ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳಗೊಳ ಪೇಪರ್ ಟೌನ್ ಸರ್ಕಾರಿ ಶಾಲೆ ಶಿಕ್ಷಕರೊಬ್ಬರ ಆಸಕ್ತಿಯ ಫಲವಾಗಿ ದೈಹಿಕ ಮತ್ತು ಬೌದ್ಧಿಕ ಬಲಹೀನ ಮಕ್ಕಳಿಗಾಗಿ ಮನೋ ದೈಹಿಕ ಶಿಕ್ಷಣ ನೀಡುವ `ವಿಶೇಷ ಮಕ್ಕಳ ಪುನರ್ವಸತಿ ಕೇಂದ್ರ~ ಹೆಸರಿನ ಚಿಕಿತ್ಸಾ ಕೇಂದ್ರವೊಂದು ಯಶಸ್ವಿಯಾಗಿ ನಡೆಯುತ್ತಿದೆ.

ಕೈಕಾಲು ಸ್ವಾಧೀನ ಇಲ್ಲದ, ದೃಷ್ಟಿ ಕಳೆದುಕೊಂಡ, ಮೂಕ, ಕಿವುಡುತನ ಇರುವ 20ಕ್ಕೂ ಹೆಚ್ಚು ಅಂಗವಿಕಲ ಮಕ್ಕಳಿಗೆ ಇಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ವಿವಿಧ ಥೆರಪಿಗಳ ಮೂಲಕ ಚೈತನ್ಯ ತುಂಬುವ ಕೆಲಸ ನಡೆಯುತ್ತಿದೆ.

ಶಿಕ್ಷಕ ಸಯ್ಯದ್ಖಾನ್ಬಾಬು ಮಾರ್ಗ ದರ್ಶನದಲ್ಲಿ ತರಬೇತಿ ಪಡೆದ 5 ಮಂದಿ ಮಹಿಳಾ ಸ್ವಯಂ ಸೇವಕರು ಹಾಗೂ ಯೋಗ ಶಿಕ್ಷಕ ಕ್ಯಾತನಹಳ್ಳಿ ವೆಂಕಟೇಶ್ ಎಂಬುವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ವಿಶೇಷ ಮಕ್ಕಳ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ.

ಮನೆ ಮನೆಗೆ ತೆರಳಿ ವಾಹನದಲ್ಲಿ ಮಕ್ಕಳನ್ನು ಈ ಕೇಂದ್ರಕ್ಕೆ ಕರೆತಂದು ಮತ್ತೆ ಮನೆಗೆ ಬಿಡುವ ವ್ಯವಸ್ಥೆ ಇದೆ. ಇದಕ್ಕೆ ಪೋಷಕರಿಂದ ಯಾವುದೇ ಶುಲ್ಕ ಪಡೆಯು ವುದಿಲ್ಲ. ದಾನಿಗಳಿಂದ ಹಣ ಸಂಗ್ರಹಿಸಿ ಮಕ್ಕಳಿಗೆ ಅಗತ್ಯ ಪಾಠ, ಪೀಠೋಪಕರಣ ಹಾಗೂ ಚಿಕಿತ್ಸೆಯ ಕೊಡಿಸುತ್ತಿದ್ದಾರೆ. ಮಕ್ಕಳ ಮಾನಸಿಕ ಹಾಗೂ ದೈಹಿಕ ಸ್ಥಿತಿಗೆ ಅನುಸಾರ ಇಲ್ಲಿ ಚಟುವಟಿಕೆಗಳು ನಡೆಯುತ್ತವೆ.

ಶಾರೀರಿಕ ಥೆರಪಿ: ವ್ಯಾಯಾಮ, ಎಣ್ಣೆ ಮಸಾಜ್, ಸೆನ್ಸುರಿ (ಬಣ್ಣ ಬಣ್ಣದ ಚೆಂಡು ಬಳಕೆ), ಮಿರರ್ ಆ್ಯಕ್ಷನ್ (ಕನ್ನಡಿಯ ಪ್ರತಿ ಬಿಂಬದ ಮೂಲಕ ಬಾಯಿ ಚಲನೆ ಗುರುತಿಸುವುದು) ಹಾಗೂ ಯೋಗ ಥೆರಪಿಯ ಮೂಲಕ ಮಕ್ಕಳ ಮಿದುಳು ಮತ್ತು ಅಂಗಗಳ ಚಲನ ಶಕ್ತಿ ಹೆಚ್ಚಿಸುವ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ಸ್ವಾಧೀನ ಇಲ್ಲದ ಅಂಗಗಳ ಮೇಲೆ ಪುಟ್ಟ ಮರಳು ಚೀಲಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತದೆ.

