ್. ಹೆನ್ರಿ ಕಾರ್ಯನಿರ್ವಹಿಸುವರು. ಕೆಟಿಟಿಎ ಪ್ರತಿನಿಧಿ ರಾಮಕುಮಾರ್, ಜಂಟಿ ಕಾರ್ಯದರ್ಶಿ ಮತ್ತು ತಾಂತ್ರಿಕ ಸಮಿತಿ ಅಧ್ಯಕ್ಷ ಟಿ.ಜಿ. ಉಪಾಧ್ಯೆ ಆಗಮಿಸಲಿದ್ದಾರೆ.

ಹೆಸರು ನೋಂದಾಯಿಸಲು ಜೂನ್ 24 ಕೊನೆಯ ದಿನವಾಗಿದ್ದು, ಸಹಾಯಕ ರೆಫರಿ ಕೆ.ಆರ್. ಮಂಜುನಾಥ್ ನಂ. 426, 2ನೇ ಮುಖ್ಯರಸ್ತೆ, ಎಲ್ಐಸಿ ಕಾಲೋನಿ, ಶ್ರೀರಾಮಪುರ ಎರಡನೆ ಹಂತ, ಮೈಸೂರು -570023, (ಮೊಬೈಲ್: 9880977827, ಇಮೇಲ್: manjunathkrlic@gmail.com ಅವರಿಗೆ ಕಳುಹಿಸಿಕೊಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.