ಭಾನುವಾರ, ಜನವರಿ 26, 2020
27 °C

ವಿರೋಧ ಪಕ್ಷದ ಸಂಚು- ಹಸೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಢಾಕಾ (ಐಎಎನ್‌ಎಸ್): ಹತಾಶೆಗೊಂಡಿರುವ ವಿರೋಧ ಪಕ್ಷ `ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ~ (ಬಿಎನ್‌ಪಿ) ತಮ್ಮ ಸರ್ಕಾರದ ವಿರುದ್ಧ ಒಳಸಂಚು ರೂಪಿಸುತ್ತಿದೆ ಎಂದು ಪ್ರಧಾನಿ ಶೇಖ್ ಹಸೀನಾ ಆರೋಪಿಸಿದ್ದಾರೆ.ಮತಾಂಧರಾದ ಕೆಲವು ಸೇವಾನಿರತ ಮತ್ತು ನಿವೃತ್ತ ಸೇನಾಧಿಕಾರಿಗಳ ಕ್ಷಿಪ್ರಕ್ರಾಂತಿ ಯತ್ನವನ್ನು ಸೇನೆಯು ವಿಫಲಗೊಳಿಸಿದ ಬೆನ್ನಲ್ಲೇ ಆಡಳಿತಾರೂಢ ಅವಾಮಿ ಲೀಗ್ ನೇತೃತ್ವದ ಸರ್ಕಾರದ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.`ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಚಳವಳಿಯ ನೆಪದಲ್ಲಿ ಹಾಳುಗೆಡವಲು ಅವರು ಯೋಜಿಸಿದ್ದಾರೆ. ಯುದ್ಧ ಅಪರಾಧಿಗಳನ್ನು ರಕ್ಷಿಸುವ ಸಲುವಾಗಿ ಸರ್ಕಾರಕ್ಕೆ ಬೆದರಿಕೆ ಒಡ್ಡುತ್ತಿದ್ದಾರೆ~ ಎಂದು ಖಲೀದಾ ಜಿಯಾ ನೇತೃತ್ವದ ಬಿಎನ್‌ಪಿಯನ್ನು ಹಸೀನಾ ಟೀಕಿಸಿದ್ದಾರೆ.ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಿ, ಶಾಂತಿ ಸ್ಥಾಪಿಸಲು ಶ್ರಮಿಸುತ್ತೇನೆ ಎಂದು ಪಕ್ಷದ ಸಭೆಯಲ್ಲಿ ಹಸೀನಾ ಪುನರುಚ್ಚರಿಸಿದ್ದಾರೆ.

 

ಪ್ರತಿಕ್ರಿಯಿಸಿ (+)