ಶನಿವಾರ, ಮೇ 28, 2022
21 °C

ವೀಕೆಂಡ್‌ಗೆ ನಗೆ ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿಯ ಗುರು ಸಂಸ್ಥೆ ಈ ಬಾರಿಯೂ ಬೆಂಗಳೂರಿನಲ್ಲಿ ‘ಮೈಯಾಸ್ ರಂಗಾವಳಿ’ ಎಂಬ ಎರಡು ದಿನಗಳ ನಾಟಕೋತ್ಸವ ಹಮ್ಮಿಕೊಂಡಿದೆ. ಇಲ್ಲಿ ರಂಗಾಸಕ್ತರಿಗೆ ಕಣ್ಣು ಮತ್ತು ಹೊಟ್ಟೆ ಎರಡನ್ನೂ ತಣಿಸಲು ‘ಯೋಗ್ಯ ನಗು, ಆರೋಗ್ಯವಂತ ಆಹಾರ’ ಇರುತ್ತದೆ.ಅಂದರೆ ನಾಟಕ ನೋಡಿ ನಕ್ಕು ರುಚಿಯಾದ ತಿಂಡಿ ತಿನಿಸು ಸವಿಯುವ ಅವಕಾಶ.ಶನಿವಾರ ಸಂಜೆ 6.30ಕ್ಕೆ ‘ಸಹಿ ರೀ ಸಹಿ’. ರಂಗಭೂಮಿಯ ಎಲ್ಲಾ ಸಾಧ್ಯತೆಗಳನ್ನು ಬಳಸಿಕೊಂಡ ನಗೆ ನಾಟಕ. 300ಕ್ಕೂ ಹೆಚ್ಚು ಪ್ರಯೋಗ ಕಂಡಿದೆ. ಕೇದಾರ ಶಿಂಧೆ ರಚನೆಯನ್ನು ಯಶವಂತ ಸರದೇಶಪಾಂಡೆ ಅನುವಾದಿಸಿ ನಿರ್ದೇಶಿಸಿದ್ದಾರೆ. ಅಲ್ಲದೆ ಮಾಲತಿ ಸರದೇಶಪಾಂಡೆ ಹಾಗೂ ಇನ್ನಿತರ ಕಲಾವಿದರೊಂದಿಗೆ ನಾಲ್ಕು ವಿಭಿನ್ನ ಪಾತ್ರಗಳ ಮುಖಾಂತರ ಈ ನಾಟಕದಲ್ಲಿ ಕಾಣಿಸಿಕೊಳ್ಳುತ್ತಾರೆ.ಭಾನುವಾರ ಬೆಳಿಗ್ಗೆ 11ಕ್ಕೆ ‘ಆಲ್ ದಿ ಬೆಸ್ಟ್!’ (ಮರಾಠಿ ಮೂಲ: ದೇವೇಂದ್ರ ಪ್ರೇಮ್. ಕನ್ನಡಕ್ಕೆ: ಪ್ರಹ್ಲಾದ್ ಸರದೇಶಪಾಂಡೆ. ನಿ: ಯಶವಂತ ಸರದೇಶಪಾಂಡೆ). ಮರಾಠಿ ರಂಗಭೂಮಿಯ ದಿಕ್ಕನ್ನೇ ಬದಲಿಸಿ ವಿಶೇಷ ಚೈತನ್ಯ ತುಂಬಿದ ಖ್ಯಾತಿ ಈ ನಾಟಕಕ್ಕಿದೆ. ಮೂವರು ವಿಕಲಾಂಗ ಯುವಕರು ಒಂದೇ ಹುಡುಗಿಯನ್ನು ಪ್ರೀತಿಸಿ ತಮ್ಮ ಪ್ರೀತಿಯನ್ನು ಅವಳಲ್ಲಿ ತೊಡಗಿಸಿಕೊಳ್ಳುವ ಕಥೆಯಿದು.ಅಂಗವೈಕಲ್ಯವನ್ನು ಲೇವಡಿ ಮಾಡದೆ, ತಿಳಿಯಾದ ಹಾಸ್ಯದೊಂದಿಗೆ ಅರಳುತ್ತದೆ.ಭಾನುವಾರ ಸಂಜೆ 6.30ಕ್ಕೆ ‘ಒಂದ ಆಟ ಭಟ್ಟರದು!’ (ಮರಾಠಿ ಮೂಲ: ಸಚಿನ್ ಮೋಟೆ. ಅನುವಾದ ಮತ್ತು ನಿರ್ದೇಶನ: ಯಶವಂತ ಸರದೇಶಪಾಂಡೆ. ಸಂಗೀತ: ಚಿದಾನಂದ ಕುಲಕರ್ಣಿ).ಅತ್ಯಂತ ಸಭ್ಯ ಭಟ್ಟರೊಬ್ಬರು ಅಳಿಯ ಕೊಡುವ ತೊಂದರೆಗಳನ್ನು ಮೆಟ್ಟಿ ನಿಂತು ತಮ್ಮ ಮೇಲಿನ ಆಪಾದನೆಯನ್ನು ಸುಳ್ಳು ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ನಡುವೆ ಬಂದು ಹೋಗುವ ಪೊಲೀಸ್, ಭಟ್ಟರನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸುವ ಪ್ರಯತ್ನ ಮಾಡುತ್ತಾನೆ. ಆದರೂ ಚಾಣಾಕ್ಷತೆಯಿಂದ ಪಾರಾಗಿ ಅಳಿಯನಿಗೆ ಬುದ್ಧಿ ಕಲಿಸುತ್ತಾರೆ.ಸ್ಥಳ: ಎಡಿಎ ರಂಗಮಂದಿರ, ಜೆ ಸಿ ರಸ್ತೆ. ಮಾಹಿತಿಗೆ: 99007 93265, 97401 15545.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.