‘ನಾವು ಅನಾಥರಾಗಿದ್ದೇವೆ. ಅವರ ಅಗಲಿಕೆ ನಮ್ಮೆಲ್ಲರನ್ನೂ ದೊಡ್ಡ ಚಿಂತೆಗೆ ತಳ್ಳಿದೆ.’ ಇತ್ತೀಚೆಗೆ ನಿಧನರಾದ ವೀಣೆ ವೈದ್ಯ ಗಂಗಾಧರ ಅವರ ಬಗ್ಗೆ ಹೆಸರಾಂತ ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ ಅವರ ಪ್ರತಿಕ್ರಿಯೆ ಇದು.

ಮೈಸೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿರುವ ಎಲ್ಲ ಸಂಗೀತ ವಿದ್ವಾಂಸರಿಗೂ ವೀಣೆ ಗಂಗಾಧರ ಅವರ ನಿಧನ ಇಂತಹ ಭಾವನೆಯನ್ನೇ ಹುಟ್ಟು ಹಾಕಿದೆ. ವಾದ್ಯಗಳ ದುರಸ್ತಿ ಕ್ಷೇತ್ರದಲ್ಲಿ ಈಗೊಂದು ಶೂನ್ಯ ವಾತಾವರಣ ಸೃಷ್ಟಿಯಾಗಿದೆ.
ವಾದ್ಯಸಂಗೀತ ಪ್ರಸ್ತುತಿಯ ಗುಣಮಟ್ಟವು, ಕಲಾವಿದರ ಸಾಧನೆ, ಕೌಶಲಗಳಷ್ಟೇ ಮುಖ್ಯವಾಗಿ ವಾದ್ಯದ ಗುಣಮಟ್ಟವನ್ನೂ ಅವಲಂಬಿಸಿರುತ್ತದೆ. ವಾದ್ಯದಲ್ಲಿ ದೋಷಗಳಿದ್ದರೆ ಅದು ಸಂಗೀತ ಪ್ರಸ್ತುತಿಯ ಸಂದರ್ಭದಲ್ಲಿ ವ್ಯಕ್ತವಾಗಿ ರಸಭಂಗಕ್ಕೆ ಕಾರಣವಾಗುತ್ತದೆ.

ಆದ್ದರಿಂದ ವಾದ್ಯಸಂಗೀತ ಕಲಾವಿದರಿಗೆ ವಾದ್ಯದ ಗುಣಮಟ್ಟದಷ್ಟೇ ಅದನ್ನು ನಿರ್ಧರಿಸುವ ತಯಾರಕನೂ ಮುಖ್ಯವಾಗುತ್ತಾನೆ. ಅಂತಹ ಪ್ರಮುಖ ಸಂಗೀತವಾದ್ಯ ತಯಾರಕರೊಬ್ಬರನ್ನು ಮೈಸೂರು ಕಳೆದುಕೊಂಡಿದೆ. ಮೈಸೂರಿನ ರಾಮಾನುಜ ರಸ್ತೆಯ ಶಾರದಾ ಮ್ಯೂಸಿಕಲ್ಸ್ ಮಾಲೀಕ ಹಾಗೂ ಪ್ರಸಿದ್ಧ ಸಂಗೀತವಾದ್ಯ ತಯಾರಕ ವೀಣೆ ಎಲ್. ಗಂಗಾಧರ ಅವರು ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿ ತೀರಿಕೊಂಡರು.

