ಮಂಗಳವಾರ, ಜನವರಿ 21, 2020
19 °C

ವೃಕ್ಷ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರಿಗೆ ಹಸಿರನ್ನು ಮರಳಿಸಲು ಆರು ಮಂದಿ ಬೆಂಗಳೂ­ರಿ­ಗರು ಕೈಜೋಡಿಸಿದ್ದು ನಗರವಾಸಿ­ಗಳಲ್ಲಿ ಪರಿಸರ ಕುರಿತು ಅರಿವು ಮೂಡಿಸಲು   ‘ನೆರಳು’ ವೃಕ್ಷ ಮಹೋತ್ಸವ ಆಯೋಜಿಸಿದ್ದಾರೆ. ನಗರದ ಪಾರಂಪರಿಕ ಪ್ರತಿನಿಧಿ­ಗಳಾಗಿದ್ದ ಮರಗಳ ಹೆಸರಿನಿಂದಲೇ ಗುರುತಿಸಲ್ಪಡುವ ಹುಳಿಮಾವು, ಹಲ­ಸೂರು ಮುಂತಾದ ಪ್ರದೇಶಗಳು ಬೆಂಗಳೂರಿನಲ್ಲಿವೆ.

  ಆದರೆ ಅಭಿ­ವೃದ್ದಿ, ಮೂಲಸೌಕರ್ಯದ ಹೆಸರಿ­ನಲ್ಲಿ ಕಳೆದ ಒಂದು ದಶಕದಲ್ಲಿ ನಗ­ರವು ಸಾಕಷ್ಟು ಮರಗಳನ್ನು ಕಳೆದು­ಕೊಂಡಿದೆ. ಒಂದು ವರ್ಷದಲ್ಲೆ 3000ಕ್ಕೂ ಹೆಚ್ಚು ಮರಗಳಿಗೆ ಬಿಬಿ­ಎಂಪಿ ಕೊಡಲಿ ಬೀಸಿದ್ದು ನಗರ­ದಲ್ಲಿ ಉಳಿದಿರುವ ಮರಗಳೆಷ್ಟು ಎಂಬ ಮಾಹಿತಿಯೂ ಪಾಲಿಕೆಯ ಬಳಿ ಇಲ್ಲ. 

ಕಾರ್ಯಕ್ರಮದ ಆಯೋಜಕ­ರಲ್ಲಿ ಒಬ್ಬರಾದ ಚಿತ್ರ ಕಲಾವಿದ ದೀಪಕ್ ಶ್ರೀನಿವಾಸನ್,  ‘ಈ ಹಿಂದೆ ಜನರು ಮರಗಳನ್ನು ತಮ್ಮ ಕುಟುಂಬದ ಸದಸ್ಯರೆಂಬಂತೆ ಪ್ರೀತಿಸು­ತ್ತಿ­ದ್ದರು. ಅವುಗಳು ನಮ್ಮದು ಎಂಬ ಭಾವನೆ ಅವರಲ್ಲಿತ್ತು. ಈಗ ಅಂತಹ ಭಾವನೆಗಳೆಲ್ಲಾ ಮರೆ­ಯಾ­ಗಿವೆ. ಮರ­­ಗಳೊಂದಿಗೆ ಸಂಬಂಧ ಹೊಂದಿ­ರದ ಅಪಾರ ಸಂಖ್ಯೆಯ ವಲಸಿಗರಿಗೆ ನೆರಳು ಕಾರ್ಯ­­ಕ್ರಮದಲ್ಲಿ ವೃಕ್ಷಗಳ ಬಗ್ಗೆ ಅರಿವು ಮೂಡಿಸಲಾಗುವುದು ’ ಎನ್ನುತ್ತಾರೆ. ಕಬ್ಬನ್ ಉದ್ಯಾನದಲ್ಲಿ ಫೆ. 8, 9ರಂದು ನಡೆಯಲಿ­ರುವ ನೆರಳು ವೃಕ್ಷ ಮಹೋತ್ಸದಲ್ಲಿ ಭಾಗ­ವಹಿಸಲು ಈಗಾಗಲೆ 80ಕ್ಕೂ ಹೆಚ್ಚು ಮಂದಿ ಆಸಕ್ತಿ ತೋರಿಸಿದ್ದಾರೆ.

ಪ್ರತಿಕ್ರಿಯಿಸಿ (+)