ಮಂಗಳವಾರ, ಮೇ 11, 2021
20 °C

ವೈಮಾನಿಕ ರೇಡಾರ್ ಯಶಸ್ವಿ ಪ್ರಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ರಾಷ್ಟ್ರವು ದೇಶೀಯವಾಗಿ ನಿರ್ಮಿಸಿರುವ ಎರಡನೇ ವೈಮಾನಿಕ ರೇಡಾರ್‌ನ ಪರೀಕ್ಷಾರ್ಥ ಪ್ರಯೋಗ ಗುರುವಾರ ಯಶಸ್ವಿಯಾಗಿ ನಡೆಯಿತು.ಭಾರತದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು ಬ್ರೆಜಿಲ್‌ನ ಎಂಬ್ರೇಯರ್ ವಿಮಾನಕ್ಕೆ ಅಳವಡಿಸಿ ಅಭಿವೃದ್ಧಿಪಡಿಸಿರುವ ಈ ರೇಡಾರ್‌ಅನ್ನು ಬ್ರೆಜಿಲ್‌ನ ಸ್ಯಾನ್ ಜೋಸ್ ಡಾಸ್ ಕ್ಯಾಂಪಸ್‌ನಲ್ಲಿ ಪರೀಕ್ಷಿಸಲಾಯಿತು.ವಿಮಾನಕ್ಕೆ ಜೋಡಿಸಲಾಗಿರುವ ಈ ರೇಡಾರ್ `ಆಕಾಶದ ಕಣ್ಣು~  ಎಂದೇ ಹೆಸರಾಗಿದೆ. ಶತ್ರುಪಡೆಯ ವಿಮಾನಗಳೆಡೆಗೆ ಮಾತ್ರವಲ್ಲದೆ ಮುನ್ನುಗ್ಗಿ ಬರುವ ಕ್ಷಿಪಣಿಗಳು ಹಾಗೂ ಶತ್ರುಪಡೆ ಯೋಧರ ಚಲನವಲನಗಳ ಬಗ್ಗೆಯೂ ಇದು ಎಚ್ಚರಿಕೆ ನೀಡುತ್ತದೆ ಎಂದು ಡಿಆರ್‌ಡಿಒ ಮೂಲಗಳು ಹೇಳಿಕೊಂಡಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.