ನಂಜನಗೂಡು: ‘ತಾಲ್ಲೂಕಿನ ಸುತ್ತೂರು ಕ್ಷೇತ್ರದಲ್ಲಿ ನಡೆಯುತ್ತಿ ರುವ 22ನೇ ಅಖಿಲ ಭಾರತ ವೀರಶೈವ ಮಹಾಸಭಾ ಅಧಿವೇಶನವು ಲಿಂಗಾಯಿತರ ಶಕ್ತಿ ಪ್ರದರ್ಶನ ಅಲ್ಲ. ಇಲ್ಲಿ ನಡೆದಿರುವುದು ಐಕ್ಯತೆಯ ಸಂಕೇತ’ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಡಾ.ಶಿವ ರಾಜ್ ವಿ.ಪಾಟೀಲ್ ಹೇಳಿದರು. ಸುತ್ತೂರಿನಲ್ಲಿ ಸೋಮವಾರ ನಡೆದ ಮಹಿಳಾ ಸಮಾವೇಶದ ಬಳಿಕ ಏರ್ಪಡಿಸಿದ್ದ ‘ವೀರಶೈವ -ಬಹುತ್ವದಲ್ಲಿ ಏಕತ್ವ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪತ್ರಿಕೆಯೊಂದರ ವರದಿ ಉಲ್ಲೇಖಿಸಿ ಮೇಲಿನಂತೆ ಸ್ಪಷ್ಟನೆ ನೀಡಿದರು. ಸಕಲ ಜೀವರಾಶಿಗಳ ಲೇಸನೆ ಬಯಸಿದ ವಿಶ್ವಮಾನವ ಧರ್ಮವೇ ವೀರಶೈವ ಧರ್ಮ. ಬಡವ-ಬಲ್ಲಿದ, ದಲಿತ-ಸವರ್ಣ ಹೀಗೆ ಎಲ್ಲ ವರ್ಗದವರನ್ನು ಒಂದುಗೂಡಿಸುವ ಕ್ರಾಂತಿಕಾರಿ ಪ್ರಯತ್ನ 12ನೇ ಶತಮಾನದಲ್ಲೇ ನಡೆಯಿತು ಎಂದು ಅವರು ಹೇಳಿದರು. 800 ವರ್ಷಗಳು ಕಳೆದರೂ ಅದರ ಅನುಷ್ಠಾನ ಪೂರ್ಣ ಪ್ರಮಾಣದಲ್ಲಿ ತರಲು ವೀರಶೈವ ಸಮಾಜದವರು ವಿಫಲರಾಗಿರುವುದು ವಿಪರ್ಯಾಸ.

‘ಇವನಾರವ, ಇವನಾರವ ಎನ್ನದೆ, ಇವ ನಮ್ಮವ, ಇವ ನಮ್ಮವ ಎನ್ನಿರಿ’ ಎಂದ ಬಸವಣ್ಣನವರ ವಚನವನ್ನು ಸಾಮಾನ್ಯವಾಗಿ ಎಲ್ಲ ವೇದಿಕೆಗಳಲ್ಲಿ ಉದಾಹರಿಸುತ್ತೇವೆ. ಆದರೆ ಎಷ್ಟು ಮಂದಿ ತಮ್ಮ ಗ್ರಾಮಗಳಿಗೆ ಹೋದಾಗ ಇದನ್ನು ಆಚರಣೆಗೆ ತರುತ್ತಾರೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.