ಸೋಮವಾರ, ಮಾರ್ಚ್ 1, 2021
24 °C

ವಿಲಾಸಿ ಅಡುಗೆ ಮನೆಯಲ್ಲೂ ಅಭಿರುಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಲಾಸಿ ಅಡುಗೆ ಮನೆಯಲ್ಲೂ ಅಭಿರುಚಿ

ವಾಸ್ತುಶಿಲ್ಪಿ ಅಣ್ಣ, ತನ್ನ ವೃತ್ತಿಗೆ ಮತ್ತು ಇಚ್ಛೆಗೆ ಅನುಗುಣವಾಗಿ ಚಂದದ ಮನೆ ಕಟ್ಟುವಾಗಲೇ ಅದಕ್ಕೆ ತಕ್ಕಂತೆ ವಿನೇಗರ್ ಕ್ಯೂಸೆನ್ ಕಂಪನಿಯ ವಿಲಾಸಿ ಅಡುಗೆ ಮನೆ ಪರಿಕರಗಳೊಂದಿಗೆ ಬಂದು ಇಳಿಯಿತು.ಅಡುಗೆ ಮನೆ ಆರ್ಡರ್ ನೀಡುವುದೆ? ಅದು ಹೇಗೆ ಇರುತ್ತದೆ ಎಂಬ ಕುತೂಹಲ ನಮ್ಮೆಲ್ಲರ ಕಾತುರ - ಆತುರ ಇಮ್ಮಡಿಸುತ್ತಿತ್ತು. ಸಂಬಂಧಿಕರ ಮನೆಗಳಲ್ಲಿ ಕೆಲವರು ತರಿಸಿದ್ದು ಅರಿವಿಗೆ ಬಂದಿತ್ತು. ಅಳವಡಿಸಿದ ನಂತರ ಅದರ ಸುಂದರ ಬಣ್ಣ, ಅಳತೆಗೆ ತಕ್ಕ ಮಾದರಿ ಮತ್ತು ವಿನ್ಯಾಸಕ್ಕೆ ಮಾರು ಹೋದೆವು ನಾವೆಲ್ಲ. ಮನೆಯಲ್ಲಿ ಒಬ್ಬೊಬ್ಬರದು ಒಂದೊಂದು ವಿಮರ್ಶೆ. ಸ್ವಲ್ಪ  ದುಬಾರಿ ಎನಿಸಿದರೂ ವಾಸ್ತುಶಿಲ್ಪದ ಮನೆಗೆ ತಕ್ಕಂತೆ ಇರಬೇಕಲ್ಲವೇ? ವಾಸ್ತುಶಿಲ್ಪದ ಮನೆಯಲ್ಲದಿದ್ದರೂ ನಮ್ಮ ಬಜೆಟ್‌ಗೆ ತಕ್ಕ ಹಾಗೆ ಈಗ ರೆಡಿಮೇಡ್ ಅಡುಗೆ ಮನೆಗಳು ಲಭ್ಯವಾಗುತ್ತವೆ ಎಂದು ಅಣ್ಣ ನುಡಿದ.ರೆಡಿಮೇಡ್ ವಿಲಾಸಿ ಅಡುಗೆ ಮನೆಯಲ್ಲಿ ಕಪಾಟುಗಳು, ಸ್ಟೀಲ್ ಸಿಂಕ್, 4 ಬರ್ನರ್ ಗಾಸ್ಲ್‌ಟಾಪ್ ಸ್ಟೌವ್, ಅಡುಗೆಯ ಹೊಗೆ ಹೀರುವ ಚಿಮಣಿ, ಜೊತೆಗೆ ಸಿದ್ಧವಾಗಿ ಬಂದ ಪರಿಕರಗಳು. ಹೆಚ್ಚು ಹಣ ತೆತ್ತರೆ ಜೊತೆಗೆ ಮೈಕ್ರೋವೇವ್, ಕೇಕ್ ಮತ್ತು ಬಿಸ್ಕೆಟ್ ತಯಾರಿಸುವ ಓವನ್ ಹಾಗೂ ಫಿ್ರಜ್ ಸಹ ಲಭ್ಯ.ಪ್ರತ್ಯೇಕ ವಿಭಜನೆ

