ಮಂಗಳವಾರ, ಏಪ್ರಿಲ್ 13, 2021
31 °C

ವಿಶ್ವಾರಾಧ್ಯರ ಜಾತ್ರೆ ಮುಕ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ತಾಲ್ಲೂಕಿನ ಅಬ್ಬೆತುಮಕೂರಿನ ಸಿದ್ಧಸಂಸ್ಥಾನಮಠದ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವವು ಕಳಸಾರೋಹಣದೊಂದಿಗೆ ಭಾನುವಾರ ಮುಕ್ತಾಯಗೊಂಡಿತು.

ಬೆಳಿಗ್ಗೆ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಜೆ ಹಲಗೆ, ವಾದ್ಯ ವೈಭವಗಳೊಂದಿಗೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಸಮ್ಮುಖ ದಲ್ಲಿ ಗಂಗಾಧರ ಸ್ವಾಮಿಗಳು, ರಥೋ ತ್ಸವದ ಕಳಸಾವರೋಹಣ ಮಾಡಿ ದರು.ನಂತರ ಆಶೀರ್ವಚನ ನೀಡಿದ ಶ್ರೀಗಳು, ವಿಶ್ವಾರಾಧ್ಯರು ಅಣಿಮಾದಿ ಅಷ್ಟ ಸಿದ್ಧಿಗಳನ್ನು ಕಟ್ಟೆ ಮೆರೆದ ಜಗ ಜಟ್ಟಿ ಎನಿಸಿದ್ದಾರೆ. ಸಕರ ಜೀವಾತ್ಮರಿಗೆ ಲೇಸನ್ನೇ ಬಯಸಿದ ಭಾವೈಕ್ಯದ ಭಗ ವಂತ ಆಗಿದ್ದಾರೆ. ಅಂತಹ ಪುಣ್ಯಾತ್ಮನ ಜಾತ್ರೆ ವೈಭವದಿಂದ ಜರುಗಲು ಕಾರಣ ರಾದವರು ವಿಶ್ವಾರಾಧ್ಯರ ದಿವ್ಯಪ್ರಭೆಗೆ ಪಾತ್ರರಾಗಲಿದ್ದಾರೆ ಎಂದು ತಿಳಿಸಿದರು.ವಿಶ್ವಾರಾಧ್ಯರ ಅವಧೂತ ಅವಸ್ಥೆ ಯನ್ನು ತಲುಪಿದ ಸಂತ ಆಗಿದ್ದಾರೆ. ಸಾಂಸಾರಿಕ ಜಂಜಾಟಗಳಿಂದ ಮುಕ್ತ ನಾದ ಸಂಕೇತವಾಗಿ ದೇಹದ ಬಟ್ಟೆ ಗಳನ್ನು ಕಳಚಿ ದಿಗಂಬರತ್ವವನ್ನು ಹೊಂದುತ್ತಾರೆ. ಅಲೌಕಿಕ ಆನಂದದ ತುತ್ತ ತುದಿಗೇರಿದ ಅವರು, ತಾವು ಕಂಡು ಉಂಡ ಪಾರಮಾರ್ಥಿಕ ತತ್ವವನ್ನು ಈ ಲೋಕದ ಜನೆಗೆ ಉಣ ಬಡಿಸುವುದರೊಂದಿಗೆ ಕೃತಾರ್ಥರ ನ್ನಾಗಿ ಮಾಡಿದ್ದಾರೆ. ಅಂತೆಯೇ ಈಗಲೂ ಭಕ್ತ ವೃಂದ ಯಾವ ಭಾವ ದಿಂದ ವಿಶ್ವಾರಾಧ್ಯರ ದರ್ಶನಕ್ಕೆ ಬರುತ್ತಾರೋ ಅದೇ ರೀತಿಯಾಗಿ ಅವರಿಗೆ ಗೋಚರನಾಗುತ್ತಾರೆ ಎಂದು ತಿಳಿಸಿದರು.ಇದಕ್ಕೂ ಮೊದಲು ಜಾತ್ರಾ ಮಹೋತ್ಸವದ ಸೇವಾರ್ಥಿಗಳಿಗೆ ಶ್ರೀಗಳು ಸತ್ಕರಿಸಿ, ಆಶೀರ್ವದಿಸಿದರು. ಆಗಮಿಸಿದ ಎಲ್ಲ ಭಕ್ತರಿಗೆ ಜೋಳದ ಕಡಬು, ಪುಂಡಿಪಲ್ಯೆ, ಅಲಸಂದಿ ಕಾಳು, ಹಸಿ ಮೆಣಸಿನಕಾಯಿ ಚಟ್ನಿ, ಸಜ್ಜಕದ ಉಂಟು ಮತ್ತು ಕಡಕ್ ರೊಟ್ಟಿ ಮುಂತಾದ ಬಗೆಬಗೆಯ ಭೋಜನದ ವ್ಯವಸ್ಥೆ ಮಾಡಲಾಗಿತ್ತು.ಕೊಟ್ರೇಶ್ವರ ಹಿರೇಮಠ, ಈಶಪ್ಪ ಗೌಡ, ಮಹಾದೇವಪ್ಪ ಅಬ್ಬೆತುಮ ಕೂರು, ಪಂಪನಗೌಡ, ಚೆನ್ನಪ್ಪಗೌಡ ಮೋಸಂಬಿ, ಡಾ. ಸುಭಾಷಚಂದ್ರ ಕೌಲಗಿ, ಎಸ್.ಎನ್. ಮಿಂಚಿನಾಳ, ಸಿದ್ಧನಗೌಡ ಬಬಲಾದಿ, ಕಲ್ಯಾಣ, ಸಿದ್ಧು ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.