ಬುಧವಾರ, ಮಾರ್ಚ್ 3, 2021
30 °C

ವಿವಿಧೆಡೆ ಚೌಡಯ್ಯ ಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿವಿಧೆಡೆ ಚೌಡಯ್ಯ ಜಯಂತಿ

ಚಿತ್ತಾಪುರ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ, ಪಟ್ಟಣದಲ್ಲಿ ಕೋಲಿ ಸಮಾಜದ ವತಿಯಿಂದ ಗುರುವಾರ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಯನ್ನು ಸಡಗರ, ಸಂಭ್ರಮ, ಶ್ರದ್ಧೆ, ಭಕ್ತಿಭಾವದಿಂದ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.ನಾಲವಾರ: ನಿಜಶರಣ ಅಂಬಿಗರ ಚೌಡಯ್ಯನವರು ಬಸವಾದಿ ಶರಣರ ಸಮಕಾಲಿನ ಶರಣರಾಗಿ, ನೇರ ನಡೆ, ನಿಷ್ಠುರ ಮತ್ತು ನಿರ್ಭಿತ ನುಡಿ, ದಿಟ್ಟ ನಿಲುವಿನವರಾಗಿದ್ದರು ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರಣ್ಣಗೌಡ ಪರಸರಡ್ಡಿ ಹೇಳಿದರು.ಗ್ರಾಮದ ಚೌಡಯ್ಯ ವೃತ್ತದಲ್ಲಿ ಕೋಲಿ ಸಮಾಜದ ವತಿಯಿಂದ ಆಯೋ ಜಿಸಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾರ್ಯಕ್ರಮಕ್ಕೂ ಮುಂಚೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಂಬಿಗರ ಚೌಡಯ್ಯನವರ ಭಾವಚಿತ್ರದ ಅದ್ದೂರಿ ಮೆರವಣಿಗೆ ಕೈಗೊಳ್ಳಲಾಯಿತು.ಗ್ರಾಮದ ಪ್ರಮುಖರಾದ ನಾಗಣ್ಣ ಗೌಡ ಮಾಲಿ ಪಾಟೀಲ್, ಲಿಂಗಾರ ಡ್ಡಿಗೌಡ ಬಾಸರಡ್ಡಿ, ಭೀಮರಡ್ಡಿಗೌಡ ಕುರಾಳ, ಶಿವರಡ್ಡಿಗೌಡ ಸೋಮರಡ್ಡಿ, ವೆಂಕುಗೌಡ ಸ್ಷೇಶನ್, ಈರಣ್ಣಗೌಡ ಬಿರಾಳ, ಸಲೀಂ ಸಾಬ್ ಮುದ್ದಳ್ಳಿ, ಶಾಂತಕುಮಾರ ಎಣ್ಣಿ ವೇದಿಕೆಯಲ್ಲಿದ್ದರು.ಕೋಲಿ ಸಮಾಜ ಗ್ರಾಮ ಘಟಕ ಅಧ್ಯಕ್ಷ ಸಂತೋಷ ಮಳಬಾ, ಶಿವಕು ಮಾರ ಸುಣಗಾರ, ಸಾಬಣ್ಣ ಜಾಲಗಾರ, ಸಿದ್ದು ಮಳಬಾ, ಸಿದ್ದಣ್ಣ ದಂಡೋತಿ, ಮೈಲಾರಿ ಮಳಬಾ, ಸಿದ್ದು ವಾಲಿಕಾರ, ಮಲ್ಲಪ್ಪ ಕೆ ಮಳಬಾ, ಲಕ್ಮಿಕಾಂತ, ಮರೆಪ್ಪಾ ಬೋಳೆರ್, ಮಾರುತ್ತಿ ಸುಗ್ಗಾ, ಜಗಪ್ಪ ಇಟಗಿ, ಸಿದ್ದಣ್ಣ ಡ್ರೈವ್ಹರ್ ಸುಗ್ಗಾ, ಬಾಬು ಸಂಗ್ಮಾ ದವಲಪ್ಪ, ನಾಗರಾಜ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು, ಸುರೇಶ ಮಳಬಾ ಸ್ವಾಗತಿಸಿ, ನಿರೂಪಿಸಿದರು.