ಮಂಗಳೂರು: ಈ ಬಾರಿ ವಿಧಾನಸಭಾ ಚುನಾವಣಾ ಕಣದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಅಭ್ಯರ್ಥಿಗಳು ಚುನಾವಣಾ ಆಯೋಗವು ವಿಧಿಸಿದ್ದ ವೆಚ್ಚದ ಮಿತಿಯನ್ನು ಮೀರಿಲ್ಲ. ಚುನಾವಣಾ ಪ್ರಚಾರಕ್ಕೆ ಅಭ್ಯರ್ಥಿ 16 ಲಕ್ಷ ರೂಪಾಯಿವರೆಗೆ ವೆಚ್ಚ ಮಾಡಲು ಸ್ವತಃ ಚುನಾವಣಾ ಆಯೋಗವೇ ಅವಕಾಶ ನೀಡಿದ್ದರೂ, ಜಿಲ್ಲೆಯಲ್ಲಿ ಕಣದಲ್ಲಿದ್ದ ಪ್ರಮುಖ ಪಕ್ಷಗಳ ಯಾವ ಅಭ್ಯರ್ಥಿಯ ಚುನಾವಣಾ ವೆಚ್ಚವೂ ರೂ 13.6 ಲಕ್ಷ ದಾಟಿಲ್ಲ. ಚುನಾವಣೆಗೆ ಅತಿ ಹೆಚ್ಚು ವೆಚ್ಚ ಮಾಡಿದವರ (ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವಿವರ ಪ್ರಕಾರ) ಸಾಲಿನಲ್ಲಿರುವ ಮೊದಲ ಎರಡು ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.

ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಖರ್ಚು ಮಾಡಿರುವುದು ಮಂಗಳೂರು ದಕ್ಷಿಣ ವಿಧಾನಸಭಾ ಬಿಜೆಪಿ ಅಭ್ಯರ್ಥಿ ಎನ್.ಯೋಗೀಶ್ ಭಟ್. ಚುನಾವಣೆಗೆ ಒಟ್ಟು 13,50,699 ರೂಪಾಯಿ ವೆಚ್ಚವಾಗಿದೆ ಎಂದು ಅವರು ಚುನಾವಣಾ ಆಯೋಗಕ್ಕೆ ವಿವರ ಸಲ್ಲಿಸಿದ್ದಾರೆ. ಆದರೆ, ಇಷ್ಟು ಖರ್ಚಿನ ಪೈಕಿ ಅವರು ಖರ್ಚು ಮಾಡಿದ್ದು ಕೇವಲ 25 ಸಾವಿರ. ಉಳಿದ ಖರ್ಚನ್ನೆಲ್ಲ ಕೋಷ್ಟಕದ `ಇತರರು ಮಾಡಿದ ಖರ್ಚು' ಕಲಂನಲ್ಲಿ ತೋರಿಸಲಾಗಿದೆ. ಆದರೆ, ಈ ಖರ್ಚು ಭರಿಸಿದ ಇತರರು ಯಾರು ಎಂಬುದು ಚುನಾವಣಾ ಆಯೋಗದ ವೆಬ್ಸೈಟ್ಗೆ ಅಪ್ಲೋಡ್ ಮಾಡಿದ ದಾಖಲೆಗಳಲ್ಲಿ ಲಭ್ಯ ಇಲ್ಲ. ಪ್ರತಿಸ್ಪರ್ಧಿ ಕಾಂಗ್ರೆಸ್ನ ಜೆ.ಆರ್.ಲೋಬೊ ಅವರಿಗಿಂತ 2.70 ಲಕ್ಷ ರೂಪಾಯಿ ಹೆಚ್ಚು ಖರ್ಚು ಮಾಡಿದ್ದಾರೆ.

ಬೆಳ್ತಂಗಡಿಯ ಬಿಜೆಪಿ ಅಭ್ಯರ್ಥಿ ರಂಜನ್ ಜಿ.ಗೌಡ ಅವರು 11,54,606 ರೂಪಾಯಿ ವೆಚ್ಚ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ನ ವಸಂತ ಬಂಗೇರ ಅವರಿಗಿಂತ 3.98 ಲಕ್ಷ ರೂಪಾಯಿ ಹೆಚ್ಚು ಖರ್ಚು ಮಾಡಿದ್ದಾರೆ.

