ಶ್ರೀ ಸದ್ಗುರು ಮ್ಯೂಸಿಕ್ ಅಕಾಡೆಮಿ: ಶ್ರೀ ಶಿವರಾತ್ರೀಶ್ವರ ಕೇಂದ್ರ, 8ನೇ ಬಡಾವಣೆ, ಜಯನಗರ. ಶತಗಾಯನ ಸಂಗೀತೋತ್ಸವ. ರಾಗಮಾಲಿಕೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ. ಸಾನಿಧ್ಯ: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಆರ್ಟ್ ಆಫ್ ಲಿವಿಂಗ್ನ ರವಿಶಂಕರ ಗುರೂಜಿ. ಉಪಸ್ಥಿತಿ: ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗೊ.ರು. ಚನ್ನಬಸಪ್ಪ, ಹಿಂದೂಸ್ತಾನಿ ಗಾಯಕ ಪರಮೇಶ್ವರ ಹೆಗಡೆ. ರಾಗಮಾಲಿಕೆ: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹನ್ನೊಂದು ರಾಗಗಳ ಪ್ರಸ್ತುತಿ ನೂರು ಕಲಾವಿದರಿಂದ. ಪರಿಕಲ್ಪನೆ– ನಿರ್ದೇಶನ: ಸ್ನೇಹಾ ಹಂಪಿಹೊಳಿ.
ವಾದ್ಯ ಸಹಕಾರ: ವೆಂಕಟೇಶ್ ಅಲ್ಕೋಡ್, ಕೆ.ಆರ್. ಸತ್ಯಮೂರ್ತಿ, ಹನುಮಂತ ಕಾರಟಗಿ ವೆಂಕಟೇಶ್ ಪುರೋಹಿತ್. ಅಲಂಕೃತಾ ನೃತ್ಯ ತಂಡದವರಿಂದ ನೃತ್ಯರೂಪಕ. ಭಾನುವಾರ ಸಂಜೆ 5.30.

ಶತಗಾಯನ ಕುರಿತು: ‘ಒಂದೇ ಸೂರು ಗಾಯನ ನೂರು’ ಎಂಬ ಶೀರ್ಷಿಕೆಯ ಅಡಿಯಲ್ಲಿ ನಡೆಯುವ ಈ ಗಾಯನ ಕಾರ್ಯಕ್ರಮದಲ್ಲಿ ಆರರಿಂದ ಅರವತ್ತು ವರ್ಷದವರೆಗಿನ ನೂರು ಕಲಾವಿದರು ಭಾಗವಹಿಸಲಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಂಗವಾದ ರಾಗಮಾಲಿಕೆಯನ್ನು ಪ್ರಸ್ತುತಪಡಿಸಿ ದಾಖಲೆ ಸೃಷ್ಟಿಸುವ ಹುಮ್ಮಸ್ಸಿನಲ್ಲಿದ್ದಾರೆ ಕಲಾವಿದರು.

ಒಂದು ರಾಗದಿಂದ ಇನ್ನೊಂದು ರಾಗಕ್ಕೆ ಕ್ಷಣಮಾತ್ರದಲ್ಲಿ ಸುಲಲಿತವಾಗಿ ಸಂಚರಿಸುವಂತೆ ಸ್ವರ ಜೋಡಣೆ ಮಾಡಿ ರಾಗದೊಳಗೊಂದು ರಾಗ ಬರುವುದೇ ರಾಗಮಾಲಿಕೆಯ ವಿಶೇಷತೆ. ಸ್ನೇಹಾ ಹಂಪಿಹೊಳಿ ರಾಗಮಾಲಿಕೆಯಲ್ಲಿರುವ ಪ್ರತಿ ಹನ್ನೊಂದು ರಾಗಕ್ಕೂ ಸ್ವರ ಆಲಾಪ, ತಾನ್ಗಳನ್ನು ಸಿದ್ಧಪಡಿಸಿದ್ದಾರೆ.

ರಾಗ ವೈಭವ, ದೇವಗಾಂಧಾರ, ಮಾಲಕೋಂಸ್, ಬಾಗೇಶ್ರೀ, ಮುಲ್ತಾನಿ, ಹಮೀರ್, ಜೈಜೈವಂತಿ, ದುರ್ಗಾ, ಬಹಾರ, ಬಸಂತ, ದೇಸ್ ರಾಗಗಳನ್ನು ರಾಗಬದ್ಧ, ಶ್ರುತಿ, ತಾಳಬದ್ಧವಾಗಿ ಹಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.