ಶುಕ್ರವಾರ, ಮೇ 20, 2022
21 °C

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು: ಅಂಗನವಾಡಿ ಕಾರ್ಯಕರ್ತೆಯರಿಗೆ 10ಸಾವಿರ ಹಾಗೂ ಸಹಾಯಕಿಯರಿಗೆ 5 ಸಾವಿರ ರೂಪಾಯಿ ವೇತನ ಹೆಚ್ಚಳ ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಹಾಗೂ ಎಐಟಿಯುಸಿ ಶುಕ್ರವಾರ ತಹಶೀಲ್ದಾರ ಕಚೇರಿ ಎದುರು ಧರಣಿ ನಡೆಸಿದವು.ಸ್ಥಳೀಯ ಪ್ರವಾಸಿ ಮಂದಿರದಿಂದ ಮೆರವಣಿಗೆ ಮುಖಾಂತರ ತಹಶೀಲ್ದಾರ ಕಚೇರಿಗೆ ಆಗಮಿಸಿದ 500ಕ್ಕೂ ಅಧಿಕ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ತಹಶೀಲ್ದಾರ ಕಚೇರಿ ಮುಂದೆ ಧರಣಿ ನಡೆಸಿ ನಂತರ ತಹಶೀಲ್ದಾರ ಅನುಪಸ್ಥಿತಿಯಲ್ಲಿ ತಹಶೀಲ್ದಾರ ಕಚೇರಿಯ ಶಿರಸ್ತೇದಾರ ರಾಮಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಆಶ್ರಯ ಮನೆ ಕಲ್ಪಿಸಬೇಕು, ಮಿನಿ ಅಂಗನವಾಡಿ ಕೇಂದ್ರ ಮೇಲ್ದರ್ಜೆಗೇರಿಸಿ ಸಹಾಯಕಿರ ನೇಮಕ, ಆರೋಗ್ಯ ತಪಾಸಣೆ ಮಾಡಲು ಆರೋಗ್ಯ ಉಪಕೇಂದ್ರಗಳಿಗೆ ಬರುವ ಕಾರ್ಯಕರ್ತೆಯರಿಗೆ ಪ್ರವಾಸ ಭತ್ಯೆ, ಆನೆಕಾಲು ರೋಗದ ಮಾತ್ರೆ ಹಂಚಿದವರಿಗೆ ಗೌರವಧನ ನೀಡಬೇಕು, ಜನಗಣತಿ ಕಾರ್ಯ ಮಾಡಿದವರಿಗೆ ಗೌರವಧನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.ಫೆಡರೇಷನ್ ತಾಲ್ಲೂಕು ಅಧ್ಯಕ್ಷೆ ಗಿರಿಜಮ್ಮ, ಕಾರ್ಯದರ್ಶಿ ಸರಸ್ವತಿ, ರಾಜ್ಯ ಸಮಿತಿ ಸಂಚಾಲಕ ಎಂ.ತಿಪ್ಪೇಸ್ವಾಮಿ, ಕೆ.ಪ್ರಭಾವತಿ, ಮುಖಂಡರಾದ ವೆಂಕನಗೌಡ ಗದ್ರಟಗಿ, ಚಂದ್ರಶೇಖರ ಕ್ಯಾತನಟ್ಟಿ, ಯಮನಮ್ಮ ಮರಾಠ, ಅಮರಮ್ಮ, ತಾಯಮ್ಮ, ಶಿವಮ್ಮ ಉದ್ಬಾಳ, ಗೌರಮ್ಮ ಗುಡದೂರು, ಗಂಗಮ್ಮ, ಆರೋಗ್ಯಮ್ಮ ಜವಳಗೇರಾ, ಸುರೇಖಾ, ಯಂಕಮ್ಮ ಸಾಲಗುಂದಾ, ಈರಮ್ಮ ತುರ್ವಿಹಾಳ, ಅರಳಮ್ಮ ವಗರನಾಳ, ಲಲಿತಮ್ಮ, ಸುಧಾ ಆರ್.ಎಚ್.ನಂ.2, ಗೌರಮ್ಮ, ಈರಮ್ಮ ಬಾದರ್ಲಿ, ಮೌಲಾಬೀ, ಅಂಬಮ್ಮ ರಾಗಲಪರ್ವಿ, ಶಂಶುನ್ನಿಸಾ ಬೇಗಂ, ಅನ್ನಪೂರ್ಣ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.