ಶಾಂತಿಗಿರಿ ಆಶ್ರಮ ಧಾರ್ಮಿಕ ಚಟುವಟಿಕೆಗಳ ಜತೆ ಜತೆಗೇ ಆರೋಗ್ಯ ರಕ್ಷಣೆಗಾಗಿ ಆಯುರ್ವೇದ, ಭಾರತೀಯ ವೈದ್ಯ ಪದ್ಧತಿಗಳ ಪ್ರಚಾರದಲ್ಲಿಯೂ ತೊಡಗಿಸಿಕೊಂಡಿದೆ.

ಆಡುಗೋಡಿ ಬಳಿ ಆಯುರ್ವೇದ ಆಸ್ಪತ್ರೆ ನಡೆಸುತ್ತಿದೆ. ಕೇರಳದಲ್ಲಿರುವ ಆಶ್ರಮದ ಭೂಮಿಯಲ್ಲಿ ಗಿಡ ಮೂಲಿಕೆಗಳನ್ನು ಬೆಳೆದು ಔಷಧಗಳನ್ನು ತಯಾರಿಸುತ್ತಿದೆ.

ತನ್ನ ಪ್ರಚಾರ ಅಭಿಯಾನದ ಅಂಗವಾಗಿ ಅದು ಯಲಹಂಕದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಆವರಣದಲ್ಲಿ ಆಯುರ್ವೇದ ಕಾರ್ಯಾಗಾರ ಆಯೋಜಿಸಿತ್ತು. ಇದೇ ಸಂದರ್ಭದಲ್ಲಿ ಬಿಎಸ್ಎಫ್ ಯೋಧರು ಔಷಧೀಯ ಮಹತ್ವದ ಸಸಿಗಳನ್ನು ನೆಟ್ಟರು,

`ಆಯುರ್ವೇದ- ಆರೋಗ್ಯಕರ ಜೀವನ~ ಎಂಬ ವಿಷಯದ ಬಗ್ಗೆ ನಡೆದ ಪ್ರಶ್ನೋತ್ತರದಲ್ಲಿ ಶಾಂತಿಗಿರಿ ಆಸ್ಪತ್ರೆಯ ವೈದ್ಯೆ ಡಾ. ಮಿನಿ ನಾಯರ್ ಮತ್ತು ಜ್ಞಾನತಪಸ್ವಿ ಸ್ವಾಮೀಜಿ ಅವರು ಯೋಧರ ಸಂದೇಹಗಳಿಗೆ ಉತ್ತರಿಸಿದರು. ಕೇಂದ್ರದ ಡಿಐಜಿ ಐ.ವಿ. ಐಪೆ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.