ಹಾಲಿ ಶಾಸಕರ ಪೈಕಿ ಚುನಾವಣೆಗೆ ಅತಿ ಹೆಚ್ಚು ವೆಚ್ಚ ಮಾಡಿದ್ದು ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ. ಅವರು 10,80,322 ರೂಪಾಯಿ ವೆಚ್ಚ ಮಾಡಿದ್ದು, ಈ ಪೈಕಿ 6,23,764 ರೂಪಾಯಿಯನ್ನು ಇತರರು ಭರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಹಾಲಿ ಶಾಸಕರ ಪೈಕಿ ಅತಿ ಕಡಿಮೆ ಖರ್ಚು ಮಾಡಿದ್ದು, ಸುಳ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಅಂಗಾರ (ರೂ 5,58,710), ಪುತ್ತೂರಿನ ಶಕುಂತಳಾ ಶೆಟ್ಟಿ (ರೂ 6,31,927) ಹಾಗೂ ಮೂಡುಬಿದಿರೆಯ ಅಭಯಂಚಂದ್ರ ಜೈನ್ (6,97,542) ಅವರು ನಂತರದ ಸ್ಥಾನದಲ್ಲಿದ್ದಾರೆ.

ಮೊಯ್ದಿನ್ ಬಾವ ಅವರು ಇತರ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಹಣ ಪಡೆದಿಲ್ಲ ಎಂದು ವೆಚ್ಚದ ಸಂಕ್ಷಿಪ್ತ ವಿವರದಲ್ಲಿ ತಿಳಿಸಿದ್ದಾರೆ. ಆದರೆ ವೆಚ್ಚದ ವಿವರ ಇರುವ ವಿಭಾಗ 3ರ ಅನುಬಂಧದಲ್ಲಿ ಶಾಲಿನಿ ಶೈಲೇಶ್ ಅವರಿಂದ 24 ಸಾವಿರ ರೂಪಾಯಿ ಪಡೆದಿರುವುದಾಗಿ ನಮೂದಿಸಿದ್ದಾರೆ.

ಸಚಿವ ಯು.ಟಿ.ಖಾದರ್ ಅವರು ಸಹೋದರ ಇಫ್ತಿಕರ್ ಅಲಿ ಅವರಿಂದ ರೂ 2.70 ಲಕ್ಷ ಸಹಿತ ಒಟ್ಟು ರೂ. 6.72 ಲಕ್ಷ ಇತರರಿಂದ ಪಡೆದುಕೊಂಡಿರುವುದಾಗಿ ವೆಚ್ಚದ ವಿವರದಲ್ಲಿ ತಿಳಿಸಿದ್ದಾರೆ.

