ಶನಿವಾರ, ಮೇ 28, 2022
24 °C

ವಿಶ್ವಾಸಕ್ಕೆ ದ್ರೋಹ ಬಗೆಯಲಾರೆ: ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಭಾವಿ: ಶಹಾಪುರ ಕ್ಷೇತ್ರದ ಶಾಸಕಗುರುಪಾಟೀಲ ಶಿರವಾಳ ಅವರನ್ನು ಕೆಜೆಪಿ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಸನ್ಮಾನಿಸಿದರು

ಬೃಹತ್ ಮೆರವಣಿಗೆ ಮೂಲಕ ಪ್ರಮುಖ ಪ್ರಾರ್ಥನಾ ಸ್ಥಳಗಳು, ದೇವಾಲಯಗಳಿಗೆ ಭೇಟಿ ನೀಡಿದ ಗುರು ಪಾಟೀಲರಿಗೆ, ಗ್ರಾಮ ಪಂಚಾಯಿತಿ ಆವರಣದಲ್ಲಿ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿದ ಗುರು ಪಾಟೀಲ, ಮತದಾರರು ನನ್ನ ಮಾಲೀಕರು. ನಾನು ನಿಮ್ಮ ಸೇವಕ. ನಿಮ್ಮ ಆಶೋತ್ತರಗಳಿಗೆ ಸ್ಪಂದಿಸುವೆ. ಕೆಂಭಾವಿ ವಲಯವು ನನಗೆ ಹೃದಯವಿದ್ದಂತೆ. ಈ ಭಾಗದ ಅಭಿವೃದ್ಧಿಗೆ ಶ್ರಮಿಸುವೆ ಎಂದರು.ಈ ಭಾಗದಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ಮತ್ತು ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸರ್ಕಾರದ ಯೊಜನೆಗಳನ್ನು ಬಡಜನರಿಗೆ ಮುಟ್ಟುವಂತೆ ಕೆಲಸ ಮಾಡುವೆ ಎಂದರು.ಚನ್ನಬಸವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ, ರಾಮಚಂದ್ರ ಕಾಶಿರಾಜ, ಇಬ್ರಾಹಿಂ ಶಿರವಾಳ, ಈಶ್ವರ, ಶರಣಪ್ಪ ಬಂಡೋಳಿ, ರಾಜಶೇಖರ, ಶಿವಶರಣರಪ್ಪಾ ಸೊನ್ನದ, ಕಿಶನ್‌ಗೋಪಾಲ ಭಂಗ, ತಾಹೇರಪಾಷಾ ಖಾಜಿ, ಗುರುಮೂರ್ತಿ, ಸುಧಾಕರ ಡಿಗ್ಗಾವಿ, ದ್ಯಾಮನಗೌಡ, ಸಿದ್ದಣ್ಣ ಅಂಗಡಿ, ಬಸವರಾಜಪ್ಪಗೌಡ, ಅಲ್ಲಾವುದ್ದೀನ್ ಕೋಕರ್, ಸುಭಾಷ ಮ್ಯೋಗೇರಿ, ದೇವಿಂದ್ರಪ್ಪ ಜಾಲಿಬೆಂಚಿ, ಬಸವಣ್ಣೆಪ್ಪ ವೇದಿಕೆಯಲ್ಲಿದ್ದರು.ಸುಮಿತ್ರಪ್ಪ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಸೊನ್ನದ ಸ್ವಾಗತಿಸಿದರು. ಅಮರಯ್ಯ ಸ್ವಾಮಿ ನಿರೂಪಿಸಿದರು. ಶಿವನಗೌಡ ಪಾಟೀಲ ವಂದಿಸಿದರು.ಇದಕ್ಕೂ ಮೊದಲು ಶಾಸಕರು  ಪಟ್ಟಣದ ಪ್ರತಿ ವಾಡ್‌ಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ವಾಹನ ಏರದೇ, ಪಾದಯಾತ್ರೆ ಮೂಲಕ ಶಾಸಕರು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ಉತ್ತರಾಖಂಡ ಪ್ರವಾಹದಲ್ಲಿ ಮೃತಪಟ್ಟವರ ಗೌರವಾರ್ಥ ಮೌನ ಆಚರಿಸಲಾಯಿತು.ಕಾಮಗಾರಿ ಚಾಲನೆ ಇಂದು:  ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದ ಸುರಪುರ-ಹುನಗುಂದ ರಾಜ್ಯ ಹೆದ್ದಾರಿಯ ರೂ. 48 ಕೋಟಿ ವೆಚ್ಚದ 46 ಕಿ.ಮೀ. ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಶಾಸಕ ಗುರುಪಾಟೀಲ ಶಿರವಾಳ ಗುರುವಾರ (ಜು.4) ಮಧ್ಯಾಹ್ನ 12 ಗಂಟೆಗೆ ಚಾಲನೆ ನೀಡುವರು.ಅತಿಥಿಗಳಾಗಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹಾದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ, ಸಂಸದರಾದ ಎಸ್. ಫಕೀರಪ್ಪ, ಬಸವರಾಜ ಪಾಟಿಲ ಸೇಡಂ, ವಿಧಾನ ಪರಿಷತ್ ಸದಸ್ಯ ಕೆ.ಬಿ. ಶಾಣಪ್ಪ, ಅಲ್ಲಮಪ್ರಭು ಪಾಟೀಲ, ಅಮರನಾಥ ಪಾಟೀಲ, ಅಧೀಕ್ಷಕ ಎಂಜಿನಿಯರ್ ಶಿವಶಂಕರ,  ಕಾರ್ಯ ನಿರ್ವಾಹಕ ಎಂಜಿನಿಯರ್ ಎಂ.ಆರ್. ನಾಗನಗೌಡರ ಭಾಗವಹಿಸಲಿದ್ದಾರೆ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.