ವಿಶೇಷ ರೈಲು:ಅವಧಿ ವಿಸ್ತರಣೆ

7

ವಿಶೇಷ ರೈಲು:ಅವಧಿ ವಿಸ್ತರಣೆ

Published:
Updated:

ಹುಬ್ಬಳ್ಳಿ: ಯಶವಂತಪುರ- ಶಿರಡಿ ನಡುವೆ ವಾರಕ್ಕೊಮ್ಮೆ ಓಡಾಡುವ ವಿಶೇಷ ರೈಲಿನ ಅವಧಿ ವಿಸ್ತರಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.

ಈ ಮೊದಲಿನ ತೀರ್ಮಾನದ ಪ್ರಕಾರ ಫೆ. 23ರಂದು ಈ ವಿಶೇಷ ರೈಲಿನ ಸಂಚಾರ ಕೊನೆಗೊಳ್ಳಬೇಕಿದ್ದು, ಈಗ ಜೂನ್ 28ರವರೆಗೆ ವಿಸ್ತರಿಸಲಾಗಿದೆ.ಮಂಗಳವಾರ ಬೆಳಿಗ್ಗೆ 7.30ಕ್ಕೆ ಯಶವಂತಪುರದಿಂದ ಪ್ರಯಾಣ ಆರಂಭಿಸುವ ಈ ರೈಲು (ಸಂಖ್ಯೆ 06539) ಬಳ್ಳಾರಿ, ಗದಗ, ಬಾಗಲಕೋಟೆ, ವಿಜಾಪುರ, ಸೊಲ್ಲಾಪುರ ಮೂಲಕ ಸಾಗಿ ಬುಧವಾರ ಬೆಳಿಗ್ಗೆ 8ಕ್ಕೆ ಶಿರಡಿ ತಲುಪುತ್ತದೆ. ಬುಧವಾರ ಸಂಜೆ 6.20ಕ್ಕೆ ಶಿರಡಿಯಿಂದ ವಾಪಸಾಗುವ ಈ ರೈಲು (ಸಂಖ್ಯೆ 06540) ಮರುದಿನ ರಾತ್ರಿ 8ಕ್ಕೆ ಯಶವಂತಪುರ ತಲುಪುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry