ಗುರುವಾರ , ಮೇ 13, 2021
25 °C

ವೈದ್ಯಕೀಯ ಕೋರ್ಸ್:12ರಿಂದ ಕೌನ್ಸೆಲಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತವೈದ್ಯಕೀಯ    ಕೋರ್ಸ್‌ಗಳಿಗೆ ಸರ್ಕಾರಿ ಕೋಟಾದ ಅಡಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಮೇ 12ರಿಂದ ಕೌನ್ಸೆಲಿಂಗ್ ಆರಂಭವಾಗುವ ಸಾಧ್ಯತೆ ಇದೆ.ದಂತವೈದ್ಯಕೀಯ ಸೀಟುಗಳಿಗೆ ಮೊದಲ ಸುತ್ತಿನ ಕೌನ್ಸೆಲಿಂಗ್ ಮೇ 12ರಂದು ನಡೆಯಲಿದೆ. ವೈದ್ಯಕೀಯ ಸೀಟುಗಳಿಗೆ 14ರಿಂದ 17ರವರೆಗೆ ಕೌನ್ಸೆಲಿಂಗ್ ನಡೆಯಲಿದೆ. ದಂತವೈದ್ಯಕೀಯ ಸೀಟುಗಳಿಗೆ ಮೇ 24ರಂದು ಎರಡನೆಯ ಸುತ್ತಿನ ಕೌನ್ಸೆಲಿಂಗ್ ಮತ್ತು 25 ಹಾಗೂ 26ರಂದು ವೈದ್ಯಕೀಯ ಸೀಟುಗಳಿಗೆ ಎರಡನೆಯ ಸುತ್ತಿನ ಕೌನ್ಸೆಲಿಂಗ್ ನಡೆಯಲಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಜಿ.ಎಸ್. ವೆಂಕಟೇಶ್ ತಿಳಿಸಿದರು.

`ಕಾಮೆಡ್-ಕೆ~ ಸಂಯೋಜಿತ ಕಾಲೇಜುಗಳಿಗೆ ಮೇ 18ರಿಂದ 20ರವರೆಗೆ ಮೊದಲ ಸುತ್ತಿನ ಕೌನ್ಸೆಲಿಂಗ್ ಹಾಗೂ 27 ಮತ್ತು 28ರಂದು ಎರಡನೆಯ ಸುತ್ತಿನ ಕೌನ್ಸೆಲಿಂಗ್ ನಡೆಯಲಿದೆ.ರಾಜ್ಯ ಧಾರ್ಮಿಕ ಮತ್ತು ಭಾಷಿಕ ಅಲ್ಪಸಂಖ್ಯಾತರ ವೃತ್ತಿಪರ ಕಾಲೇಜುಗಳ ಸಂಘ 21 ಮತ್ತು 22ರಂದು ಕೌನ್ಸೆಲಿಂಗ್ ನಡೆಸಲಿದೆ ಎಂದು ವೆಂಕಟೇಶ್ ಅವರು ತಿಳಿಸಿದರು.ಸರ್ವಸಮ್ಮತ ಒಪ್ಪಂದಕ್ಕೆ ಅಂಕಿತ ಮತ್ತು ಅಂಗವಿಕಲರಿಗೆ ಮೀಸಲಾತಿ ಕುರಿತ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣವೊಂದರ ಕುರಿತು ಬರುವ ತೀರ್ಪಿನ ಆಧಾರದ ಮೇಲೆ ಈ ದಿನಾಂಕಗಳನ್ನು ಅಂತಿಮಗೊಳಿಸಲಾಗುವುದು ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಎಚ್. ಗೋಪಾಲಕೃಷ್ಣೇಗೌಡ ತಿಳಿಸಿದರು. ವೈದ್ಯಕೀಯ ಮತ್ತು ದಂತವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕದಲ್ಲಿ ಶೇಕಡ 10ರಷ್ಟು ಹೆಚ್ಚಳ ಆಗಲಿದೆ. ಈ ಪ್ರಸ್ತಾವನೆಗೆ ಮಾರ್ಚ್ 31ರಂದು ಮುಖ್ಯಮಂತ್ರಿ  ಸದಾನಂದ ಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.