ವೇವ್ರೈಡರ್ಸ್ಗೆ ಜಯ

ಲಖನೌ (ಪಿಟಿಐ): ಗೆಲುವಿನ ಓಟ ಮುಂದುವರಿಸಿರುವ ದೆಹಲಿ ವೇವ್ ರೈಡರ್ಸ್ ನಾಲ್ಕನೇ ಆವೃತ್ತಿಯ ಹಾಕಿ ಇಂಡಿಯಾ ಲೀಗ್ ಟೂರ್ನಿಯಲ್ಲಿ ಶನಿ ವಾರ 3–1ರಲ್ಲಿ ಉತ್ತರಪ್ರದೇಶ ವಿಜರ್ಡ್ಸ್ ಎದುರು ಜಯಗಳಿಸಿದೆ.
ಈ ಗೆಲುವಿನೊಂದಿಗೆ ವೇವ್ ರೈಡರ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರಿದೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ವೇವ್ರೈಡರ್ಸ್ ತಂಡ ಪಂಜಾಬ್ ವಾರಿಯರ್ಸ್ ಎದುರು 5–4 ಗೋಲುಗಳಿಂದ ಜಯಗಳಿಸಿತ್ತು.
ಮೊದಲರ್ಧದಲ್ಲಿ ಗೋಲು ಗಳಿಸಲು ಉಭಯ ತಂಡಗಳು ಸಾಕಷ್ಟು ಪ್ರಯತ್ನಿ ಸಿದವು. 42ನೇ ನಿಮಿಷದಲ್ಲಿ ವೇವ್ ರೈಡರ್ಸ್ ತಂಡದ ರೂಪಿಂದರ್ ಪಾಲ್ ಸಿಂಗ್ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ವಿಜರ್ಡ್ಸ್ ತಂಡದ ಗೋಲ್ಕೀಪರ್ ಪಿ.ಆರ್ ಶ್ರೀಜೇಶ್ ಅವರ ಕಣ್ತಪ್ಪಿಸಿ ಗೋಲು ಗಳಿಸಿ ಮಿಂಚಿದರು.
59ನೇ ನಿಮಿಷದಲ್ಲಿ ವಾರಿಯರ್ಸ್ ತಂಡದ ಅದೃಷ್ಟ ಬದಲಾಯಿತು. ಕಿವಿ ಸ್ರೆವೆನ್ ಎಡ್ವರ್ಡ್ ಅವರು ಫೀಲ್ಡ್ ಗೋಲು ಗಳಿಸಿ ತಂಡದ ಮುನ್ನಡೆಯನ್ನು 3–0ಗೆ ಹೆಚ್ಚಿಸಿದರು. ಪಂದ್ಯದ ಅಂತಿಮ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ವಿಜರ್ಡ್ಸ್ ತಂಡದ ಅರ್ಜೆಂಟೀನಾದ ಆಟಗಾರ ಗೊಂಜಲೊ ಪಿಲಟ್ ಗೋಲು ಗಳಿಸಿ ಅಂತರ ತಗ್ಗಿಸಿದರು.
ಮೂರು ಪಂದ್ಯ ಆಡಿರುವ ವಿಜರ್ಡ್ಸ್ ಏಳು ಪಾಯಿಂಟ್ಸ್ಗಳಿಂದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಜನವರಿ 25ರಂದು ಕಳಿಂಗ ಲ್ಯಾನ್ಸರ್ಸ್ ಎದರು ಆಡಲಿದೆ. ವೇವ್ರೈಡರ್ಸ್ ರಾಂಚಿಯಲ್ಲಿ ಜನವರಿ 26ರಂದು ರಾಂಚಿ ರಾಯ್ಸ್ ಸವಾಲು ಎದುರಿಸಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.