ಭಾನುವಾರ, ಜೂಲೈ 5, 2020
22 °C

ವಿದ್ಯುತ್ ಶಾಕ್ ನೀಡಿ ಮಹಿಳೆ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಐಎಎನ್‌ಎಸ್): ವ್ಯಕ್ತಿಯೊಬ್ಬರೊಂದಿಗೆ ಪಲಾಯನಗೈದಿದ್ದ  ಮಹಿಳೆಯೊಬ್ಬರನ್ನು ವಿದ್ಯುತ್ ಶಾಕ್ ನೀಡಿ ಸಾಯಿಸಿದ ಅಮಾನವೀಯ ಘಟನೆ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.ಸಿಂಧ್‌ನ ಮುಸಾಫಿರ್‌ಖಾನಾ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು ಇಲ್ಲಿನ ಸೈಮಾ ಎಂಬಾಕೆ ಕರಾಚಿಯಲ್ಲಿ ಕೆಲಸ ಮಾಡುತ್ತಿರುವ ದಿಲಾವರ್ ಎಂಬಾತನೊಂದಿಗೆ ಪಲಾಯನಗೈದಿದ್ದಳು.ಆಕೆಯನ್ನು ಮರಳಿ ಮನೆಗೆ ಕರೆತಂದ ಹೆತ್ತವರು ಆಕೆಗೆ ವಿದ್ಯುತ್ ಶಾಕ್ ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.  ಆಕೆಯ ಬಂಧುಗಳೇ ಹೆಚ್ಚಾಗಿರುವ ಹಳ್ಳಿಯ ಪಂಚಾಯಿತಿ ಸಭೆಯಲ್ಲಿ ನಿರ್ಣಯ ತೆಗೆದುಕೊಂಡ ಹಿನ್ನೆಲೆಯಲ್ಲಿ ಹೆತ್ತವರು ಆಕೆಯನ್ನು ಈ ಶಿಕ್ಷೆಗೆ ಗುರಿಪಡಿಸಿದರು ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.