ಮಂಗಳವಾರ, ಮಾರ್ಚ್ 2, 2021
31 °C

ವಿಶ್ವದ ಹಿರಿಯಜ್ಜ ಯಸುತರೊ ಕ್ಯೊಡಿ ಜಪಾನ್‌ನಲ್ಲಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವದ ಹಿರಿಯಜ್ಜ ಯಸುತರೊ ಕ್ಯೊಡಿ ಜಪಾನ್‌ನಲ್ಲಿ ನಿಧನ

ಟೊಕಿಯೊ (ಎಎಫ್‌ಪಿ): ವಿಶ್ವದ ಹಿರಿಯಜ್ಜ, ಶತಾಯುಷಿ ಯಸುತರೊ ಕ್ಯೊಡಿ (112 ವರ್ಷ, 312 ದಿನ) ಅವರು ಮಂಗಳವಾರ ಜಪಾನ್‌ನಲ್ಲಿ ನಿಧನರಾದರು.ರೈಟ್‌ ಸಹೋದರರು ವಿಮಾನ ಆವಿಷ್ಕಾರಕ್ಕೆ ಮುನ್ನುಡಿ ಬರೆಯುವ ಕೆಲವೇ ತಿಂಗಳುಗಳ ಹಿಂದೆ ಅಂದರೆ, 1903, ಮಾರ್ಚ್‌ 13 ರಂದು ಜಪಾನಿನ  ತ್ಸುರ್ಗಾ ಫುಕುಯಿ ಪ್ರಾಂತ್ಯದಲ್ಲಿ ಕ್ಯೊಡಿ ಜನಿಸಿದ್ದರು.ವೃತ್ತಿಯಲ್ಲಿ ಕ್ಯೊಡಿ ದರ್ಜಿಯಾಗಿದ್ದರು.  ವಯೋಸಹಜ ನಿಶಕ್ತಿ ಎದುರಿಸುತ್ತಿದ್ದ ಅವರು ಕಳೆದ ಕೆಲವು ತಿಂಗಳಿಂದ ಹೃದಯ ಬೇನೆ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದರು. ಜಪಾನಿನ ನಗೊಯಾ ಪಟ್ಟಣದ ಆಸ್ಪತ್ರೆಯೊಂದರಲ್ಲಿ ಅವರು ನಿಧನರಾದರು ಎಂದು ಸ್ಥಳೀಯ ಆಡಳಿತ ಖಚಿತಪಡಿಸಿದೆ. ಅವರಿಗೆ 7 ಮಕ್ಕಳು, 9 ಮೊಮ್ಮಕ್ಕಳು ಇದ್ದಾರೆ.ಜಪಾನಿನವರೇ ಆದ ವಿಶ್ವದ ಹಿರಿಯ ವ್ಯಕ್ತಿ, ಶತಾಯುಷಿ ಸಕಾರಿ ಮೊಮೊಯಿ(112 ವರ್ಷ, 150 ದಿನ) ಕಳೆದ ಜುಲೈನಲ್ಲಿ ಮೃತಪಟ್ಟಿದ್ದರು.‘ಮಿತಿ ಮೀರಿ ಕೆಲಸ ಮಾಡುವುದನ್ನು ಬಿಡಿ, ಇರುವ ಬದುಕನ್ನು ಸಂತೋಷದಿಂದ ಅನುಭವಿಸಿ. ಇದೇ ದೀರ್ಘಾಯುಷ್ಯದ ಗುಟ್ಟು’ ಎಂದು ಕ್ಯೊಡಿ ಸದಾ ಹೇಳುತ್ತಿದ್ದರು.ಗಿನ್ನೆಸ್‌ ವಿಶ್ವದಾಖಲೆ ವೆಬ್‌ಸೈಟ್‌ ಪ್ರಕಾರ ಸದ್ಯ ಬದುಕಿರುವ ವಿಶ್ವದ ಹಿರಿಯ ವ್ಯಕ್ತಿಗಳ ಪಟ್ಟಿಯಲ್ಲಿ ಅಮೆರಿಕದ ಸೂಸನ್ನಾ ಮುಷಟ್‌ ಜೋನ್ಸ್‌ (116 ವರ್ಷ, 194 ದಿನ) ಮುಂಚೂಣಿಯಲ್ಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.