ಸೋಮವಾರ, ಮೇ 23, 2022
27 °C

ವಿಶ್ವ ಕನ್ನಡ ತೇರು ಅಭಿಯಾನಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಚಿಕ್ಕಬಳ್ಳಾಪುರ: ಬೆಳಗಾವಿಯಲ್ಲಿ 11ರಿಂದ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಜಿಲ್ಲೆಯಿಂದ ಸೋಮವಾರ ವಿಶ್ವಕನ್ನಡ ತೇರು ಯಾನ ಸೋಮವಾರ ಇಲ್ಲಿ ಆರಂಭವಾಯಿತು.ತೇರು ಯಾನವನ್ನು ಶಾಸಕ ಕೆ.ಪಿ.ಬಚ್ಚೇಗೌಡ ಉದ್ಘಾಟಿಸಿದರು. ನಂತರ ಮಾತನಾಡಿ ವಿಶ್ವ ಕನ್ನಡ ಸಮ್ಮೇಳನದಲ್ಲಿ ಜಿಲ್ಲೆಯ ಸಂಸ್ಕೃತಿ, ಅಭಿವೃದ್ಧಿ ಮತ್ತು ಕಲೆಗಳ ಬಗ್ಗೆ ಅವರು ಮೂಡಿಸುವ ನಿಟ್ಟಿನಲ್ಲಿ ಈ ತೇರು ಮಹತ್ವದ ಪಾತ್ರ ವಹಿಸಲಿದೆ. ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣಗಳು, ದೇವಾಲಯಗಳು, ಕೃಷಿ ಮತ್ತಿತರರ ಅಂಶಗಳ ಬಗ್ಗೆ ಈ ತೇರು ಮಾಹಿತಿ ನೀಡಲಿದೆ ಎಂದರು.ಕನ್ನಡ ತೇರು ಯಾನದ ಅಂಗವಾಗಿ ಜಿಲ್ಲೆಯ ವಿವಿಧ ಸಾಂಸ್ಕೃತಿಕ ಮತ್ತು ಜಾನಪದ ಕಲಾ ತಂಡಗಳು ನಗರದಲ್ಲಿ ಪ್ರದರ್ಶನ ನೀಡಿದವು. ತಾಲ್ಲೂಕಿನ ಭಕ್ತರಹಳ್ಳಿ ವೀರಗಾಸೆ, ಡೊಳ್ಳುಕುಣಿತ, ಪೂಜಾ ಕುಣಿತ, ಪಂಡರಿ ಭಜನೆ, ಕೀಲು ಕುದರೆ, ಗಾರುಡಿ ಗೊಂಬೆಯಾಟ, ವಿವಿಧ ವೇಷಧಾರಿಗಳ ತಂಡಗಳು ನೆರೆದವರ ಮನರಂಜಿಸಿದವು.ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನ ತಮಟೆ, ಮುಖವೀಣೆ ಆಂಜಿನಪ್ಪ ಅವರ ಮುಖವೀಣೆ ಪ್ರದರ್ಶನ, ಮಹಾಲಿಂಗಯ್ಯ ಮಠದ್ ಅವರ ಸಂಗೀತ ಕಾರ್ಯಕ್ರಮ ಮನ ಸೂರೆಗೊಂಡವು.

ಜಿ.ಪಂ. ಅಧ್ಯಕ್ಷ ಚಿನ್ನಪ್ಪಯ್ಯ, ಉಪಾಧ್ಯಕ್ಷೆ, ಸಾವಿತ್ರಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರಪ್ಪ, ಜಿಲ್ಲಾಧಿಕಾರಿ ಮಂಜುಳಾ, ತಾ.ಪಂ. ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ವೆಂಕಟನಾರಾಯಣಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್, ಜಿ.ಪಂ. ಉಪಕಾರ್ಯದರ್ಶಿ ಜುಲ್ಪಿಕರುಲ್ಲಾ, ಎಸಿ  ಪಿ.ವಸಂತಕುಮಾರ್, ತಹಶೀಲ್ದಾರ್ ಪೂರ್ಣಿಮಾ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ, ಕೆ.ಟಿ.ನಾರಾಯಣಸ್ವಾಮಿ, ಎಪಿಎಂಸಿ ಅಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್, ಬಿಜೆಪಿ ಮುಖಂಡರಾದ ಪ್ರೇಮಲೀಲಾ, ಸುಜಾತ ಭೂಷಣ್, ಡಿಡಿಪಿಐ ಚಂದ್ರಶೇಖರ್, ಬಿಇಒ ರಘುನಾಥರೆಡ್ಡಿ, ಶಿಕ್ಷಣ ತಜ್ಞ ಪ್ರೊ.ಕೋಡಿರಂಗಪ್ಪ, ಉಪನ್ಯಾಸಕ ಎನ್.ಲೋಕನಾಥ್ ಮತ್ತಿತತರು ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟಾಚಲಪತಿ ವಿಶ್ವ ಕನ್ನಡ ರಥದ ಉಸ್ತುವಾರಿ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.