ತುರುವೇಕೆರೆ: ಎರಡು ದಿನಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆ ನಿರಂತರವಾಗಿದ್ದು, ಆದಾಯ, ಜಾತಿ ಪ್ರಮಾಣ ಪತ್ರ ಪಡೆಯಲು ವಿದ್ಯಾರ್ಥಿಗಳು, ಪೋಷಕರು ನೆಮ್ಮದಿ ಕೇಂದ್ರದ ಮುಂದೆ ಗಂಟಗಟ್ಟಲೆ ನಿಲ್ಲಬೇಕಾಗಿದೆ.

ಶಾಲಾ ಕಾಲೇಜುಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ವಿದ್ಯಾರ್ಥಿಗಳು ಜಾತಿ, ಆದಾಯ ಪ್ರಮಾಣಪತ್ರಗಳನ್ನು ಅರ್ಜಿಗಳೊಂದಿಗೆ ಸಲ್ಲಿಸಬೇಕಿದೆ. ಇದಕ್ಕಾಗಿ ವಿದ್ಯಾರ್ಥಿಗಳು, ಪೋಷಕರು ನೆಮ್ಮದಿ ಕೇಂದ್ರದ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಎರಡು ದಿನಗಳಿಂದ ವಿದ್ಯುತ್ ಕೈ ಕೊಡುತ್ತಿರುವುದರಿಂದ ಅರ್ಜಿಗಳು ವಿಲೇವಾರಿಯಾಗದೆ ಕೇಂದ್ರದಲ್ಲೇ ನೆನೆಗುದಿಗೆ ಬಿದ್ದಿವೆ. ಇದಲ್ಲದೆ ಅಂತರ್ಜಾಲ ಸಂಪರ್ಕವೂ ಸಿಗದಿರುವುದರಿಂದ ವಿಲೇವಾರಿ ವಿಳಂಬವಾಗಿದ್ದು ಪರದಾಡುವಂತಾಗಿದೆ.

ಈ ಸಮಸ್ಯೆ ಜತೆ ಪ್ರತಿ ವಿದ್ಯಾರ್ಥಿ ನೋಟರಿಯಿಂದ ಪಡೆದ ಪ್ರಮಾಣ ಪತ್ರ ಸಲ್ಲಿಸಬೇಕಿರುವುದೂ ಬಡ ವಿದ್ಯಾರ್ಥಿಗಳಿಗೆ ದೊಡ್ಡ ಹೊರೆಯಾಗಿದೆ. ನಾವೇ ಓಡಾಡಿ ಪ್ರಮಾಣ ಪತ್ರ ಮಾಡಿಸಿಕೊಂಡರೆ ಕನಿಷ್ಠ 150 ರೂಪಾಯಿ ಖರ್ಚಾಗುತ್ತದೆ. ಮಧ್ಯವರ್ತಿ ಮೂಲಕವಾದರೆ ರೂ.200 ಖರ್ಚಾಗುತ್ತದೆ. ಒಂದೇ ಕುಟುಂಬದ ಎರಡೂ ಮಕ್ಕಳಿಗೆ ಪ್ರತ್ಯೇಕ ಪ್ರಮಾಣ ಪತ್ರ ಸಲ್ಲಿಸಬೇಕು.

ಆಧಾರ್, ಚುನಾವಣಾ ಗುರುತಿನ ಚೀಟಿ ಇರುವಾಗ ಈ ಪ್ರಮಾಣ ಪತ್ರದ ಅಗತ್ಯವೇನಿದೆ? ಜಿಲ್ಲಾಧಿಕಾರಿ ಜೂನ್ 1ರಿಂದ ಪ್ರಮಾಣ ಪತ್ರ ಸಲ್ಲಿಕೆ ರದ್ದು ಪಡಿಸುವುದಾಗಿ ಹೇಳಿದ್ದರೂ; ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.