ಶೈಕ್ಷಣಿಕ ಥೆರಪಿ: ಈ ಥೆರಪಿಯಲ್ಲಿ ಮಕ್ಕಳಿಗೆ ಸಂಬಂಧಗಳನ್ನು ಗುರುತಿಸುವುದನ್ನು ಕಲಿಸಲಾ ಗುತ್ತದೆ. ಅಪ್ಪ-ಅಮ್ಮ, ಅಣ್ಣ-ತಂಗಿ, ಅಕ್ಕ-ತಮ್ಮ ಇತರ ಸಂಬಂಧಗಳ ಪರಿಕಲ್ಪನೆ ಮೂಡಿಸುವುದು ಈ ಚಿಕಿತ್ಸೆಯ ಮುಖ್ಯ ಉದ್ದೇಶ. ರೇಡಿಯೋ ಮತ್ತು ಮೊಬೈಲ್ ಬಳಸಿ ಸಂಗೀತ ಕೇಳುವಂತೆ, ನೃತ್ಯ ಮಾಡುವಂತೆ ಪ್ರೇರೇಪಿಸಲಾಗುತ್ತದೆ.

ಬಣ್ಣ ಬಣ್ಣದ ಚೆಂಡುಗಳನ್ನು ಬಳಸಿ ಸುಪ್ತ ಶಕ್ತಿಯನ್ನು ಉದ್ಧೀಪಿಸುವ ಸೆನ್ಸುರಿ ಚಿಕಿತ್ಸೆ ನೀಡುವ ವಿಧಾನ.

ಔದ್ಯೋಗಿಕ ಥೆರಪಿ: ದೈನಂದಿನ ಕೆಲಸಗಳನ್ನು ಮಕ್ಕಳಿಗೆ ಕಲಿಸುವುದು ಈ ಥೆರಪಿಯ ಉದ್ದೇಶ. ಆಟದ ವಸ್ತುಗಳನ್ನು ಪಡೆಯುವುದು, ಅದನ್ನು ಇತರರಿಗೆ ಕೊಡು ವುದು, ಪುಸ್ತಕ ಮುಚ್ಚುವುದು, ತೆರೆಯು ವುದು, ಹಲ್ಲು ಉಜ್ಜುವುದು, ಊಟ ಮಾಡು ವುದು, ಕೈ ತೊಳೆಯುವುದು, ನೀರನ್ನು ಬಸಿದು ಕುಡಿಯುವುದು, ಬಟ್ಟೆ ಕಳಚುವ ಮತ್ತು ತೊಡುವ ಚಟುವಟಿಕೆ ಕಲಿಸಲಾಗುತ್ತದೆ.

ತಿಂಗಳಿಗೊಮ್ಮೆ ಮಕ್ಕಳ ಸಮಗ್ರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಜೊತೆಗೆ ಅವರ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯನ್ನೂ ತಮ್ಮ ಮಕ್ಕಳ ಜತೆ ಬರುವ ಪೋಷಕರಿಗೆ ಪುನರ್ವಸತಿ ಕೇಂದ್ರದ ಪಕ್ಕದಲ್ಲಿ ಹೊಲಿಗೆ ಕೇಂದ್ರ ತರಬೇತಿ ನೀಡಲಾಗುತ್ತಿದೆ.

`ಪುನರ್ವಸತಿ ಕೇಂದ್ರ ಆರಂಭಿಸಿದ ಪ್ರಾರಂಭದಲ್ಲಿ ಆತಂಕವಿತ್ತು. ವಿವೇಕಾನಂದ ಸೇವಾಶ್ರಮ ಮತ್ತಿತರ ಸಂಘ, ಸಂಸ್ಥೆಗಳು ಸಹಾಯ ಹಸ್ತ ಚಾಚಿದ್ದರಿಂದ ಅಂದು ಕೊಂಡಂತೆ ನಡೆಯುತ್ತಿದೆ. ಕೊರಡಿನಂತೆ ಬಿದ್ದುಕೊಂಡಿದ್ದ ಮಗು ಎದ್ದು ಕೂರುತ್ತಿದೆ; ನಿಲ್ಲಲಾಗದ ಸ್ಥಿತಿಯಲ್ಲಿದ್ದ ಮಗು ಹೆಜ್ಜೆ ಹಾಕಲಾರಂಭಿಸಿದೆ. ಭಿತ್ತಿಪತ್ರ, ಆಟಿಕೆಗಳು, ಕಂಪ್ಯೂಟರ್ನ ಚಿತ್ರಗಳನ್ನು ಗುರುತಿಸುವ ಮಟ್ಟಿಗೆ ಮಕ್ಕಳಲ್ಲಿ ಪ್ರಗತಿ ಕಾಣುತ್ತಿದೆ~ ಎನ್ನುವ ಶಿಕ್ಷಕ ಸಯ್ಯದ್ಖಾನ್ ಬಾಬು, `ತಾಲ್ಲೂಕು, ಜಿಲ್ಲೆ ಎಂಬ ತಾರತಮ್ಯ ಇಲ್ಲದೆ ದೈಹಿಕ ಮತ್ತು ಮಾನಸಿಕವಾಗಿ ಹಿಂದುಳಿದ ಎಲ್ಲ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡುವುದು ನಮ್ಮ ಉದ್ದೇಶ~ ಎಂದು ಹೇಳುತ್ತಾರೆ. ಸಯ್ಯದ್ಖಾನ್ ಬಾಬು ಅವರ ಮೊಬೈಲ್ ನಂಬರ್ 99645 08263.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.