ಮೈಸೂರಿನ ಬಹುಪಾಲು ಸಂಗೀತವಾದ್ಯ ಕಲಾವಿದರ, ಅದರಲ್ಲೂ ವಿಶೇಷವಾಗಿ ವೀಣಾವಾದಕರ ವಾದ್ಯಗಳನ್ನು ತಯಾರಿಸಿಕೊಟ್ಟ ಕೀರ್ತಿ ಗಂಗಾಧರ ಅವರಿಗೆ ಸಲ್ಲುತ್ತದೆ. ಎಂ.ಜೆ. ಶ್ರೀನಿವಾಸ ಅಯ್ಯಂಗಾರ್, ದೊರೆಸ್ವಾಮಿ ಅಯ್ಯಂಗಾರ್, ಆರ್.ಎನ್. ದೊರೆಸ್ವಾಮಿ, ಡಾ. ಎಸ್. ವಿಜಯರಾಘವನ್, ಎಸ್. ರಾಜಲಕ್ಷ್ಮಿ, ಆರ್.ಕೆ. ಪದ್ಮನಾಭ, ಎ.ಎಸ್. ಪದ್ಮಾ, ಎಂ.ಕೆ. ಸರಸ್ವತಿ, ಮೈಸೂರು ಎಂ. ನಾಗರಾಜ್, ಎಸ್.ವಿ. ಸಹನಾ, ಎನ್. ರವಿಕಿರಣ್ ಮೊದಲಾದ ಹೆಸರಾಂತ ಕಲಾವಿದರು ತಮ್ಮ ವಾದ್ಯಗಳನ್ನು ತಯಾರಿಸಿಕೊಂಡದ್ದು ಮತ್ತು ಅವುಗಳನ್ನು ನಿರ್ವಹಿಸುತ್ತಿದುದ್ದು ಗಂಗಾಧರ ಅವರ ಬಳಿ.

ವಾದ್ಯ ತಯಾರಿಕೆ ಕಲೆಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದಿದ್ದರೂ ಗಂಗಾಧರ ಅವರು ಬಹಳಮಟ್ಟಿಗೆ ಅದನ್ನು ಕಲಿತದ್ದು ಸ್ವಂತ ಪರಿಶ್ರಮದಿಂದ. ತಂದೆ ಲಿಂಗಪ್ಪಾಚಾರ್ ಅವರು ತ್ಯಾಗರಾಜ ರಸ್ತೆಯಲ್ಲಿ ನಡೆಸುತ್ತಿದ್ದ ವಾದ್ಯ ತಯಾರಿಕೆಯ ಅಂಗಡಿಯನ್ನೇ ಕೆಲವು ಕಾಲ ಮುಂದುವರಿಸಿದ ಅವರು ನಂತರ ಅದನ್ನು ರಾಮಾನುಜ ರಸ್ತೆಗೆ ಸ್ಥಳಾಂತರಿಸಿದರು.

ವೀಣೆ, ಪಿಟೀಲು, ಗಿಟಾರ್, ತಂಬೂರಿ, ಮ್ಯಾಂಡೋಲಿನ್ ಮೊದಲಾದ ತಂತಿವಾದ್ಯಗಳನ್ನು ತಯಾರಿಸುವಲ್ಲಿ ಕರಗತಗೊಂಡಿದ್ದರು. ವೀಣೆ ತಯಾರಿಕೆ ಮತ್ತು ದುರಸ್ತಿ ಕಾರ್ಯದಲ್ಲಿ ಅತ್ಯಂತ ಪ್ರವೀಣರಾಗಿದ್ದರು. ಮೇಳ ಕೂರಿಸುವುದು, ಕೊಡ ತೋಡುವುದು, ಎದೆ ಹಲಗೆ, ನಾದಸ್ತಂಭ, ರೇಕಿನ ಕೆಲಸ ಎಲ್ಲವನ್ನೂ ತಾಳ್ಮೆಯಿಂದ ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದರು.

ವೀಣೆಯ ಅಂತರಂಗವನ್ನು ಅರಿತುಕೊಳ್ಳಲೆಂದೇ ಸತತ ಮೂರು ವರ್ಷಗಳ ಕಾಲ ವಿದ್ವಾನ್ ಆರ್.ಕೆ. ಪದ್ಮನಾಭ ಅವರ ಶಿಷ್ಯರಾಗಿ ವೀಣಾಭ್ಯಾಸ ನಡೆಸಿದ್ದರು. ಇದಕ್ಕೂ ಮುನ್ನ ಮೈಸೂರು ಪೊಲೀಸ್ ಬ್ಯಾಂಡ್ನಲ್ಲಿ ವೀಣಾವಾದಕರಾಗಿದ್ದ ನಾಗಪ್ಪಾಚಾರ್ ಅವರ ಬಳಿಯೂ ಕೆಲ ಕಾಲ ಶಿಷ್ಯರಾಗಿದ್ದರು.

