ಚಿತ್ರದುರ್ಗ: ನಗರದ ಮದಕರಿನಾಯಕ ಪೌಢಶಾಲೆ ಮೈದಾನದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಸೋಮವಾರ ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ವಿಪತ್ತುಗಳ ಸಮಯದಲ್ಲಿ ಹೆಚ್ಚಿನ ಜೀವಹಾನಿ ತಡೆಯುವ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಾತ್ಯಕ್ಷಿತೆ ನಡೆಸಿಕೊಟ್ಟಿತು.

ಕೇಂದ್ರದ 5ನೇ ಬೆಟಾಲಿಯನ್ ತಂಡದಲ್ಲಿ 35 ಸದಸ್ಯರಿದ್ದು, ಸುಮಾರು 15 ದಿನಗಳಿಂದ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ಆವರಣದಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಜೀವಹಾನಿ ತಡೆಯುವ ಹಾಗೂ ಪ್ರಕೃತಿ ವಿಕೋಪ ನಿರ್ವಹಣಾ ತಂಡ ಆಗಮಿಸುವ ಮುನ್ನ ಜೀವರಕ್ಷಣೆ ಅಗತ್ಯವಾದ ಪ್ರಾಥಮಿಕ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಶಾಲಾ ಮಕ್ಕಳಿಗೆ ಅರಿವು ಮೂಡಿಸಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಕೇಂದ್ರ ಕಚೇರಿ ನವದೆಹಲಿಯಲ್ಲಿದ್ದು, 5ನೇ ಬೆಟಾಲಿಯನ್ ಕಚೇರಿ ಪುಣೆಯಲ್ಲಿದೆ. ಇದರ ವ್ಯಾಪ್ತಿಯಲ್ಲಿ ಮಹಾರಾಷ್ಟ್ರ, ಗೋವಾ, ಕರ್ನಾಟಕ ರಾಜ್ಯ ಬರಲಿದೆ. ಈ ತಂಡ ಸಿಆರ್ಪಿಎಫ್ನ ಒಂದು ಅಂಗವಾಗಿದ್ದು, ಸಿಆರ್ಪಿಎಫ್ ಸೈನಿಕರು ತಂಡದಲ್ಲಿ 5 ವರ್ಷ ಕಾಲ ನಿಯೋಜನೆಗೊಂಡಿರುತ್ತಾರೆ. 2 ವರ್ಷಗಳ ಕಾಲ ವಿವಿಧ ರೀತಿಯ ವಿಪತ್ತು ನಿರ್ವಹಣೆ ಕ್ರಮಗಳ ಬಗ್ಗೆ ಸೈನಿಕರು ತರಬೇತಿ ಪಡೆದಿರುತ್ತಾರೆ ಎಂದು ತಂಡದ ಮುಖ್ಯಸ್ಥ ಜಗನ್ನಾಥ್ ಜೇನಾ ತಿಳಿಸಿದರು.

ರಾಜ್ಯದ ಬಳ್ಳಾರಿಯಲ್ಲಿ 2010ರ ಜನವರಿಯಲ್ಲಿ ಸಂಭವಿಸಿದ ಕಟ್ಟಡ ದುರಂತದಲ್ಲಿ ಸಿಲುಕಿದ ಸುಮಾರು 19ಜನರ ಜೀವ ಉಳಿಸಿ, ಅದರಲ್ಲಿ ಒಬ್ಬ ವ್ಯಕ್ತಿ 9 ದಿನಗಳ ಕಾಲ ಬದುಕಿ ಉಳಿದ ವ್ಯಕ್ತಿಯ ಜೀವರಕ್ಷಣೆ ಮಾಡಿರುವುದು ತಂಡಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.

ಪ್ರಾಕೃತಿಕ ವಿಕೋಪ ಸಂಭವಿಸಿ ದಾಗ ಹೆಚ್ಚು ಜನರು ಭಯದಿಂದಲೇ ಸಾವನ್ನಪ್ಪುತ್ತಾರೆ ಎಂದರು .ಹೆಚ್ಚು ಅನಾಹುತ ಸಂಭವಿಸಿದ ವೇಳೆ ಜನರು ಭಯಪಡದೇ ಎದುರಿಸಿದಾಗ ಮಾತ್ರ ಜೀವಹಾನಿ ತಡೆಗಟ್ಟಬಹುದು ಹಾಗೂ ಪ್ರಾಕೃತಿಕ ನಿರ್ವಹಣೆ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಪ್ರಾತ್ಯಕ್ಷಿಕೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.