ಲಾಡ್ಜಿಂಗ್‌ ಕ್ರಾಸ್‌: ಚಿತ್ತಾಪುರ ಪಟ್ಟಣದ ಲಾಡ್ಜಿಂಗ್‌ ಕ್ರಾಸ್‌ನಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ನಿಮಿತ್ತ ಕೋಲಿ ಸಮಾಜದ ವತಿಯಿಂದ ಚೌಡಯ್ಯ ಧ್ವಜ ಕಟ್ಟೆಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.ದೇವಿಂದ್ರ ತಳವಾರ, ಮಲ್ಲಿಕಾ ರ್ಜುನ ಎಮ್ಮೆನೋರ್‌, ಕರಣಕುಮಾರ ಅಲ್ಲೂರ್‌, ಬಸವರಾಜ ಚಿನ್ನಮಳ್ಳಿ, ಶರಣಪ್ಪ ನಾಟಿಕಾರ್‌. ತಮ್ಮಣ್ಣ ಡಿಗ್ಗಿ, ಹಣಮಂತ ಸಂಕನೂರ, ತಮ್ಮಣ್ಣ ಹೊನಗೇರಿ, ಅಂಬು ಹೋಳಿಕಟ್ಟಿ, ರಾಮಲಿಂಗ ಬಾನರ್‌, ಮಲ್ಲಿಕಾರ್ಜುನ ಸಂಗಾವಿ, ಶರಣು ಸಿದ್ರಾಮಗೋಳ ಇದ್ದರು.ಮತ್ತಿಮೂಡ: ತಾಲ್ಲೂಕಿನ ಮತ್ತಿಮೂಡ ಗ್ರಾಮದಲ್ಲಿ ಕೋಲಿ ಸಮಾಜದ ವತಿಯಿಂದ ಅಂಬಿಗರ ಚೌಡಯ್ಯ ಜಯಂತಿ ಸಡಗರದಿಂದ ಆಚರಣೆ ಮಾಡಲಾಯಿತು.ಗ್ರಾಮದ ರಾಜಕುಮಾರ ಬಿಚ್ಚಾ, ಮಹಾದೇವ ತಟ್ಟಿನ, ಬೀರಪ್ಪ ಕಂಟಿಕರ, ದೇವಾನಂದ ಬಿಚ್ಚಾ, ಮುನೀಂದ್ರ ತಟ್ಟಿನ, ಸಾಯಬಣ್ಣ ಬೇನೂರ, ಶ್ರೀಮಂತ ತಳವಾರ, ಬಸವರಾಜ ತಳವಾರ, ಮಹೆಬೂಬ ಅಲಿ ನದಾಫ್‌, ರಾಜಕುಮಾರ ತಟ್ಟಿನ ಇದ್ದರು.ದಂಡೋತಿ: ತಾಲ್ಲೂಕಿನ ದಂಡೋತಿ ಗ್ರಾಮದ ಶರಣಬಸವೇಶ್ವರ ಶಿಕ್ಷಣ ಸಂಸ್ಥೆಯ ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ

ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.ಮುಖ್ಯಗುರು ಮಲ್ಲಣ್ಣ ಬೆಳಗುಂಪಾ ಅವರು ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಚನಗಳನ್ನು ಹೇಳಿ ಮಾತನಾಡಿದರು. ಶಿಕ್ಷಕರಾದ ಜಯಶ್ರೀ, ಮಲ್ಲಮ್ಮ, ಜಗದೇವಿ, ಅಲ್ಲಾವುದ್ದಿನ್‌, ಪರಶುರಾಮ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.