ವೆಬ್ಸೈಟ್ನಲ್ಲಿ ಖರ್ಚು ವೆಚ್ಚ ವಿವರ
ಅಭ್ಯರ್ಥಿಗಳ ಖರ್ಚು-ವೆಚ್ಚದ ಮೇಲೆ ಚುನಾವಣಾ ಆಯೋಗ ನೆಟ್ಟಿದ್ದ ಹದ್ದಿನ ಕಣ್ಣಿನಿಂದಾಗಿ ಈ ಬಾರಿಯ ವಿಧಾನಸಭಾ ಚುನಾವಣೆ ಗಮನ ಸೆಳೆದಿತ್ತು. ಅಭ್ಯರ್ಥಿಗಳ ಚುನಾವಣೆ ಖರ್ಚು ವೆಚ್ಚದ ಬಗ್ಗೆ ಕುತೂಹಲವಿದ್ದವರು ರಾಜ್ಯ ಚುನಾವಣಾ ಆಯೋಗದ ವೆಬ್ಸೈಟ್ (ಡಿಡಿಡಿ. ್ಚಛಿಟಚ್ಟ್ಞಠಿ. ಚ್ಟ.್ಞಜ್ಚಿ.ಜ್ಞಿ) ವೀಕ್ಷಿಸಬಹುದು.
ಬೆಳ್ತಂಗಡಿ (ವಿಧಾನಸಭಾ ಕ್ಷೇತ್ರ): ವಸಂತ ಬಂಗೇರ (ಕಾಂ)- ರೂ. 7,55,722 (ವೆಚ್ಚ). ರಂಜನ್ ಜಿ ಗೌಡ (ಬಿಜೆಪಿ): ರೂ. 11,54,606. ಮೂಡುಬಿದಿರೆ ಕ್ಷೇತ್ರ: ಅಭಯಚಂದ್ರ ಜೈನ್ (ಕಾಂ)- ರೂ. 6,97,542. ಉಮಾನಾಥ ಕೋಟ್ಯಾನ್ (ಬಿಜೆಪಿ) ರೂ.7,11346. ಅಮರನಾಥ ಶೆಟ್ಟಿ (ಜೆಡಿಎಸ್)- ರೂ.4,82,726. ಸುಳ್ಯ ಕ್ಷೇತ್ರ: ಬಿ.ರಘು (ಕಾಂ) ರೂ. 5,43,668. ಎಸ್.ಅಂಗಾರ (ಬಿಜೆಪಿ)- ರೂ. 5,58,710. ಪುತ್ತೂರು ಕ್ಷೇತ್ರ: ಶಕುಂತಳಾ ಶೆಟ್ಟಿ (ಕಾಂ)- ರೂ. 6,31,927. ಸಂಜೀವ ಮಟಂದೂರು (ಬಿಜೆಪಿ) ರೂ. 7,13,348. ದಿನೇಶ (ಜೆಡಿಎಸ್) - ರೂ. 3,79,549. ಬಂಟ್ವಾಳ ಕ್ಷೇತ್ರ: ಬಿ.ರಮಾನಾಥ ರೈ (ಕಾಂ)- ರೂ.8,40,151, ರಾಜೇಶ ನಾಯ್ಕ (ಬಿಜೆಪಿ)- ರೂ. 6,40,762. ಮಂಗಳೂರು ಉತ್ತರ ಕ್ಷೇತ್ರ: ಮೊಯ್ದಿನ್ ಬಾವ (ಕಾಂ)- ರೂ. 9,76,348. ಕೃಷ್ಣ ಜೆ.ಪಾಲೆಮಾರ್ (ಬಿಜೆಪಿ)- ರೂ. 9,66,956. ಮಂಗಳೂರು ದಕ್ಷಿಣ ಕ್ಷೇತ್ರ: ಜೆ.ಆರ್.ಲೋಬೊ (ಕಾಂ)- ರೂ. 10,80,322. ಎನ್.ಯೋಗೀಶ್ ಭಟ್ (ಬಿಜೆಪಿ)- ರೂ. 13,50,699. ಮಂಗಳೂರು ಕ್ಷೇತ್ರ: ಯು.ಟಿ.ಖಾದರ್ (ಕಾಂ)- ರೂ. 8,79,640. ಚಂದ್ರಹಾಸ್ ಉಳ್ಳಾಲ್ (ಬಿಜೆಪಿ) - ರೂ. 8,09,991

ಗುಲಾಂ, ಲೋಲಾಕ್ಷ ವಿವರ ಅಲಭ್ಯ
ಫಲಿತಾಂಶ ಘೋಷಣೆ ಆದ ತಿಂಗಳ ಒಳಗೆ (ಜೂ. 8ರ ಒಳಗೆ) ಅಭ್ಯರ್ಥಿಗಳು ವೆಚ್ಚದ ವಿವರ ಸಲ್ಲಿಸಬೇಕು. ಆದರೆ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗುಲಾಂ ಮೊಹಮ್ಮದ್ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯದ ಅಭ್ಯರ್ಥಿ ಲೋಲಾಕ್ಷ ಅವರು ಚುನಾವಣಾ ಆಯೋಗಕ್ಕೆ ಚುನಾವಣಾ ವೆಚ್ಚದ ವಿವರ ಇನ್ನೂ ಸಲ್ಲಿಸಿಲ್ಲ.

`ವೆಚ್ಚದ ವಿವರ ಸಲ್ಲಿಸದ ಅಭ್ಯರ್ಥಿಗಳ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದೇವೆ. ಆಯೋಗವು ಅಭ್ಯರ್ಥಿಗಳಿಗೆ ನೋಟಿಸ್ ನೀಡಿ ಮುಂದಿನ ಕ್ರಮ ಕೈಗೊಳ್ಳಲಿದೆ. ವೆಚ್ಚದ ವಿವರ ಸಲ್ಲಿಸದಿದ್ದರೆ ಅಭ್ಯರ್ಥಿಯನ್ನು ಮೂರು ವರ್ಷ ಚುನಾವಣೆಗೆ ನಿಲ್ಲದಂತೆ ನಿಷೇಧಿಸಬಹುದು' ಎಂದು ಚುನಾವಣಾ ವಿಭಾಗದ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.