ಸೋಮವಾರ, ಏಪ್ರಿಲ್ 12, 2021
24 °C

ವಿಶೇಷ ಚಾಲನಾ ಶಿಬಿರ: 22,274 ಅರ್ಜಿಗಳ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳಿಗೆ ನೀರು ಹಾಗೂ ಒಳಚರಂಡಿ ಸಂಪರ್ಕ ಕಲ್ಪಿಸಲು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಆಯೋಜಿಸಿದ್ದ ವಿಶೇಷ ಚಾಲನಾ ಶಿಬಿರ ಗುರುವಾರ ಕೊನೆಗೊಂಡಿದ್ದು, ಈ ಅವಧಿಯಲ್ಲಿ 22,274 ಅರ್ಜಿಗಳನ್ನು ವಿತರಿಸಲಾಗಿದೆ.ಕೊನೆಯ ದಿನ 5,401 ಅರ್ಜಿಗಳು ವಿತರಣೆಯಾಗಿವೆ. ವಾರ್ಡ್ ಸಂಖ್ಯೆ 160ರ ಬಂಗಾರಪ್ಪ ನಗರದ ನಿವಾಸಿಗಳು ಶಿಬಿರಕ್ಕೆ ಉತ್ತಮವಾಗಿ ಪ್ರತಿಕ್ರಿಯಿಸಿದ್ದು, ಆ ಕೇಂದ್ರದಲ್ಲಿ 1,720 ಅರ್ಜಿಗಳು ವಿತರಣೆಯಾಗಿವೆ.ಆಗಸ್ಟ್ 17 ಮತ್ತು 18ರಂದು ಮೊದಲ ಸುತ್ತಿನ ಶಿಬಿರ, ಆಗಸ್ಟ್ 22 ಮತ್ತು 23 ರಂದು ಹೊಸಪಾಳ್ಯ, ಬಿಬಿಎಂಪಿ ವಾರ್ಡ್ ಕಚೇರಿ, ಲಕ್ಷ್ಮಿದೇವಿ ನಗರ, ಲಗ್ಗೆರೆ ಸರ್ಕಾರಿ ಶಾಲೆ ಆವರಣ, ಬಂಗಾರಪ್ಪ ನಗರ ಸರ್ಕಾರಿ ಶಾಲೆ, ಜ್ಞಾನಜ್ಯೋತಿನಗರ ಗೌರವ ಸದನ ಸಮುದಾಯ ಭವನ, ಎಚ್‌ಬಿಆರ್ ಬಡಾವಣೆಯ ಬಿಡಿಎ ಕಾಂಪ್ಲೆಕ್ಸ್, ಮುನ್ನೇಕೊಲಾಲ್ ವರ್ತುಲ ರಸ್ತೆಯ ಮಲ್ಟಿಪ್ಲೆಕ್ಸ್ ಎದುರು, ವಿಜ್ಞಾನನಗರದ ಬಿಬಿಎಂಪಿ ವಾರ್ಡ್ ಕಚೇರಿ, ಹೊಂಗಸಂದ್ರ ಸಮುದಾಯ ಭವನ, ಕನಕನಗರ ಗಣಪತಿ ದೇವಾಲಯ, ಸಹಕಾರ ನಗರ ಸೇವಾ ಠಾಣೆ, ವಿದ್ಯಾರಣ್ಯಪುರ ಸೇವಾ ಠಾಣೆಯಲ್ಲಿ ಎರಡನೇ ಸುತ್ತಿನ ಶಿಬಿರಗಳು ನಡೆದಿದ್ದವು. 

 

25 ಹಾಗೂ 26 ವಿಶೇಷ ಶಿಬಿರ

ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಕೃಷ್ಣರಾಜಪುರ ವಿಧಾನಸಭಾ ಕ್ಷೇತ್ರದ ನಾಗರಿಕರಿಗೆ ಕಾವೇರಿ ನಾಲ್ಕನೇ ಹಂತದ ಎರಡನೇ ಘಟ್ಟದ ನೀರಿನ ಸೌಲಭ್ಯವನ್ನು ಕಲ್ಪಿಸುವ ಉದ್ದೇಶದಿಂದ ಜಲಮಂಡಳಿಯು ಕ್ಷೇತ್ರದಲ್ಲಿ ಇದೇ 25 ಹಾಗೂ 26ರಂದು ವಿಶೇಷ ಶಿಬಿರ ಆಯೋಜಿಸಿದೆ.ಹೊರಮಾವು, ರಾಮಮೂರ್ತಿನಗರ, ವಿಜಿನಾಪುರ ವಾರ್ಡ್ ಜನರಿಗೆ ರಾಮಮೂರ್ತಿ ನಗರದ ನೆಲಮಟ್ಟದ ನೀರು ಸಂಗ್ರಹಾಗಾರ ಬಳಿ, ಕೆ.ಆರ್.ಪುರ, ಬಸವನಪುರ, ದೇವಸಂದ್ರ ವಾರ್ಡ್ ಜನರಿಗೆ ಕೆ.ಆರ್.ಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ, ನಾರಾಯಣಪುರ ವಾರ್ಡ್, ದೇವಸಂದ್ರ ವಾರ್ಡ್‌ನ ಬಿ.ನಾರಾಯಣಪುರ, ಗಿಡ್ಡಮ್ಮ ಬಡಾವಣೆ, ಜಯಲಕ್ಷ್ಮಮ್ಮ ಬಡಾವಣೆ ಹಾಗೂ ಪಕ್ಕದ ಬಡಾವಣೆಯ ಜನರಿಗೆ ಎ.ನಾರಾಯಣಪುರ ವಾರ್ಡ್ ಕಚೇರಿ ಹನುಮಾನ್ ಕಚೇರಿ ಬಳಿ ಶಿಬಿರ ನಡೆಯಲಿದೆ. ವಿಜ್ಞಾನ ನಗರ, ಎಚ್‌ಎಎಲ್ ವಿಮಾನನಿಲ್ದಾಣ ಸಮೀಪದ ನಿವಾಸಿಗಳಿಗೆ ಬಿಬಿಎಂಪಿ ಉಪವಿಭಾಗ ಕಚೇರಿ ಹಾಗೂ ವಿಭೂತಿಪುರ                  ವಾರ್ಡ್ ಕಚೇರಿಯಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.