‘ಅವರಷ್ಟು ಅಚ್ಚುಕಟ್ಟಾಗಿ ವೀಣೆ ತಯಾರಿಸುವ ಮತ್ತೊಬ್ಬ ವ್ಯಕ್ತಿಯನ್ನು ನಾನು ಕಂಡಿಲ್ಲ. ವಾದ್ಯದ ಬಗ್ಗೆ ಅವರಿಗೆ ಅಷ್ಟು ಆಳವಾದ ತಿಳಿವಳಿಕೆಯಿತ್ತು. ಕಲಾವಿದರ ಅಪೇಕ್ಷೆಗಳನ್ನು ತಾಳ್ಮೆಯಿಂದ ಆಲಿಸಿ ಅದಕ್ಕೆ ತಕ್ಕ ಹಾಗೆ ವಾದ್ಯ ತಯಾರಿಸಿಕೊಡುತ್ತಿದ್ದರು. ಆದರೆ ಗುಣಮಟ್ಟದ ವಿಷಯ ಬಂದಾಗ ಯಾವುದೇ ಕಾರಣಕ್ಕೂ ರಾಜಿಯಾಗುತ್ತಿರಲಿಲ್ಲ. ವಾದ್ಯ ತಯಾರಿಕೆಗೆ ತಾವು ಕೇಳುವಷ್ಟು ಸಮಯಾವಕಾಶ ನೀಡುವುದಾದರೆ ಮಾತ್ರ ಕಲಾವಿದರ ಆರ್ಡರ್ ಒಪ್ಪಿಕೊಳ್ಳುತ್ತಿದ್ದರು.’ ಎಂದು ವಿದುಷಿ ಎಸ್. ರಾಜಲಕ್ಷ್ಮಿ ಹೇಳುತ್ತಾರೆ.
ಉಪಯೋಗಿಸಲಾರದಷ್ಟು ಸಂಪೂರ್ಣ ಜಖಂಗೊಂಡಿದ್ದ ತಮ್ಮ ವೀಣೆಯೊಂದನ್ನು ಹಾಳಾದದ್ದರ ಕಿಂಚಿತ್ತು ಕುರುಹೂ ಸಿಗದಷ್ಟರ ಮಟ್ಟಿಗೆ ಸಜ್ಜುಗೊಳಿಸಿ ಸುಮಧುರ ನಾದ ಹೊಮ್ಮುವಂತೆ ಮಾಡಿಕೊಟ್ಟಿದ್ದ ಗಂಗಾಧರ ಅವರ ನೈಪುಣ್ಯತೆಯನ್ನು ಚಿತ್ರವೀಣೆ ಕಲಾವಿದ ಎನ್. ರವಿಕಿರಣ್ ನೆನಪಿಸಿಕೊಳ್ಳುತ್ತಾರೆ.

ವಿದ್ವಾನ್ ಆರ್.ಕೆ. ಪದ್ಮನಾಭ ಅವರಿಗಂತೂ ಗಂಗಾಧರ ಅವರ ಅಗಲಿಕೆ ಆಘಾತವನ್ನೇ ತಂದಿದೆ. ‘ವೀಣೆ ತಯಾರಿಕೆಯ ವಿಷಯದಲ್ಲಿ ಅಷ್ಟು ಜ್ಞಾನ, ಶ್ರದ್ಧೆ, ತಾಳ್ಮೆ, ಆತ್ಮವಿಶ್ವಾಸ, ವಿನಯ ಇರುವಂತಹವರನ್ನು ನಾವು ಇನ್ನೆಲ್ಲಿ ಹುಡುಕಿಕೊಂಡು ಹೋಗುವುದು? ಎಲ್ಲಿ ಸಿಗುತ್ತಾರೆ? ಎಷ್ಟೇ ಹಾಳಾಗಿ ಹೋಗಿರುವ ವೀಣೆಯನ್ನು ಕೊಟ್ಟರೂ ಅಚ್ಚುಕಟ್ಟುಗೊಳಿಸಿ ಒಳ್ಳೆಯ ನಾದ ಹೊಮ್ಮುವಂತೆ ಮಾಡುತ್ತಿದ್ದರು. ವೀಣೆಯ ಅಂತರಂಗವನ್ನು ಅರಿತಿದ್ದ ಅವರೊಬ್ಬ ವೀಣೆಯ ಡಾಕ್ಟರ್.’ ಎಂದು ಅವರು ಬಣ್ಣಿಸುತ್ತಾರೆ.

