ಬುಧವಾರ, ಮೇ 12, 2021
26 °C

ವೃದ್ಧಾಪ್ಯ ಜೈವಿಕ ಬದಲಾವಣೆ ರೋಗವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ವೃದ್ಧಾಪ್ಯವು ಜೈವಿಕ ಬದಲಾವಣೆಯೇ ಹೊರತು ರೋಗವಲ್ಲ. ವೃದ್ಧಾಪ್ಯದ ಜೀವನವನ್ನೂ ವ್ಯವಸ್ಥಿತವಾಗಿ ರೂಪಿಸಿಕೊಳ್ಳಲು ಸಾಧ್ಯವಿದೆ~ ಎಂದು ಹಿರಿಯ ವೈದ್ಯ ಡಾ.ಬಿ.ಜಿ.ಚಂದ್ರಶೇಖರ್ ಹೇಳಿದರು.ನಗರದಲ್ಲಿ ಶನಿವಾರ ಸ್ಪಂದನ ಆಸ್ಪತ್ರೆಯು ವಿಶ್ವ ಆರೋಗ್ಯ ದಿನದ ಅಂಗವಾಗಿ ಆಯೋಜಿಸಿದ್ದ ಪುಸ್ತಕ ಮಳಿಗೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ವೈದ್ಯಲೋಕದ ಆವಿಷ್ಕಾರಗಳಿಂದಾಗಿ ವಯಸ್ಸಾದ ಕಾರಣದಿಂದ ಮರಣ ಹೊಂದುವವರ ಪ್ರಮಾಣವು ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ 60 ವರ್ಷ ಮೀರಿದವರ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗಲಿದೆ.

 

ಆಗ ವೃದ್ಧರ ಸೇವೆಯನ್ನೇ ಪಡೆದುಕೊಳ್ಳುವುದು ಸಮಾಜಕ್ಕೆ ಅನಿವಾರ್ಯವಾಗಲಿದೆ. ಹೀಗಾಗಿ ವೃದ್ಧಾಪ್ಯವನ್ನೂ ಸರಿಯಾಗಿ ನಿಭಾಯಿಸುವುದನ್ನು ಜನರು ಈಗಿಂದಲೇ ಅರಿಯಬೇಕು~ ಎಂದು ಅವರು ತಿಳಿಸಿದರು.

ವೈದ್ಯರಾದ ಡಾ.ವಿಶ್ವರೂಪಾಚಾರ್ ಮಾತನಾಡಿ, `ವೈದ್ಯರು ಚಿಕಿತ್ಸೆ ನೀಡುವ ಜೊತೆಗೇ ವೈದ್ಯ ಸಾಹಿತ್ಯ ರಚನೆಯ ಬಗ್ಗೆಯೂ ಆಸಕ್ತಿ ವಹಿಸಬೇಕು.ರೋಗಗಳು ಹಾಗೂ ಚಿಕಿತ್ಸೆಗಳ ಬಗ್ಗೆ ರೋಗಿಗಳಲ್ಲಿ ಅರಿವು ಮೂಡಿಸಲು ವೈದ್ಯರು ವೈದ್ಯ ಸಾಹಿತ್ಯದ ಓದು ಮತ್ತು ಬರವಣೆಗೆಯನ್ನು ರೂಡಿಸಿಕೊಳ್ಳಬೇಕು~ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ವೈದ್ಯ ವಿಜ್ಞಾನಕ್ಕೆ ಸಂಬಂಧಿಸಿದ ನಾಲ್ಕು ಕಿರು ಪುಸ್ತಿಕೆಗಳನ್ನು ಬಿಡುಗಡೆ ಮಾಡಲಾಯಿತು. ಆಸ್ಪತ್ರೆಯ ನಿರ್ದೇಶಕ ಡಾ.ಶ್ರೀನಿವಾಸ್, ವೈದ್ಯರಾದ ಡಾ.ಪ್ರಿಯ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.