ಶನಿವಾರ, ಫೆಬ್ರವರಿ 27, 2021
28 °C
ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದ ಹಿನ್ನೀರಿನಲ್ಲಿ ಯುವಜನರ ಸಂಭ್ರಮ

ವಿವಿ ಸಾಗರದಲ್ಲಿ ರೋಚಕ ಜಲಕ್ರೀಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿವಿ ಸಾಗರದಲ್ಲಿ ರೋಚಕ ಜಲಕ್ರೀಡೆ

ಹಿರಿಯೂರು: ರಾಜ್ಯದ ವಿವಿಧ ಜಿಲ್ಲೆ ಗಳಿಂದ ಆಗಮಿಸಿದ್ದ 70ಕ್ಕೂ ಹೆಚ್ಚು ಯುವಕ– ಯುವತಿಯರು. ಬೆಂಗಳೂರಿ ನಿಂದ ಬಂದಿದ್ದ ತರಬೇತುದಾರರು. ನೀರಿನಲ್ಲಿ ತೇಲುತ್ತಿದ್ದ ಬಣ್ಣ ಬಣ್ಣದ ಹಲವು  ಕ್ರೀಡಾ ಸಾಮಗ್ರಿ.‘ಅಯ್ಯೋ.. ನಮಗೂ ಒಂದು ಅವಕಾಶ ಸಿಕ್ಕಿದ್ದರೆ ಚೆನ್ನಾಗಿತ್ತಲ್ಲವೇ? ನಮ್ಮೂರಿನಲ್ಲೇ ನಡೆಯುತ್ತಿದ್ದರೂ ನಮಗೆ ಪಾಲ್ಗೊಳ್ಳುವ ಭಾಗ್ಯವಿಲ್ಲವಲ್ಲ..’ಈ ಸನ್ನಿವೇಶಗಳು, ಮಾತುಗಳು ಕಂಡು, ಕೇಳಿಬಂದಿದ್ದು ಬುಧವಾರ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ನಡೆಯುತ್ತಿದ್ದ ಜಲಕ್ರೀಡೆಯ ಸಂದರ್ಭ.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರಿನ ಜನರಲ್ ತಿಮ್ಮಯ್ಯ ರಾಷ್ಟ್ರೀಯ  ಸಾಹಸ ಅಕಾಡೆಮಿ ಸಹಯೋಗದಲ್ಲಿ ವಿಶೇಷ ಘಟಕ ಗಿರಿಜನ ಉಪಯೋಜನೆ ಅಡಿ ಪರಿಶಿಷ್ಟ ಜಾತಿ ಪಂಗಡದ ಯುವಕ–ಯುವತಿಯರಿಗೆ ಹಮ್ಮಿಕೊಂಡಿದ್ದ ಜಲ ಸಾಹಸಕ್ರೀಡೆ ನೋಡುಗರಲ್ಲಿ ರೋಮಾಂಚನ ತಂದಿತ್ತು.ಒಂದೆಡೆ ಮೀನಿನಂತೆ ಈಜುವವರು, ಮತ್ತೊಂದೆಡೆ ಈ ಭಾಗದಲ್ಲಿ ನೋಡಲು ಸಿಗದ ಕಯಾಕಿಂಗ್, ಸಿಂಗಲ್ ಮತ್ತು ಡಬಲ್ ಕೊರಾಕಲ್, ರಿವರ್ ರ್‍್ಯಾಪ್ಟಿಂಗ್, ಸ್ಟಿಲ್ ವಾಟರ್, ವಿಂಡ್ ಸರ್ಫಿಂಗ್, ಕೆನೊ, ಕಯಾಕಿಂಗ್, ಜೆಟ್ ಸ್ಕಿ, ಪವರ್ ಬೋಟ್ ರೈಡ್ ಮಾಡುವವರು. ಇನ್ನು ಕೆಲವು ಕ್ರೀಡಾ ಸಾಮಗ್ರಿ ಹೆಸರು ಹೇಳುವುದೇ ಕಷ್ಟ, ಅಂತಹವೆಲ್ಲ ಒಂದೇ ಕಡೆ ಕಂಡುಬಂದು ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು.ಸಾಹಸ ಕ್ರೀಡಾ ತರಬೇತುದಾರ ಸಚಿನ್ ಹರಿಕಂತ್ರ ‘ಪ್ರಜಾವಾಣಿ’ ಜತೆ ಮಾತನಾಡಿ, ‘ಇದು ಕೇವಲ ಮೋಜಿನ ಕ್ರೀಡೆಯಲ್ಲ. ಇಂತಹ ಕ್ರೀಡೆಗಳ ಮೂಲಕ ಪರಿಸರ ಪ್ರಜ್ಞೆ ಮೂಡಿಸುವುದು, ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮ ತಿಳಿಸ ಲಾಗುವುದು. ವಿವಿಧ ಪ್ರಾಣಿ ಪಕ್ಷಿಗಳನ್ನು ಗುರುತಿಸುವ ಜತೆಗೆ ಅವುಗಳ ಬಗ್ಗೆ ಅಧ್ಯಯನ ನಡೆಸಲಾಗುವುದು. ಭೂಮಿ ಮೇಲೆ ಓಡಿಸಿದಂತೆ ನೀರಿನ ಮೇಲೂ ಸ್ಕೂಟರ್ ಚಲಾಯಿಸುವುದು, ನೀರಿನ ಬಗ್ಗೆ ಇರುವ ಭಯ ನಿವಾರಿಸುವುದು, ನೀರಿಗೆ ಬಿದ್ದವರನ್ನು ಸಂರಕ್ಷಿಸುವುದು ಒಳಗೊಂಡಿದೆ. ಇಂತಹ ಅನೇಕ ಅಂಶಗಳನ್ನು 14 ದಿನಗಳ ತರಬೇತಿ ಅವಧಿಯಲ್ಲಿ ಶಿಬಿರಾರ್ಥಿಗಳಿಗೆ ಕಲಿಸಿ ಕೊಡಲಾಗುವುದು’ ಎಂದರು.ಅನಿತಾ ಹರಿಕಂತ್ರ, ಬಷೀರ್ ಅಹಮದ್, ಎಸ್.ಎಂ.ನಾನಾರಾವ್, ಕಿರಣ್ ಕುಮಾರ್, ಸಂತೋಷ್ ರಾವ್, ಮಣಿ, ಮಂಜುನಾಥ್ ಬೇರೆ ಬೇರೆ ಜಲಕ್ರೀಡೆಗಳ ಬಗ್ಗೆ ತರಬೇತಿ ನೀಡುವ ಪರಿಣತರು. ವಾಣಿ ವಿಲಾಸ ಜಲಾಶಯದ ಹಿನ್ನೀರಿನ ಪ್ರದೇಶ ಜಲಕ್ರೀಡೆಗಳಿಗೆ ಹೇಳಿ ಮಾಡಿಸಿದಂತಿದೆ. ಇನ್ನಷ್ಟು ಅಭಿವೃದ್ಧಿ ಕಾಮಗಾರಿ ನಡೆದರೆ ಇನ್ನೂ ಚೆನ್ನಾಗಿರು ತ್ತದೆ ಎನ್ನುವುದು ಅವರ ಅನಿಸಿಕೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.