ಕೆಲವು ಸಮಯದ ಹಿಂದೆ ರಾಮಾನುಜ ರಸ್ತೆಯಲ್ಲಿರುವ ಅಂಗಡಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಗಂಗಾಧರ ಅವರು ಅಪಾರ ನಷ್ಟ ಅನುಭವಿಸಿದರು. ಈ ದುರ್ಘಟನೆ ಹಾಗೂ ಸಾಂಸಾರಿಕ ತಾಪತ್ರಯಗಳು ಅವರನ್ನು ಮಾನಸಿಕವಾಗಿ ಬಹಳ ಕುಗ್ಗಿಸಿಬಿಟ್ಟವು ಎಂದು ಆರ್.ಕೆ. ಪದ್ಮನಾಭ ನೆನಪಿಸಿಕೊಳ್ಳುತ್ತಾರೆ. ವಾದ್ಯಗಳ ರಚನೆಯ ಬಗ್ಗೆ ಗಂಗಾಧರ ಅವರು ಹೊಂದಿದ್ದ ಅಪಾರ ಅನುಭವ, ಜ್ಞಾನ ಮುಂದಿನ ಪೀಳಿಗೆಗೆ ದಾಟದೆ ಅವರೊಂದಿಗೇ ಮರೆಯಾಗಿಹೋಗಿದ್ದು ದುರದೃಷ್ಟಕರ.

ಮೃದಂಗದಲ್ಲಿ ಸೀನಿಯರ್ ಪೂರೈಸಿರುವ ಅವರ ಪುತ್ರ ರಾಜೇಶ್ ಖಾಸಗಿ ಸಂಸ್ಥೆಯೊಂದರಲ್ಲಿ ನೌಕರಿಯಲ್ಲಿದ್ದು ತಂದೆಯವರ ಕಸುಬನ್ನು ಮುಂದುವರೆಸುವ ಆಸಕ್ತಿ ಹೊಂದಿದ್ದಾರಾದರೂ ಅದಕ್ಕೆ ಸಾಕಷ್ಟು ತಯಾರಿ ಹಾಗೂ ಕಲಾವಿದರ ಪ್ರೋತ್ಸಾಹದ ಅವಶ್ಯಕತೆಯಿದೆ.
ಗಂಗಾಧರ ಅವರ ಹಠಾತ್ ನಿಧನದಿಂದ ತಮ್ಮೆಲ್ಲ ವಾದ್ಯಸಂಬಂಧೀ ವ್ಯವಹಾರಕ್ಕೆ ಅವರನ್ನೇ ನೆಚ್ಚಿಕೊಂಡಿದ್ದ ಮೈಸೂರಿನ ಬಹುತೇಕ ತಂತಿವಾದ್ಯ ಕಲಾವಿದರಿಗೆ ತೀವ್ರ ಆಘಾತವಾಗಿದೆ. ವಾದ್ಯ ತಯಾರಿಕೆ ಹಾಗೂ ನಿರ್ವಹಣೆಗೆ ಪರ್ಯಾಯ ಕಂಡುಕೊಳ್ಳುವುದೇ ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಚಿತ್ರಗಳು: ಟಿ.ಎಸ್.ವೇಣುಗೋಪಾಲ್, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.