ಸೋಮವಾರ, ಮಾರ್ಚ್ 8, 2021
24 °C

ವಿಶ್ವದ ಅತಿ ಉದ್ದ, ಎತ್ತರದ ಗಾಜಿನ ತೂಗು ಸೇತುವೆ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವದ ಅತಿ ಉದ್ದ, ಎತ್ತರದ ಗಾಜಿನ ತೂಗು ಸೇತುವೆ ಸಿದ್ಧ

ಬೀಜಿಂಗ್‌ (ಪಿಟಿಐ): ಚೀನಾದ ಹುನಾನ್‌ ಪ್ರಾಂತ್ಯದ ಝಾಂಗ್‌ಜಿಯಾಜಿ ಪಟ್ಟಣದಲ್ಲಿ  ನಿರ್ಮಾಣಗೊಂಡಿರುವ ವಿಶ್ವದ ಅತಿ ಉದ್ದ ಮತ್ತು ಎತ್ತರದ ಗಾಜಿನ ಸೇತುವೆ ಸಾರ್ವಜನಿಕರ ವೀಕ್ಷಣೆಗೆ ಸಜ್ಜಾಗಿದೆ.  ಈ ಸೇತುವೆಯು ವಿಶಿಷ್ಟ ವಿನ್ಯಾಸ ಮತ್ತು ನಿರ್ಮಾಣಕ್ಕಾಗಿ ಹತ್ತು ವಿಶ್ವ ದಾಖಲೆಗೆ ಪಾತ್ರವಾಗಿದೆ.



ಇದೇ ವಾರದಲ್ಲಿ ಸಾರ್ವಜನಿಕರ ವೀಕ್ಷಣೆಗೆ ತೆರೆದುಕೊಳ್ಳಲಿದೆ. ತೂಗು ಸೇತುವೆ ನೋಡಲು ಬಯಸುವವರು ಒಂದು ದಿನ ಮುಂಚಿತವಾಗಿ ಬುಕಿಂಗ್‌ ಮಾಡಿಕೊಳ್ಳಬೇಕಾಗುತ್ತದೆ ಎಂದು ಕ್ಸಿನ್‌ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಡಿಸೆಂಬರ್‌ನಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು ತೂಗು ಸೇತುವೆ ಮತ್ತು ಗಾಜಿನ ಧಾರಣಾ ಸಾಮರ್ಥ್ಯ ಪರೀಕ್ಷಿಸಲು ಎರಡು ಟನ್‌ ಭಾರದ ಟ್ರಕ್‌ ಓಡಿಸಲಾಗಿತ್ತು.

ಹಾಲಿವುಡ್‌ನ ಹಿಟ್‌ ಸಿನಿಮಾ ‘ಅವತಾರ್‌’ ನೋಡಿದವರಿಗೆ, ಕಂಬದಾಕಾರದ ಪರ್ವತಾಕಾರದ ಚಿತ್ರಣ ನೆನಪಿರಬಹುದು. ಇದು ಝಾಂಗ್‌ಜಿಯಾಜಿಯಲ್ಲಿದೆ. ಝಾಂಗ್‌ಜಿಯಾಜಿದಲ್ಲಿರುವ  ಸುಂದರ ಕಣಿವೆ ಪ್ರದೇಶಕ್ಕೆ 2015ರಲ್ಲಿ, 12 ಲಕ್ಷಕ್ಕೂ ಹೆಚ್ಚು ಸ್ಥಳೀಯ ಮತ್ತು ವಿದೇಶಿ ಪ್ರವಾಸಿಗಳು ಭೇಟಿ ನೀಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.