ಗಾಜಿನ ತಟ್ಟೆ ಮತ್ತು ಸ್ಟೀಲ್ ತಟ್ಟೆಗಳನ್ನು ಜೋಡಿಸಿಡುವುದಕ್ಕೆ ಪ್ರತ್ಯೇಕ ಜಾಗ. ಲೋಟಗಳನ್ನು ಇಡುವುದಕ್ಕೆ ಬೇರೆಯದೇ ಸ್ಥಳಾವಕಾಶ. ಸೌಟು, ಚಾಕು, ತವ-ಬಾಣಲೆ ಜೋಡಿಸಿಡಲು ಪ್ರತ್ಯೇಕ ಸ್ಥಳ. ನಿತ್ಯ ಬಳಕೆಗೆ ಅಕ್ಕಿ, ಬೇಳೆ, ಈರುಳ್ಳಿ-ಆಲೂಗಡ್ಡೆ ಇಡಲು ತಕ್ಕಷ್ಟು ಭಾರ ಹೊರಬಲ್ಲ ಮರದಿಂದ ವಿನ್ಯಾಸ.ಅಷ್ಟೇಕೆ, ಮೆಣಸು, ಜೀರಿಗೆ, ಧನಿಯ ಹಾಗೂ ಗಸಗಸೆ ಮುಂತಾದ ಮಸಾಲೆ ಪದಾರ್ಥ ಹಾಕಿಡಲು ಸ್ಪೈಸ್ ಜಾರ್, ಮಿಕ್ಸರ್, ಗ್ರೈಂಡರ್ ಬಳಸಿದ ನಂತರ ಇಡುವುದಕ್ಕೂ ಬೇರೆಯದೇ ಜಾಗ.ಪಾತ್ರ, ಪರಿಕರಗಳನ್ನು ಒರೆಸಿ ಅದರದರ ಸ್ಥಾನಗಳಿಗೆ `ಪುನರಪಿ ಸ್ವಸ್ಥಾನಂ~ ಮಾಡದಿದ್ದರೆ ಈ ಅಡುಗೆ ಮನೆಯ ಅಂದ-ಛಂದ ಮಾತ್ರ ನೋಡಲಾಗದು. ವರ್ತುಲಾಕಾರ ಘಟಕ

ಅಡುಗೆ ಕೋಣೆಯೊಳಗೆ ಎಲ್ಲೆಲ್ಲದರಲ್ಲಿ ಕಸ ಚೆಲ್ಲಿಕೊಂಡಿದ್ದರೆ ಏನು ಚಂದ? ಕಸದ ಬುಟ್ಟಿ ಇಡುವುದಕ್ಕೂ ಒಂದು ವರ್ತುಲಾಕಾರವಾಗಿ ಸುತ್ತಬಲ ್ಲಮೂಲೆ ಘಟಕ(ಕಾರ್ನರ್ ಯೂನಿಟ್) ಇದ್ದರೆ ಕೆಲಸ ಹಗುರವಾಗಿಸುತ್ತದೆ ಅಲ್ಲವೆ? ತರಕಾರಿ ಸಿಪ್ಪೆ ಮತ್ತು ಪ್ಲಾಸ್ಟಿಕ್ ಕೈಚೀಲ, ಕವರ್‌ಗಳನ್ನು ಪ್ರತ್ಯೇಕಿಸುವ ಕೆಲಸವೂ ಸುಲಭ. ಅಮ್ಮನಿಗೂ ತಮ್ಮ ಕಾಲದ ಬೆಲೆ ಬಾಳುವ ಮತ್ತು ತೂಕದ ಪಾತ್ರೆಗಳನ್ನು ಇಟ್ಟುಕೊಳ್ಳುವುದಕ್ಕೆ ಕಾರ್ನರ್ ಯೂನಿಟ್ ಬಳಕೆಯಾಯಿತು.ಒಳಗಡೆ ಬೆಳಕು ಬೀರುವಂತಹ ಸ್ವಯಂಚಾಲಿತ ಡ್ರಾಗಳು ನಾವು ಕೈಬಿಟ್ಟ ತಕ್ಷಣ ಸ್ವಯಂಚಾಲಿತ ಎಂಬಂತೆ ಮೃದುವಾಗಿ ಸ್ವಸ್ಥಾನ ಸೇರುವ ಪರಿಯೂ ಚಂದ. ನಿರ್ವಹಣೆ ಅತ್ಯಂತ ಸುಲಭ. ಏಕೆಂದರೆ ಅದರ ನುಣುಪಾದ ಮೈ ಮೇಲೆ ಕಲೆಗಳೇನೂ ನಿಲ್ಲುವುದಿಲ್ಲ. ಕೈಬೆರಳಿನ ಅಚ್ಚುಗಳು ಸ್ಪ್ರೇ ಮಾಡಿ ಒರೆಸಿದ ತಕ್ಷಣ ಮಾಯ.ಪುಟ್ಟ ಟವೆಲ್ ಇಡಲು ಅಲ್ಲೊಂದು ಪುಟ್ಟ ಸರಳು.  ಹೆಚ್ಚು ಬಳಸುವ ಲೋಟಗಳನ್ನು ಜೋಡಿಸಿಡಲು ಮತ್ತೊಂದು  ರಾಡ್ ಮತ್ತು ಹುಕ್. ತಕ್ಷಣದ ಬಳಕೆಗೆ ಚಾಕು ತಗುಲಿ ಹಾಕುವುದಕ್ಕೆ ಪ್ರತ್ಯೇಕ ಹುಕ್! ಎಂಥ ಚಂದದ ಜೋಡಣೆ.`ಕೈಯಲ್ಲಿ ಸದಾ ಒಂದು ಬಟ್ಟೆ ಇಟ್ಟುಕೊಂಡಿರಬೇಕು~ ಎನ್ನುತ್ತಾಳೆ ಅಮ್ಮ.  ಥಳ ಥಳ ಹೊಳೆಯುವುದಕ್ಕೆ ಅದು ಅವಶ್ಯ. ಕೆಲಸ ಮುಗಿದ ನಂತರ ಸ್ವಚ್ಛತೆ ಬಹು ಮುಖ್ಯ ಸಂಗತಿ.  

ನಾವು ಚಿಕ್ಕವರಾಗಿರುವಾಗ ನಿತ್ಯ ನೋಡುತ್ತಿದ್ದ ಸಾಮಾನ್ಯ ದೃಶ್ಯ;  ಅಮ್ಮ ಒಂದು ಕುಮುಟಿ ಇಟ್ಟುಕೊಂಡು ಕೆಂಡವನ್ನು ಆಗ್ಗಾಗ್ಗೆ ಒಲೆಯ ಒಳದಬ್ಬುತ್ತಾ ಕೊಳವೆಯಲ್ಲಿ ಉಫ್ ಎಂದು ಊದುತ್ತಾ ನಡುವೆ ಉಸಿರು ಕಟ್ಟಿದಾಗ ಕೆಮ್ಮುತ್ತಾ ಅಡುಗೆ ಮಾಡುತ್ತಿದ್ದದ್ದು. ರುಬ್ಬಲು ಮಿಕ್ಸರ್, ಗ್ರೈಂಡರ್, ತಕ್ಷಣ ಬಿಸಿ ಮಾಡಲು ಮೈಕ್ರೋವೇವ್ ಆಗ ಇದ್ದಿದ್ದರೆ ಆಕೆಗೆ ಇನ್ನಷ್ಟು ಒಳ್ಳೆಯ ಆರೋಗ್ಯ ಲಭ್ಯವಾಗುತ್ತಿತ್ತೇನೋ? ದಿನದಲ್ಲಿ ಒಮ್ಮೆಯಾದರೂ ಅಲಸ್ಯದಿಂದ ಪರಿಕರಗಳನ್ನು ಸ್ವಚ್ಛ ಮಾಡದಿದ್ದರೆ ಧೂಳಿನ ಆವರಣ ಖಂಡಿತ. ಒಂದಂತೂ ತ್ಯಾಗ ಮಾಡಲೇಬೇಕು.  ಅದುವೆ ಸೋಮಾರಿತನ.

  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.